ಗೋಡಂಬಿ ಕೊಡಿಸುವುದಾಗಿ 28 ಲಕ್ಷ ಎಗರಿಸಿದ ಕದೀಮರು
Team Udayavani, Jul 17, 2021, 8:43 PM IST
ಮುಂಡಗೋಡ: ಅಪರಚಿತರಿಬ್ಬರು ಗೋಡಂಬಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬನನ್ನು ಕರೆಯಿಸಿಕೊಂಡು ಅವರ ಬಳಿ ಇದ್ದ ಸುಮಾರು 28 ಲಕ್ಷ ರೂ. ಹಣದ ಬ್ಯಾಗನ್ನು ಕಸಿದು ಪರಾರಿಯಾದ ಘಟನೆ ತಾಲೂಕಿನ ಮಳಗಿ ವ್ಯಾಪ್ತಿಯ ಧರ್ಮಾ ಕಾಲೋನಿ ಹತ್ತಿರ ಶುಕ್ರವಾರ ನಡೆದಿದೆ.
ಚಿಕ್ಕೋಡಿ ಮೂಲದ ಶಿವನಗೌಡ ಪಾಟೀಲ ಮತ್ತು ಆತನ ಸ್ನೇಹಿತ ಅಸ್ಲಂ ನದಾಫ ಕಾರಿನಲ್ಲಿ ಹಣ ತೆಗೆದುಕೊಂಡು ಧರ್ಮಾ ಕಾಲೋನಿಗೆ ಬಂದಿದ್ದಾರೆ. ಗೋಡಂಬಿ ಕೊಡಿಸುವುದಾಗಿ ನಂಬಿಸಿದ್ದ ಇಬ್ಬರು ವ್ಯಕ್ತಿಗಳು ಧರ್ಮಾ ಜಲಾಶಯದ ಸಮೀಪ ಇವರಿಬ್ಬರನ್ನು ಕರೆದುಕೊಂಡು ಹೋಗುವಂತೆ ನಟಿಸಿ ಶಿವನಗೌಡ ಅವರ ಬಳಿ ಇದ್ದ ಸುಮಾರು 28 ಲಕ್ಷ ರೂ. ಇರುವ ಹಣದ ಬ್ಯಾಗನ್ನು ಎಗರಿಸಿ ಡ್ಯಾಂ ಕೆಳಗಡೆ ಓಡಿ ಹೋಗಿದ್ದಾರೆ. ಅವರನ್ನು ಬೆನ್ನು ಹತ್ತಿದಾಗ ಮುಂದೆ ಮತ್ತೆ ಕೂಡಿಕೊಂಡಿದ್ದ ನಾಲ್ಕು ಜನರು ಸೇರಿ ಎಲ್ಲರೂ ಪರಾರಿಯಾಗಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.
ಸ್ಥಳಕ್ಕೆ ಡಿವೈಎಸ್‌ಪಿ ರವಿ ನಾಯ್ಕ, ಸಿಪಿಐ ಪ್ರಭುಗೌಡ, ಪಿಎಸ್‌ಐಗಳಾದ ಎನ್.ಡಿ. ಜಕ್ಕಣ್ಣವರ, ಬಸವರಾಜ ಮಬನೂರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.