ಕಾಯಕದಲ್ಲೇ ಭಗವಂತನ ಕಂಡ ಶತಾಯುಷಿ
Team Udayavani, Jan 16, 2018, 9:00 AM IST
ಕಾರವಾರ: ವಯಸ್ಸು 109. ಕಣ್ಣು ಮಂಜಾಗಿಲ್ಲ, ಕಿವಿ ಮಂದವಾಗಿಲ್ಲ. ಹೊಲದ ಕಾಯಕವೇ ಜೀವಾಳ! ಹೆಸರು ಭಗವಂತ ನೀಲು ಪಡ್ತಿ. ಅಂಕೋಲಾ ತಾಲೂಕಿನ ಅವರ್ಸಾ ಇವರ ಕರ್ಮಭೂಮಿ. ಜೀವನವಿಡೀ ಭೂಮಿ ಯಲ್ಲಿ ಬೆವರು ಸುರಿಸುತ್ತಾರೆ. ಈಗಲೂ ಸ್ವಂತ ದುಡಿಮೆ ನಂಬಿ ಬದುಕಿದ್ದಾರೆ. ಹೆತ್ತ ಮಕ್ಕಳು ಸ್ವಂತ ಬದುಕು ಕಟ್ಟಿಕೊಂಡು ಪಕ್ಕದ ಗ್ರಾಮದಲ್ಲಿದ್ದರೂ, ಇಳಿವಯಸ್ಸಿನಲ್ಲೂ
ದುಡಿಮೆಯನ್ನೇ ನಂಬಿರುವ ಇವರ ಬದುಕು ಯುವ ಕೃಷಿಕರಿಗೆ ಮಾದರಿ. ಈಗಲೂ ಭತ್ತ, ಕಾಯಿಪಲ್ಲೆ, ಶೇಂಗಾ, ಕಡಲೆ, ತೆಂಗು ಬೆಳೆದು ಜೀವನ ನಡೆಸುತ್ತಾರೆ. ಸುತ್ತಲಿನ ಗ್ರಾಮಸ್ಥರಿಗೆ ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದಾರೆ.
ಮಕ್ಕಳೇ ಹಿರಿಯ ನಾಗರಿಕರು: ಭಗವಂತ ಪಡ್ತಿ ಅವರಿಗೆ 109 ವಯಸ್ಸು ಎಂದು ಅಂದಾಜು. ಅವರ ಜನ್ಮದಿನಕ್ಕೆ ದಾಖಲೆಗಳಿಲ್ಲ. ಪಡ್ತಿ ಪತ್ನಿ ಆನಂದಿಗೆ 95 ವರ್ಷ. ಈ ದಂಪತಿಗಳಿಗೆ 12 ಮಕ್ಕಳು. ಈ ಪೈಕಿ ಮೂವರು ಹದಿಹರೆಯದಲ್ಲೇ ತೀರಿ ಹೋದರಂತೆ. ಬದುಕಿರುವ ಗಂಡು ಮಕ್ಕಳಲ್ಲಿ ಒಬ್ಬರಿಗೆ 85. ಮತ್ತೂಬ್ಬರಿಗೆ 75 ವರ್ಷ. 5 ಹೆಣ್ಣು ಮಕ್ಕಳಲ್ಲಿ 4 ಜನರಿಗೆ ಮದುವೆಯಾಗಿದೆ. 4
ಗಂಡು ಮಕ್ಕಳ ಪೈಕಿ ಇಬ್ಬರು ಇತ್ತೀಚೆಗೆ ನಿಧನರಾಗಿದ್ದಾರೆ. ಕೊನೆಯ ಮಗಳ ಜೊತೆ ಭಗವಂತ ಪಡ್ತಿ ಹೆಬ್ಬುಳ ಗ್ರಾಮದಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು ಆಗಾಗ ಬಂದು ಹೋಗುತ್ತಿದ್ದಾರೆ.
ಬೆಳಗ್ಗೆ 5ಕ್ಕೆ ಏಳುವ ಭಗವಂತ 6 ಗಂಟೆ ಹೊತ್ತಿಗೆ ಹೊಲಕ್ಕೆ ತೆರಳಿ ಕಾಯಕದಲ್ಲಿ ತೊಡಗುತ್ತಾರೆ. ಅವರಿಗೆ ಜೋಡಿ ಎತ್ತುಗಳು ಸಂಗಾತಿಯಾಗಿವೆ. ಪತ್ನಿ ಕೃಷಿ ಚಟುವಟಿಕೆ ಣಯಲ್ಲಿ ಕೈ ಜೋಡಿಸುತ್ತಾರೆ. ಗಂಜಿ ಊಟ ಮಾಡುವ ಭಗವಂತ ಪಡ್ತಿಗೆ ದುಡಿಮೆಯೇ ದೇವರು. ಬೈಕ್ ಮೇಲೆ ಸುತ್ತುವುದು, ಊರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರಿಗೆ ತುಂಬಾ ಇಷ್ಟ. ಕಣ್ಣಿನ ದೃಷ್ಟಿ ಸಖತ್ತಾಗಿದೆ. ಕನ್ನಡಕ ಧರಿಸಲ್ಲ.
ಗುಡಿಸಲಲ್ಲಿ ಜೀವನ: ತಮ್ಮ 3 ಎಕರೆ ಕೃಷಿ ಭೂಮಿಯಲ್ಲೇ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ ಭಗವಂತ ಪಡ್ತಿ. ಹೊಲಕ್ಕೆ ವಾಹನ ಹೋಗಲು ದಾರಿಯಿಲ್ಲ. ಹಾಗಾಗಿ ಸ್ವಂತ ಬಲ ಅವಲಂಬಿಸಿದ್ದಾರೆ. ಈಚೆಗೆ ಇವರ ಸಮಸ್ಯೆ ಕಂಡ ಗ್ರಾಪಂ ಮನೆ ನಿರ್ಮಾಣಕ್ಕೆ ಕೃಷಿ ಭೂಮಿಯ ಸ್ವಲ್ಪ ಭಾಗವನ್ನು ಕೃಷಿಯೇತರ ಮಾಡಿಕೊಡಲು ಮುಂದಾಗಿದೆ.
ಯುವಕರಿಗೆ ಆದರ್ಶ
ಕೃಷಿಯಿಂದ ಯುವ ಪೀಳಿಗೆ ದೂರ ವಾಗುತ್ತಿರುವ ಈ ಕಾಲದಲ್ಲಿ ಭಗವಂತ ಪಡ್ತಿ ಕೃಷಿಕರಿಗೆ ಮತ್ತು ಯುವ ಪೀಳಿಗೆಗೆ
ಆದರ್ಶವಾಗಿದ್ದಾರೆ. ಅವರನ್ನು ಪ್ರೀತಿ ಯಿಂದ ಕಾಣುವ ಗ್ರಾಮಸ್ಥರು, ಬೈಕ್ ನಲ್ಲಿ ಕೂರಿಸಿಕೊಂಡು ಊರಿನಲ್ಲಿ ಸುತ್ತು ಹಾಕಿಸುತ್ತಾರೆ ಎನ್ನುತ್ತಾರೆ ಗ್ರಾಮದ ಮಹೇಶ್ ನಾಯ್ಕ, ಹೊನ್ನಪ್ಪ ನಾಯ್ಕ
ಭೂಮಿ ತಾಯಿ ನನ್ನ ಕೈಬಿಟ್ಟಿಲ್ಲ. ದಶಕಗಳಿಂದ ನಾನು ಭೂಮಿಯ ಜೊತೆ ಬೆರೆತಿದ್ದೇನೆ. ಭೂಮಿ ನನಗೆ ಅನ್ನ ಕೊಟ್ಟಿದೆ.
●ಭಗವಂತ ಪಡ್ತಿ, ಕೃಷಿಕ, ಅವರ್ಸಾ
●ನಾಗರಾಜ್ ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.