ಉಡುಪಿ: ಮೊದಲ ಬಾರಿ ಯುವ ವಿನಿಮಯ
Team Udayavani, Dec 11, 2018, 10:09 AM IST
ಉಡುಪಿ: ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಸಂಘಟನೆ ವತಿಯಿಂದ “ಏಕ್ ಭಾರತ್‌ಶ್ರೇಷ್ಠ ಭಾರತ್’ ಪರಿಕಲ್ಪನೆಯ ಅಂಗವಾಗಿ ಅಂತಾರಾಜ್ಯ ಯುವ ವಿನಿಮಯ ಕಾರ್ಯಕ್ರಮವನ್ನು ಉಡುಪಿಯ ಬ್ರಹ್ಮಗಿರಿ ಪ್ರಗತಿ ಸೌಧದಲ್ಲಿ ಸೋಮವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು.
ಉಡುಪಿ ಜಿಲ್ಲೆಯಲ್ಲಿ ಆಯೋಜಿಸಲಾದ ಯುವ ವಿನಿಮಯ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ಹಿಂದೆ ಕ್ರೀಡಾ ಇಲಾಖೆಯಿಂದ ಆಯೋಜಿಸಲ್ಪಟ್ಟ ರಾಜ್ಯಮಟ್ಟದ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿಯೇ ನನಗೆ ನಾಯಕತ್ವದ ಮಾರ್ಗದರ್ಶನ ದೊರೆಯಿತು. ಅದನ್ನು ಇಂದಿನವರೆಗೂ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಯುವ ವಿನಿಮಯ ಕಾರ್ಯಕ್ರಮದಲ್ಲಿಯೂ ಯುವಜನತೆ ತಾವು ಗಮನಿಸುವ ಉತ್ತಮ ಅಂಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಯುವಜನತೆ ಇಡೀ ದೇಶದ ಬಗ್ಗೆ ಚಿಂತಿಸುವುದಕ್ಕೂ ಅವಕಾಶ ಮಾಡಿಕೊಡುತ್ತವೆ ಎಂದು ದಿನಕರ ಬಾಬು ಕಿವಿಮಾತು ಹೇಳಿದರು.
ನೆಹರೂ ಯುವಕೇಂದ್ರದ ರಾಜ್ಯ ನಿರ್ದೇಶಕ ಸುನಿಲ್ ಮಲಿಕ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಾಗೇಶ್ ರಾಯ್ಕರ್, ಕಾರ್ಪೊರೇಷನ್ ಬ್ಯಾಂಕ್ ಉಡುಪಿ ವಲಯ ಉಪಮಹಾಪ್ರಬಂಧಕಿ ಡೇಲಿಯಾ ಎ. ಡಯಾಸ್, ರಾಷ್ಟ್ರೀಯ ಸ್ವಸಹಾಯ ಗುಂಪು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್, ಶ್ರೀ ಕ್ಷೇತ್ರ ಧ.ಗ್ರಾ. ಯೋಜನಾಧಿಕಾರಿ ಮಮತಾ ಭಟ್ ಉಪಸ್ಥಿತರಿದ್ದರು. ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫೆಡ್ ಸ್ವಾಗತಿಸಿದರು. ಉಪನ್ಯಾಸಕಿ ಪುರೋಭಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan: ಕಾಂಗ್ರೆಸ್ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು
Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ
Yamuna ನದಿಯಲ್ಲಿ ಡಾ| ಮನಮೋಹನ್ ಸಿಂಗ್ ಚಿತಾಭಸ್ಮ ವಿಸರ್ಜನೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.