ಕಲ್ಯಾಣ ಚಾಲುಕ್ಯರ 2 ತಾಮ್ರ ಶಾಸನ ಪತ್ತೆ
Team Udayavani, Jan 16, 2021, 6:37 PM IST
ಅಂಕೋಲಾ: ಇಲ್ಲಿನ ಕುಂಬಾರಕೇರಿ ಪುರಾತನ ಕದಂಬೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಎರಡು ತಾಮ್ರ ಶಾಸನಗಳು ಪತ್ತೆಯಾಗಿವೆ. ದೇವಾಲಯದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಮಣ್ಣು ಅಗೆಯುವಾಗ ದೊರಕಿದ ಶಾಸನಗಳನ್ನು ಸಮಿತಿ ಅಧ್ಯಕ್ಷ ವಿಠಲರಾವ್ ವೆರ್ಣೇಕರ್ ಸ್ವತ್ಛಗೊಳಿಸಿ ಶಾಸನಗಳ ಕುರಿತುಅಧ್ಯಯನ ನಡೆಸುತ್ತಿರುವ ಶ್ಯಾಮಸುಂದರ ಗೌಡರ ಗಮನಕ್ಕೆ ತಂದಾಗ, ಇವು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿದ್ದು, ಕ್ರಿಸ್ತಶಕೆ 975ರಲ್ಲಿ ಬರೆಯಲ್ಪಟ್ಟಿದ್ದು ಇಂದಿಗೆ 1046 ವರ್ಷಗಳ ಹಿಂದಿನದ್ದು ಎಂದರು.
ಶಾಸನದಲ್ಲೇನಿದೆ?: ದೊರಕಿದ ಶಾಸನ ಒಂದರಲ್ಲಿ ಕಲ್ಯಾಣ ಚಾಲುಕ್ಯರ ಎರಡನೇ ತೈಲಪರ ಕುರಿತು ಉಲ್ಲೇಖವಿದ್ದು, ಶಾಲಿವಾಹನ ಶಕೆ 897, ಭಾದ್ರಪದ ಮಾಸ, ಆದಿತ್ಯವಾರ, ಅಮಾವಾಸ್ಯೆ ಎಂದು ಬರೆಯಲಾಗಿದ್ದ ಇದರ ಮುಂದುವರಿದ ಭಾಗದ ತಾಮ್ರ ಶಾಸನ ಬೇರೆ ತಾಮ್ರಪತ್ರದಲ್ಲಿ ಬರೆದಿದ್ದು ಅದು ಪತ್ತೆಯಾಗಬೇಕಿದೆ. ಇಲ್ಲಿ ದೊರೆತ ಇನ್ನೊಂದು ತಾಮ್ರಶಾಸನ ಭಿನ್ನವಾಗಿದ್ದು ಅದರಲ್ಲಿ ಬರೆದಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಆದ್ದರಿಂದ ಅದನ್ನು ಸ್ವತ್ಛಗೊಳಿಸಿ ಓದುವುದಾಗಿ ಅವರು ಹೇಳಿದ್ದಾರೆ.
ಕದಂಬೇಶ್ವರಕ್ಕೆ ಚಾಲುಕ್ಯರ ಕೊಡುಗೆ: ಕ್ರಿಸ್ತಶಕೆ 973ರಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆ ಆರಂಭವಾಗಿದ್ದು 1190ರವರೆಗೆ ಮುಂದುವರಿದಿದೆ. ಇದರ ಸಂಸ್ಥಾಪಕ ದೊರೆ ಎರಡನೇ ತೈಲಪ ಕ್ರಿ.ಶ 997ರವರೆಗೆ ಆಳ್ವಿಕೆ ನಡೆಸಿದ ಎಂದು ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತದೆ. ಕದಂಬರಿಂದ ನಿರ್ಮಾಣವಾದ ಕದಂಬೇಶ್ವರ ದೇವಾಲಯವನ್ನು ಕಲ್ಯಾಣ ಚಾಲುಕ್ಯರು ತಮ್ಮ ಶೈಲಿಯಲ್ಲಿ ಅಭಿವೃದ್ಧಿಗೊಳಿಸಿದ್ದರು ಎನ್ನುವುದಕ್ಕೆ ಅವರ ಆಳ್ವಿಕೆಯ ಆರಂಭದ ತಾಮ್ರ ಶಾಸನ ಆಧಾರವಾಗಲಿದೆ.
ಇದನ್ನೂ ಓದಿ:ಪೇಜಾವರ ಶ್ರೀ ಆರಾಧನೋತ್ಸವ
ಕದಂಬೇಶ್ವರ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಐತಿಹಾಸಿಕವಾಗಿ ಅಧ್ಯಯನ ಯೋಗ್ಯವಾಗಿದ್ದು, ಈ ಭಾಗದಲ್ಲಿ ಹಲವು ಶಿಲಾಶಾಸನಗಳಿವೆ. ಪ್ರಥಮವಾಗಿ ಕಲ್ಯಾಣ ಚಾಲುಕ್ಯರ ಕಾಲದ ತಾಮ್ರಶಾಸನ ಪತ್ತೆಯಾಗಿದೆ.
ಶ್ಯಾಮಸುಂದರ ಗೌಡ, ಶಾಸನ ಸಂಶೋಧಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.