ಯುವಕರ ಅಪಹರಿಸಿ ತಂಡದಿಂದ ಹಲ್ಲೆ : ಆರು ಆರೋಪಿಗಳ ಬಂಧನ
Team Udayavani, Oct 31, 2017, 10:10 AM IST
ಶಿರ್ವ: ಕುರ್ಕಾಲು ಗ್ರಾಮದ ನೂಜಿ ಬಳಿಯಿಂದ ರವಿವಾರ ಸಂಜೆ ಯುವಕರಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ಆರು ಮಂದಿ ಆರೋಪಿಗಳನ್ನು ಶಿರ್ವ ಪೋಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೋಮವಾರ ಬಂಧಿಸಿದ್ದು , ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆಯ ವಿವರ
ಶಿವಪ್ರಸಾದ್ ಮತ್ತು ಮಂಜುನಾಥ್ ಎಂಬ ಯುವಕರಿಬ್ಬರು ರವಿವಾರ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಆರೋಪಿಗಳ ಪೈಕಿ ದೀಪಕ್ ಮತ್ತು ದೀಕ್ಷಿತ್ ಎಂಬಿಬ್ಬರು ಬೈಕ್‌ನಲ್ಲಿ ಬಂದು ಮಣಿಪುರ ಗುಜ್ಜಿ ಬಳಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು. ಬಳಿಕ ಸಂಜೆ 7ರ ವೇಳೆಗೆ ಇತರ 8 ಆರೋಪಿಗಳೊಡನೆ ಅಕ್ರಮ ಕೂಟ ಕಟ್ಟಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದು ಕುರ್ಕಾಲು ಗ್ರಾಮದ ನೂಜಿಯಿಂದ ಶಿವಪ್ರಸಾದ್ ಮತ್ತು ಮಂಜುನಾಥ್ ಅವರನ್ನು ಅಪಹರಿಸಿ ಅಲೆವೂರು ಶಾಲೆಯ ನೆಹರೂ ಮೈದಾನಕ್ಕೆ ಕರೆದುಕೊಂಡು ಹೋಗಿ ಮರದ ರೀಪಿನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿಯಂತೆ ಕಾರ್ಯಾಚರಣೆಗಿಳಿದ ಶಿರ್ವ ಪೊಲೀಸರು ಅಲೆವೂರು ಮೂಕಾಂಬಿಕಾ ನಗರ ವಿ-4ಲೇಔಟ್ ಬಳಿಯಿಂದ ಆರೋಪಿಗಳಾದ ಮಣಿಪುರ ಮೂಡಬೆಟ್ಟುವಿನ ದೀಪಕ್(19),ಮೂಡುಅಲೆವೂರು ಕಂಬಳಕಟ್ಟೆ ಯ ದೀಪಕ್(20),ಕೊರಂಗ್ರಪಾಡಿ ಕೆಮೂ¤ರಿನ ಸುಮಂತ್(20)ಕೊರಂಗ್ರಪಾಡಿಯ ಸತ್ಯರಾಜ್(23),ಮಣಿಪುರ ಮೂಡಬೆಟ್ಟುವಿನ ಮುನ್ನಾ ಆಲಿಯಾಸ್ ನಿತೇಶ್(28),ದೆಂದೂರುಕಟ್ಟೆಯ ಉಜ್ವಲ್(19)ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಉಳಿದ ನಾಲ್ವರು ಆರೋಪಿಗಳಾದ ಗುರು, ಸಂದೀಪ್, ಸುಜೀತ್ ಮತ್ತು ಪ್ರಿತೇಶ್ ತಲೆಮರೆಸಿಕೊಂಡಿದ್ದಾರೆ.ತಲೆ ಮರೆಸಿಕೊಂಡಿರುವ ಆರೋಪಿ ಗುರು ಈಗಾಗಲೇ ಕೊಲೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.ಆರೋಪಿಗಳಿಂದ ವಿವಿಧ ಕಂಪೆನಿಯ 4 ಮೋಟಾರ್ ಸೈಕಲ್‌ಗಳು, 8 ಮೊಬೈಲ್ ಸೆಟ್ ಹಾಗೂ ಕೃತ್ಯಕ್ಕೆ ಬಳಸಿದ 2 ಮರದ ರೀಪುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಪು ವೃತ್ತನಿರೀಕ್ಷಕ ವಿ.ಎಸ್.ಹಾಲಮೂರ್ತಿ ರಾವ್ ಅವರ ನಿರ್ದೇಶದಂತೆ ಶಿರ್ವ ಪಿಎಸ್‌ಐ ನರಸಿಂಹ ಶೆಟ್ಟಿ , ಹೆಡ್‌ಕಾನ್‌ಸ್ಟೆಬಲ್‌ಗಳಾದ ನಾರಾಯಣ, ದಾಮೋದರ, ಉಮೇಶ್,ಪಿಸಿಗಳಾದ ಶಿವಾನಂದ್,ಅಂಡಪ್ಪ ಹಾಗೂ ಪ್ರಕಾಶ್ ಕಾರ್ಯಾಚರಣೆ ನಡೆಸಿದ್ದರು.
ಮಾಹಿತಿದಾರನಿಗೆ ಎಸ್‌ಪಿ ನಗದು ಬಹುಮಾನ
ಉಡುಪಿ: ಅಪಹರಣ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಚಲನವಲನದ ಬಗ್ಗೆ ಎಸ್‌ಪಿ ಡಾ| ಸಂಜೀವ ಎಂ.ಪಾಟೀಲ್ ಅವರಿಗೆ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದಾರೆ. ಎಸ್‌ಪಿ ನಿರ್ದೇಶನದಂತೆ ಕಾಪು ವೃತ್ತದ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಮಾಹಿತಿದಾರನಿಗೆ ಎಸ್‌ಪಿಯವರು 5 ಸಾವಿರ ರೂ. ನಗದು ಘೋಷಿಸಿದ್ದಾರೆ. ಅದರೊಂದಿಗೆ ಪ್ರಶಂಸನಾ ಪತ್ರವನ್ನೂ ನೀಡಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಸಾರ್ವಜನಿಕರು ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇರಿಸಿ ಮಾಹಿತಿ ನೀಡಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರು ಇದೇ ರೀತಿ ಸಹಕರಿಸಿದಲ್ಲಿ ಕಾನೂನು ಸುವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಎಂದು ಎಸ್‌ಪಿ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.