ಆತಂಕ ಸೃಷ್ಟಿಸಿದ ತೇಲಿ ಬಂದ ಕೇರಳ ಪಾತಿ ದೋಣಿ
Team Udayavani, Jul 28, 2020, 9:54 AM IST
ಕುಮಟಾ: ಕೇರಳ ನೋಂದಣಿಯ ಪಾತಿ ದೋಣಿಯೊಂದು ತಾಲೂಕಿನ ಹೊಲನಗದ್ದೆ ಸಮುದ್ರ ತೀರದಲ್ಲಿ ಸೋಮವಾರ ಪತ್ತೆಯಾಗಿದ್ದು, ಇದರಿಂದ ಮೀನುಗಾರರಲ್ಲಿ ಕೆಲ ಕಾಲ ಆತಂಕ ಮೂಡಿಸಿತು.
ಪಂಚಮಿ ಹೆಸರಿನ ಪಾತಿ ದೋಣಿಯು ಬಾಡದ ಸಮುದ್ರ ತೀರದ ಮಾದರಿ ರಸ್ತೆಯಲ್ಲಿ ಸೋಮವಾರ ತೇಲಿ ಬಂದಿದ್ದು, ದೋಣಿಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಸ್ಥಳೀಯರು ಗಾಬರಿಗೊಂಡು ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ಕರಾವಳಿ ಕಾವಲು ಪಡೆಯ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಸಿಪಿಐ ಪರಮೇಶ್ವರ ಗುನಗಾ, ಪಿಎಸ್‌ಐ ಆನಂದಮೂರ್ತಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇರಳ ನೋಂದಣಿ ಹೊಂದಿರುವ ದೋಣಿಯೊಂದು ಸಮುದ್ರ ತೀರದಲ್ಲಿ ಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಕೆಲ ಕಾಲ ಭಯಭೀತರಾಗಿದ್ದರು. ದೋಣಿಯಲ್ಲಿ ಮೀನಿನ ಖಾಲಿ ಬಾಕ್ಸ್‌ಗಳು ಇದ್ದವು ಎಂದು ತಿಳಿದು ಬಂದಿದೆ. ಕರಾವಳಿ ಬಂದರುಗಳಲ್ಲಿ ಭದ್ರತೆ ಹೆಚ್ಚಿಸುತ್ತಿರುವ ಸಮಯದಲ್ಲಿ ಏಕಾಏಕಿ ದೋಣಿಯೊಂದು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ.
ದೋಣಿಯು ಕೇರಳದಿಂದ ತೇಲಿ ಬಂದಿರಬಹುದೆಂದು ಪ್ರಾಥಮಿಕವಾಗಿ ತಿಳಿದು ಬಂದಿದ್ದು, ಒಟ್ಟಾರೆಯಾಗಿ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯಾಸತ್ಯತೆ ತಿಳಿದು ಬರಲಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.