ಮಾರಿಕಾಂಬಾ ದೇವಸ್ಥಾನದಲ್ಲಿ ಉಳಿದಿವೆ 5 ಸಾವಿರ ಹರಕೆ ಸೀರೆ
, Oct 4, 2019, 3:56 PM IST
ಶಿರಸಿ: ಈ ಅಮ್ಮನ ಬಳಿ ಒಂದೆರಡೇ ಅಲ್ಲ, ಬರೋಬ್ಬರಿ ಐದು ಸಾವಿರಕ್ಕೂ ಅಧಿಕ ಸೀರೆಗಳಿವೆ. ಹೀಗೆ ಇರುವ ಸೀರೆಗಳನ್ನು ಏನು ಮಾಡಬೇಕು ಎಂಬುದೂ ಚಿಂತೆಯಾಗಿದೆ.
ಅಮ್ಮ, ಮಾರಮ್ಮ ಎಂದೆಲ್ಲ ಕರೆಸಿಕೊಳ್ಳುವ ದಕ್ಷಿಣ ಭಾತರದ ಪ್ರಸಿದ್ಧ ದೇವಿ ಮಾರಿಕಾಂಬೆಗೆ ಭಕ್ತರು ಹರಕೆಯಾಗಿ ಉಡಿ ಸೇವೆ ನೀಡುವುದು ವಾಡಿಕೆ. ಸೀರೆ, ಕಣ ತಂದು ದೇವಿಗೆ ಹರಕೆ ಒಪ್ಪಿಸುತ್ತಾರೆ. ಹೀಗೆ ಒಪ್ಪಿಸಿದ ಸೀರೆಗಳನ್ನು ಹರಾಜು ಹಾಕಿದ, ಸರಕಾರದ ಸೂಚನೆ ಪ್ರಕಾರ ನೆರೆ ಪೀಡಿತರಿಗೆ ಬಳಕೆಗೆ ಯೋಗ್ಯವಾದ ಸೀರೆ ಕೊಟ್ಟಿದ್ದು 2 ಸಾವಿರದಷ್ಟು. ಬಳಿಕವೂ ಉಳಿದದ್ದು 5 ಸಾವಿರಕ್ಕೂ ಅಧಿಕ !
ಒಂದೇ ಬಣ್ಣದವು: ಹೀಗೆ ಇರುವ ಸೀರೆಗಳಲ್ಲಿ ಹೆಚ್ಚಿನವು ಒಂದೇ ಬಣ್ಣದವು. ಅಮ್ಮನ ಪ್ರಸಾದ ಎಂದು ಒಂದೊಬ್ಬರು ಸ್ವೀಕರಿಸಿದರೂ ಸಾಮಾನ್ಯವಾಗಿ ಉಡಲು ಬಳಸದೇ ಇರುವ ಬಣ್ಣಗಳ ಸಾರಿಗಳೇ ಹೆಚ್ಚಾಗಿ ಉಳಿದುಕೊಂಡಿವೆ. ಯಾವುದೋ ಇಷ್ಟಾರ್ಥ ಈಡೇರಿಕೆಗೆ ಅಮ್ಮನಿಗೆ ಇಷ್ಟವಾದ ಸೀರೆ ಎಂದು ವಿಶೇಷವಾಗಿ ಕೆಂಪು, ಹಳದಿ, ಹಸಿರು ಬಣ್ಣದ್ದೇ ಹೆಚ್ಚು ಬರುತ್ತವೆ. ಖಾದಿ, ಪಾಲಿಸ್ಟರ್ ಸೇರಿದಂತೆ ರೇಷ್ಮೆ ಸೀರೆಗಳೂ ಇರುತ್ತವೆ. ಹಸಿರಿನ ಪ್ರಾಬಲ್ಯವೇ ಅಧಿಕವಾಗಿ ಉಳಿದುಕೊಂಡಿದೆ. ಈ ಮಧ್ಯೆ ಭಕ್ತರು ನೀಡಿದ ಸೀರೆ ಅಮ್ಮನಿಗೆ ಉಡಿಸಲು ಸಾಧ್ಯವಿಲ್ಲ. ಎಂಟಡಿ ಎತ್ತರದ ಕಾಷ್ಟ ದೇವಿ ಇದಾಗಿದ್ದರಿಂದ ಒಮ್ಮೆ ಸೀರೆ ತೆಗೆದು ಇನ್ನೊಂದು ಉಡಿಸಲು ಕನಿಷ್ಠ ಮೂರು ಗಂಟೆಗಳಾದರೂ ಬೇಕಾಗುತ್ತವೆ ಹಾಗೂ ಗಾತ್ರದಲ್ಲಿ ದೊಡ್ಡ ಸೀರೆಗಳೂ ಬೇಕು. ಗುಣಮಟ್ಟದಲ್ಲೂ ಒಂದೇ ಮಾದರಿಯ ಸೀರೆ ಉಡಿಸುವುದು ಕ್ರಮ. ಇಲ್ಲಿ 50ರಿಂದ 10 ಸಾವಿರ ರೂ. ಮೊತ್ತದ ಸೀರೆಗಳೂ ಬರುತ್ತವೆ.
ಟೆಂಡರ್‌ಗೆ ಚಿಂತನೆ: ಮಾರಿಕಾಂಬಾ ದೇಗುಲದಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡುವ ಸೀರೆಗಳು ರಾಶಿರಾಶಿಯಾಗಿ ಉಳಿದವಲ್ಲ, ಅವುಗಳನ್ನು ಏನು ಮಾಡಬೇಕು ಎಂಬುದು ಆಡಳಿತ ಮಂಡಳಿ ಚಿಂತನೆ ಆಯಿತು. ಮಾರಿಕಾಂಬಾ ಜಾತ್ರಾ ಬಯಲಿನಲ್ಲಿ ಪ್ರತೀ ನಿಗದಿತ ದಿನದಂದು ಹರಾಜು ಹಾಕಿದ ಬಳಿಕವೂ ಒಂದಿಷ್ಟು ಉಳಿದು ಇಷ್ಟಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಸವಾಲಿನ ನಂತರವೂ ಇಷ್ಟೊಂದು ಉಳಿದದ್ದಕ್ಕೆ ಏನಾದರೂ ಮಾಡಬೇಕು ಎಂದು ಚಿಂತನೆ ನಡೆಸಿದರು.
ಅಮ್ಮನ ಸೀರೆಯ ವಿಲೇವಾರಿಗೆ ಜಿಲ್ಲಾ ನ್ಯಾಯಾಧೀಶರ ಸುಪರ್ದಿಗೆ ಒಳಪಡುವುದರಿಂದ ಅವರ ಒಪ್ಪಿಗೆ ಪಡೆದು ಈ ಕಾರ್ಯಕ್ಕೆ ಮುಂದಾಗಿದೆ. ಭಕ್ತರು ಸಲ್ಲಿಸಿದ ಸೀರೆಗಳನ್ನು, ಕಣಗಳನ್ನು ಸವಾಲಿನ ಮೂಲಕ ಸೀರೆಯ ಮೂಲ ಬೆಲೆಯ ಅರ್ಧ ದರದಿಂದ ಭಕ್ತರಿಗೆ ನೀಡಲಾಗುತ್ತದೆ. ಸವಾಲಿನಲ್ಲಿ ಹೆಚ್ಚು ಬಂದರೆ ಅದನ್ನು ಅಮ್ಮನಿಗೇ ಒಪ್ಪಿಸಲಾಗುತ್ತದೆ ಎಂದೂ ವಿವರಿಸುತ್ತಾರೆ ಮಾರಿಕಾಂಬಾ ದೇವಸ್ಥಾನ ಉಪಾಧ್ಯಕ್ಷ ಮನೋಹರ ಮಲ್ಮನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.