ಮಂಜುಗುಣಿಯಲ್ಲಿ ಏ. 16 ಕ್ಕೆ ಬೆಳಿಗ್ಗೆಯೇ ಮಹಾರಥೋತ್ಸವ
Team Udayavani, Apr 13, 2022, 7:45 PM IST
ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ಮಹಾ ರಥೋತ್ಸವ ಏ.16 ರಂದು ಮುಂಜಾನೆ ಎಂಟಕ್ಕೇ ನಡೆಯಲಿದೆ.
ಅಂದು ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಬೆಳಿಗ್ಗೆ 7 ಕ್ಕೆ ಶ್ರೀದೇವರ ರಥಾರೋಹಣ ನಡೆಯಲಿದೆ. ಬಳಿಕ 8 ಕ್ಕೆ ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ನಡೆಯಲಿದೆ. ರಥೋತ್ಸವದ ಬಳಿಕ ಅದೇ ದಿನ ನಡು ರಾತ್ರಿ 1 ಗಂಟೆ ತನಕ ರಥಾರೂಢ ಶ್ರೀ ದೇವರ ದರ್ಶನ ನಡೆಯಲಿದೆ ಎಂದು ಮಂಜುಗುಣಿಯ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ತಿಳಿಸಿದ್ದಾರೆ.
ಏ.2 ರಿಂದ ಮಹಾ ರಥಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಏ.10ಕ್ಕೆ ಪ್ರಾರ್ಥನೆ, ದೇವನಾಂದಿ ಮೂಲಕ ಯಾಗಶಾಲಾ ಪ್ರವೇಶ ಮಾಡಲಾಗಿದೆ. 11ಕ್ಕೆ ಧ್ವಜ ಪೂಜೆ, ಧ್ವಜ ಬಲಿಗಳು, ರತ್ನ ಮಂಟಪೋತ್ಸವ ನಡೆದಿವೆ. 12 ಕ್ಕೆ ಭೂತರಾಜ ಬಲಿ, ಗಜಯಂತ್ರೋತ್ಸವ, 13ಕ್ಕೆ ಸಿಂಹಯಂತ್ರೋತ್ಸವ ಕಾರ್ಯಕ್ರಮಗಳ ಜರುಗಿವೆ.
ಏ.14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ರಾತ್ರಿ ಶೇಷ ಯಂತ್ರೋತ್ಸವ, 15 ಕ್ಕೆ ಶ್ರೀದೇವರ ಪ್ರತಿಷ್ಠಾ ದಿನ ಕೂಡ ಆಗಿದ್ದು, ಅದೇ ದಿನ ರಾತ್ರಿ ವಿಶೇಷ ದಂಡಬಲಿ, ಭೂತರಾಜ ಬಲಿ ಹಾಗೂ ಗರುಡಯಂತ್ರೋತ್ಸವ ನಡೆಯಲಿದೆ.
ಏ.೧೬ರ ಬೆಳಿಗ್ಗೆನೇ ಮಹಾರಥೋತ್ಸವ ನಡೆಯಲಿದೆ ಎಂಬುದು ವಿಶೇಷವಾಗಿದೆ. ೧೬ರ ಮುಂಜಾನೆ ರಥ ಶುದ್ದಿ, ರಥ ಪೂಜಾ, ರಥಬಲಿಗಳ ಮೂಲಕ ರಥಾರೋಹಣಗೊಳ್ಳುವ ವೆಂಕಟರಮಣ ದೇವರಿಗೆ ವಿಶೇಷ ಪೂಜೆಗಳೂ ನಡೆಯಲಿವೆ. ಬಳಿಕ ೮ಕ್ಕೆ ಭಕ್ತರು ರಥಾರೂಢ ದೇವರನ್ನು ಎಳೆಯಲಿದ್ದಾರೆ. ಅಂದು ಮಧ್ಯಾಹ್ನ ಪ್ರಸಾದ ಭೋಜನ ಕೂಡ ನಡೆಯಲಿದೆ.
ಏ. 17ಕ್ಕೆಅವಭ್ರತ ಸ್ನಾನ, ಏ.30ಕ್ಕೆ ಸಂಪ್ರೋಕ್ಷಣ್ಯ ನಡೆಯಲಿದೆ ಎಂದು ಶ್ರೀನಿವಾಸ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.