ಬೊಮ್ಮನಳ್ಳಿ ಡ್ಯಾಂ ಸನಿಹ ರಸ್ತೆ ದಾಟಿದ ಬೃಹತ್ ಗಾತ್ರದ ಆನೆ
Team Udayavani, Jun 8, 2023, 10:13 PM IST
ದಾಂಡೇಲಿ : ದಾಂಡೇಲಿ ತಾಲ್ಲೂಕಿನ ಅಂಬಿಕಾನಗರ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಬೊಮ್ಮನಳ್ಳಿ ಡ್ಯಾಂ ಹತ್ತಿರದಲ್ಲಿ ಬೃಹತ್ ಗಾತ್ರದ ಆನೆ ರಸ್ತೆ ದಾಟುತ್ತಿರುವ ಸೊಗಸಾದ ದೃಶ್ಯ ಗುರುವಾರ ಬೈಕ್ ಸವಾರರಿಗೆ ಕಂಡು ಬಂದಿದೆ.
ಆನೆಯ ಗಾತ್ರ ನೋಡಿದರೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಅತಿ ದೊಡ್ಡ ಆನೆ ಎಂಬ ಮಾತು ಕೇಳಿ ಬಂದಿದೆ. ಈಚೆಗೆ ಭಗವತಿ ಹತ್ತಿರ 12 ಆನೆಗಳ ಗುಂಪು ರಸ್ತೆ ದಾಟಿತ್ತು. ಬೇಸಿಗೆಯಲ್ಲಿ ಬೊಮ್ಮನಹಳ್ಳಿ ಪಿಕ್ ಅಪ್ ಡ್ಯಾಂ ಹಿನ್ನೀರಲ್ಲಿ ನೀರು ಕುಡಿಯಲು ಆನೆಗಳು ಬರುವುದು ಸಾಮಾನ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಳಿ ಟೈಗರ್ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಆನೆಗಳು ನಾಗರಿಕರಿಗೆ ಕಾಣಿಸುತ್ತಿವೆ . ಜನರು ಸಹ ಆನೆಗಳ ತಂಟೆಗೆ ಹೋಗದ ಕಾರಣ , ಆನೆಗಳು ಯಾವುದೇ ರೀತಿಯ ತೊಂದರೆ ಕೊಟ್ಟ ಬಗ್ಗೆ ವರದಿಯಾಗಿಲ್ಲ . ರೀತಿಯಲ್ಲಿ ವರ್ತಿಸಿರುವುದು ಎಲ್ಲಿಯೂ ಕಂಡು ಬಂದಿಲ್ಲ. ಬೊಮ್ಮನಳ್ಳಿ ಡ್ಯಾಂ ಹತ್ತಿರ ಅರಣ್ಯ ಪ್ರದೇಶದಲ್ಲಿ ಕಾಡು ಮತ್ತು ಆನೆಗೆ ಬೇಕಾದ ಆಹಾರ ಸಾಕಷ್ಟಿರುವ ಕಾರಣ, ಆನೆಗಳು ಈ ಭಾಗದಲ್ಲಿ ವ್ಯಾಪಕವಾಗಿ ಬೀಡು ಬಿಟ್ಟಿವೆ ಎಂಬುದು ಅರಣ್ಯಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.