ಸ್ವಂತ ಖರ್ಚಿನಿಂದ ತೆರವು ಕಾರ್ಯಕ್ಕೆ ಮುಂದಾದ ಯುವಕರು
Team Udayavani, Jun 21, 2018, 6:25 AM IST
ಮಲ್ಪೆ: ಕಡಿದ ಮರದ ತುಂಡುಗಳು ರಸ್ತೆಯ ಬದಿಯ ಅಂಚನ್ನು ಚಾಚಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದು ಇದನ್ನು ಮನಗಂಡ ಸ್ಥಳೀಯ ಯುವಕರು ಬೃಹತ್ ಗಾತ್ರದ ಮರದ ತುಂಡನ್ನು ಹಿಟಾಚಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಕಳೆದ ಮೂರು ವಾರದ ಹಿಂದೆ ಸುರಿದ ಮಳೆಗೆ ಕಲ್ಮಾಡಿ ಮುಖ್ಯ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ಅದನ್ನು ನಗರಸಭೆಯ ವತಿಯಿಂದ ಕಡಿದು ತೆರವುಗೊಳಿಸಲಾಗಿತ್ತು. ಆದರೆ ಕಡಿದ ಮರದ ತುಂಡುಗಳು ಮಾತ್ರ ರಸ್ತೆಯಲ್ಲೇ ಬಾಕಿ ಉಳಿದಿದ್ದವು. ರಸ್ತೆಗೆ ಚಾಚಿಕೊಂಡಿದ್ದ ಮರದ ತುಂಡುಗಳು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದವು. ಮರದ ಚೂಪಾದ ಭಾಗಗಳು ರಸ್ತೆಯ ಬದಿಯಲ್ಲಿ ಸಾಗುವ ದ್ವಿಚಕ ವಾಹನ ಸಾವಾರಿಗೆ ತಾಗಿ ಅನಾಹುತಗಳು ನಡೆಯುತ್ತಿದ್ದವು.ಈ ಬಗ್ಗೆ ನಾಗರಿಕರು ಹಲವು ಬಾರಿ ನಗರಸಭೆಗೆ ದೂರಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಮಾಡಿಯ ಸ್ಥಳೀಯ ಯುವಕರು ಸುಂದರ್ ಜೆ. ಕಲ್ಮಾಡಿ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಹಿಟಾಚಿ ಮೂಲಕ ಮರದ ತುಂಡುಗಳನ್ನು ತೆರವುಗೊಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮನವಿಗೆ ಸ್ಪಂದಿಸಲಿಲ್ಲ
ರಸ್ತೆ ಬದಿಯ ಮರವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದೇªವೆ. ಯಾವ ಸ್ಪಂದನೆಯೂ ದೊರೆಯದಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ಸ್ವಂತ ಖರ್ಚು ಹಾಕಿ ಈ ಕಾರ್ಯಕ್ಕೆ ಮುಂದಾಗಿದೇªವೆ.
– ಸುಂದರ್ ಜೆ. ಕಲ್ಮಾಡಿ,ಸಮಾಜ ಸೇವಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.