ಹೊನ್ನಾವರದಲ್ಲಿ 795 ಜನ ಕ್ವಾರಂಟೈನ್
Team Udayavani, May 15, 2020, 5:43 PM IST
ಹೊನ್ನಾವರ: ತಾಲೂಕಿಗೆ ಹೊರಗಿನಿಂದ ಆಗಮಿಸಿದ 795 ಜನರಿಗೆ 14 ದಿನಗಳ ಕಾಲ ವಿವಿಧ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಆದೇಶಿಸಲಾಗಿದ್ದು, ಇವರಲ್ಲಿ ಹೆಚ್ಚು ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಇದರಲ್ಲಿ 756 ಜನ ಮನೆಯಲ್ಲಿ, ಹೊಟೇಲ್‌ನಲ್ಲಿ 16 ಜನ ಮತ್ತು ಹಾಸ್ಟೆಲ್‌ಗಳಲ್ಲಿ 23 ಜನ ಉಳಿದುಕೊಂಡಿದ್ದು, ಹೊಸ್ಟೆಲ್ ಗಳಲ್ಲಿ ಉಳಿದವರ ವೆಚ್ಚವನ್ನು ಸರ್ಕಾರ ಭರಿಸಲಿದೆ. ಮನೆಯಲ್ಲಿ ಮತ್ತು ಹೊಟೇಲ್ ಗಳಲ್ಲಿ ಉಳಿದುಕೊಂಡವರ ವೆಚ್ಚವನ್ನು ಅವರೇ ಭರಿಸಬೇಕಾಗಿದೆ. ಮಹಾರಾಷ್ಟ್ರ ಸಿಂಧದುರ್ಗದಿಂದ ಗೋವಾ ಮಾರ್ಗ ವಾಗಿ ಬಂದವರನ್ನು ಮಾಜಾಳಿ ಚೆಕ್‌ಪೋಸ್ಟ್ ನಲ್ಲಿ ತಡೆಹಿಡಿಯಲಾಗಿದೆ. ಇವರು ಭಟ್ಕಳ ಉಪ ವಿಭಾಗಾಧಿಕಾರಿಯಿಂದ ಪರವಾನಗಿ ಪಡೆಯುವಾಗ ಗೋವಾದಿಂದ ಬಂದಿದ್ದರು ಎಂಬ ದಾಖಲೆ ನೀಡಿದ ಕಾರಣ ತಾಂತ್ರಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾನವೀಯ ನೆಲೆಯಲ್ಲಿ ಇವರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಕೊಚರೇಕರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ, ಸಿಂಧದುರ್ಗ ಕೊಂಕಣಭಾಗ ಮತ್ತು ಗೋವಾ ಭಾಗಗಳಲ್ಲಿ ಮೀನುಗಾರಿಕೆಗಾಗಿ ಬೋಟ್‌ನಲ್ಲಿ ಕೆಲಸಮಾಡಲು ಜಿಲ್ಲೆಯಿಂದ ಸಾವಿರಾರು ಕಾರ್ಮಿಕರು ಹೋಗಿದ್ದು, ಹೊನ್ನಾವರದಿಂದ 500ರಷ್ಟು ಜನ ಹೋಗಿದ್ದಾರೆ. ಮಳೆಗಾಲ ಹತ್ತಿರ ಬಂದ ಕಾರಣ ಇವರೆಲ್ಲ ತಮ್ಮ ಲೆಕ್ಕಾಚಾರ ಮುಗಿಸಿಕೊಂಡು ಹಣ ಪಡೆದು ಊರಿನತ್ತ ಹೆಜ್ಜೆ ಹಾಕಲಿದ್ದಾರೆ.
ಬಹುಪಾಲು ಅಶಿಕ್ಷಿತರಾದ ಇವರನ್ನು ಕ್ವಾರಂಟೈನ್ ಒಳಪಡಿಸುವುದು ಆಡಳಿತಕ್ಕೆ ಸವಾಲಾಗಲಿದೆ. ಈ ಅವಧಿಯಲ್ಲಿ ಸರ್ಕಾರ ಪರವಾನಗಿ ಮತ್ತು ವೈದ್ಯಕೀಯ ತಪಾಸಣೆ, ಕ್ವಾರಂಟೈನ್ ಎಲ್ಲ ವ್ಯವಸ್ಥೆ ಮಾಡಿದ್ದರೂ ಕೋವಿಡ್ ಪೀಡಿತರು ನುಸುಳಿ ಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಇನ್ನೆರಡು ವಾರ ಹೆಚ್ಚು ಕಾಳಜಿ ವಹಿಸಬೇಕು, ಕ್ವಾರಂಟೈನ್‌ನಲ್ಲಿ ಇದ್ದವರು ಯಾವುದೇ ಕಾರಣಕ್ಕೆ ಹೊರಗೆ ಬರಬಾರದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana; ಯಕ್ಷಗಾನದಲ್ಲಿ ಮೊದಲ ಬಾರಿ ಮಂಥರೆಯಾಗಿ ಮಿಂಚಿದ ಖ್ಯಾತ ನಟಿ ಉಮಾಶ್ರೀ
ಮೊದಲ ಬಾರಿಗೆ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಲಿರುವ ನಟಿ ಉಮಾಶ್ರೀ
ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ
ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.