ತೋಟಗಾರಿಕಾ ಯಾಂತ್ರೀಕರಣ ಯೋಜನೆಯಡಿಯಲ್ಲಿ ಜಿಲ್ಲೆಗೆ 550 ಲಕ್ಷ ರೂ. ಬಿಡುಗಡೆ
Team Udayavani, Dec 24, 2022, 1:18 PM IST
ಶಿರಸಿ: ಪ್ರಸಕ್ತ ಸಾಲಿನ ತೋಟಗಾರಿಕಾ ಯಾಂತ್ರೀಕರಣ ಯೋಜನೆಯಡಿಯಲ್ಲಿ ಜಿಲ್ಲೆಗೆ 550 ಲಕ್ಷ ರೂಪಾಯಿಗಳನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದ್ದಾರೆ.
ಹಿಂದಿನ ಅಧಿವೇಶನದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಲೆನಾಡಿನ ಅಡಿಕೆ ಕೊಯ್ಲಿನ ಕೂಲಿ ಸಮಸ್ಯೆ ಬಗ್ಗೆ ಹಾಗೂ ಅದಕ್ಕೆ ಪರಿಹಾರವಾಗಿ ಪೈಬರ ದೋಟಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವ ಬಗ್ಗೆ ಸರಕಾರಕ್ಕೆ ಸೂಚನೆ ನೀಡಿದ ಹಿನ್ನಲೆಯಲ್ಲಿ ತೋಟಗಾರಿಕಾ ಸಚಿವರು ಪೈಬರ ದೋಟಿಯ ಖರೀದಿಯ ಮೇಲೆ ಸರಕಾರವು ಶೇ. 40 ಜನರಲ್, ಎಸ್.ಸಿ ಎಸ್.ಟಿ ಹಾಗೂ ಮಹಿಳೆಯರಿಗೆ ಶೇ. 50 ಸಬ್ಸಿಡಿ ಘೋಷಿಸಿದ್ದರು
ರೈತರು ಯಂತ್ರೀಕರಣದ ಕಡೆಗೆ ಹೆಚ್ಚಿನ ಒಲವು ತೋರುವುದರ ಜೊತೆಗೆ ಆರ್ಥಿಕ ಉಳಿತಾಯವು ಆಗಲಿದೆ. ಈಗಾಗಲೇ ರೈತರು ಪೈಬರ ದೋಟಿಯ ಪ್ರಯೋಗವನ್ನು ಮಾಡುತ್ತಿದ್ದು, ಸರಕಾರವು ಸಬ್ಸಿಡಿ ಘೋಷಿಸಿರುವುದರಿಂದ ಹೆಚ್ಚಿನ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದೂ ಸ್ಪೀಕರ್ ಆಪ್ತ ಕಾರ್ಯದರ್ಶಿ ಸುಬ್ರಾಯ ಹೆಗಡೆ ಹಲಸಿನಳ್ಳಿ ತಿಳಿಸಿದ್ದಾರೆ.
ರೈತರ ಹಿತದೃಷ್ಠಿಯಿಂದ ಕೈಗೊಂಡಿರುವ ಈ ನಿರ್ಣಯ ಅತ್ಯಂತ ಸೂಕ್ತವಾಗಿದ್ದು, ಸರಕಾರ ಹಾಗೂ ತೋಟಗಾರಿಕಾ ಸಚಿವರಿಗೆ ರೈತರ ಪರವಾಗಿ ಅಭಿನಂದನೆಯನ್ನು ಸ್ಪೀಕರ್ ಕಾಗೇರಿ ಅವರು ಸಲ್ಲಿಸಿದ್ದಾರೆ ಎಂದೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.