ಹಡಿಲು ಬಿದ್ದ ಗದ್ದೆ ನಾಟಿ ಮಾಡಿದ ಯುವಕರು
ಮಣಿಪುರ ವೆಸ್ಟ್ : ಸಾರ್ವಜನಿಕ ಗಣೇಶೋತ್ಸವ ಸಮಿತಿ
Team Udayavani, Jul 16, 2019, 5:21 AM IST
ಕಟಪಾಡಿ: ಮಣಿಪುರ ವೆಸ್ಟ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇವರ ವತಿಯಿಂದ ಶ್ರೀ ಅದಮಾರು ಮಠದ ರಸ್ತೆಯ ಪಕ್ಕದಲ್ಲಿರುವ ಹಡಿಲು ಬಿದ್ದಿದ್ದ ತಾಳಿಬಳ್ಳಿ ಗದ್ದೆಯಲ್ಲಿ ಭತ್ತದ ಸಸಿ (ನೇಜಿ) ನಾಟಿ ಕಾರ್ಯಕ್ರಮವು ಜು.14ರಂದು ನಡೆಯಿತು.
ಚಿತ್ರನಟ, ನಿರ್ಮಾಪಕ ಸೂರ್ಯೋ ದಯ ಪೆರಂಪಳ್ಳಿ ಈ ಬಗ್ಗೆ ಪ್ರತಿಕ್ರಿಯಿಸಿ, ಎಳೆಯರನ್ನೂ ಕೂಡಿಕೊಂಡು ಧಾರ್ಮಿಕ ಸಂಘಟನೆಯು ತಮ್ಮ ಬಳಕೆಯ ಅನಂತರದಲ್ಲಿ ಹಡೀಲು ಬಿದ್ದಿರುವ ಗದ್ದೆಯನ್ನು ಬಳಸಿಕೊಂಡು ನೇಜಿ ನಾಟಿ ನಡೆಸುತ್ತಿರುವುದು ತುಳುನಾಡಿನ ಹೆಮ್ಮೆ. ಆ ಮೂಲಕ ಸಮಗ್ರವಾಗಿ ಬೇಸಾಯದ ಗದ್ದೆಯೊಡನೆ ಬಾಂಧವ್ಯವನ್ನು ಬೆಸೆಯುವ ಕೆಲಸ ಇಲ್ಲಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಈ ಸಂದರ್ಭ ಮಣಿಪುರ ವೆಸ್ಟ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶೇಖರ್ ಕಲ್ಮಂಜೆ, ಕಾರ್ಯದರ್ಶಿ ಶ್ರೀಕಾಂತ್ ಸನಿಲ್, ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಸೇರಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.