ಮುಂಡಗೋಡಲ್ಲಿ ಮಳೆಗೆ 143 ಹೆಕ್ಟೇರ್ ಬೆಳೆ ಹಾನಿ
Team Udayavani, Nov 11, 2024, 6:03 PM IST
ಉದಯವಾಣಿ ಸಮಾಚಾರ
ಮುಂಡಗೋಡ: ವಾಯುಭಾರ ಕುಸಿತದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಗೋವಿನಜೋಳ ಹಾಗೂ ಭತ್ತ ಸೇರಿ 143 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಇತ್ತೀಚೆಗೆ ಹಿಂಗಾರು ಮಳೆಯಿಂದಾಗಿ ಗೋವಿನಜೋಳಕ್ಕೆ ಹಾನಿಯಾದರೆ ಮತ್ತೊಂದು ಕಡೆ ಶೇ.30ರಷ್ಟು ಭತ್ತದ ತೆನೆಗಳು ನೀರಿನ
ಹೊಡೆತಕ್ಕೆ ಬಿದ್ದಿವೆ. ತಾಲೂಕಿನಲ್ಲಿ ಒಟ್ಟು 6500 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿತ್ತು. ಈಗಾಗಲೇ ಗೋವಿನ ಜೋಳದ ತೆನೆಗಳು ಶೇ.80-90ರಷ್ಟು ಕಟಾವು ಆಗಿದ್ದರೆ, ಕೆಲವರು ಕಾಳುಗಳನ್ನು ಬೇರ್ಪಡಿಸಿ ಖಾಲಿ ಇರುವ ಜಾಗಗಳಲ್ಲಿ ಹಾಗೂ ರಸ್ತೆಯ ಅಕ್ಕ-ಪಕ್ಕದಲ್ಲಿ ಬಿಸಿಲಿಗೆ ಹಾಕಿ ಒಣಗಿಸಲು ಹರಸಾಹಸಪಟ್ಟಿದ್ದಾರೆ. 5950 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಮಾಡಲಾಗಿತ್ತು. ಶೇ.30-40ರಷ್ಟು ಈವರೆಗೆ ಕಟಾವು ಮಾಡಿದ್ದರೆ, ಮಿಕ್ಕ ಬೆಳೆ ಕಟಾವಿಗೆ ರೈತರು ಸಜ್ಜಾಗಿದ್ದಾರೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಗೋವಿನಜೋಳಕ್ಕೆ ಅಪಾರ ಹಾನಿಯಾಗಿದೆ.
ಸದ್ಯ ಕೃಷಿ ಇಲಾಖೆಯ ವರದಿ ಪ್ರಕಾರ ತಾಲೂಕಿನಲ್ಲಿ ಸುಮಾರು 143 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ ಗೋವಿನಜೋಳ
ಬೆಳೆದ ಪ್ರದೇಶದಲ್ಲಿ ಹಾನಿಯಾಗಿದೆ. ಇದರಲ್ಲಿ ಶೇ.80ರಷ್ಟು ಗೋವಿನಜೋಳ ಬೆಳೆಯೇ ಹಾನಿಯಾಗಿದೆ.
ಈ ಬಾರಿ ಶೇ.90ರಷ್ಟು ಗೋವಿನ ಜೋಳ ಬೆಳೆ ಸಂಪೂರ್ಣ ಹಾನಿಯಾಗಿದೆ. ಭತ್ತ ಶೇ.30 ರಷ್ಟು ಭೂಮಿಗೆ ಬಿದ್ದು ಮೊಳಕೆ ಬಿಟ್ಟಿದೆ.
ಅಡಿಕೆ ಇಳುವರಿ ಕುಸಿತವಾಗಿದೆ. ರೈತರು ಸಾಲ ತೀರಿಸಲಾಗದೆ ಆರು ತಿಂಗಳು ಬದುಕು ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಬೆಳೆ
ಹಾನಿಯಾದ ಪ್ರತಿಯೊಬ್ಬ ರೈತನ ಗದ್ದೆಗೆ ತೆರಳಿ ಸರ್ವೇ ಮಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲಾಗುವುದು.
*ಬಸವರಾಜ ಪಾಟೀಲ, ಅಧ್ಯಕ್ಷ
ತಾಲೂಕು ಭಾರತೀಯ ಕಿಸಾನ್ ಸಂಘ
ಹಿಂಗಾರು ಮಳೆಯಿಂದಾಗಿ ಈ ಬಾರಿ ಭತ್ತ ಹಾಗೂ ಗೋವಿನ ಜೋಳ ಸೇರಿ ಸುಮಾರು 143 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ
ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ವೇ ನಡೆಸಲಾಗುತ್ತಿದ್ದು, ಶೀಘ್ರವೇ ಮುಗಿಯಲಿದೆ.
*ಕೆ.ಎನ್.ಮಹಾರೆಡ್ಡಿ
ಸಹಾಯಕ ಕೃಷಿ ನಿರ್ದೇಶಕ
■ ಮುನೇಶ ತಳವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.