ಸರಳ ವ್ಯಕ್ತಿತ್ವದ ಸಜ್ಜನ ವ್ಯಕ್ತಿ ನಾ.ಸು. ಭರತನಹಳ್ಳಿ
ಸಾಹಿತಿ-ರಂಗಕರ್ಮಿ-ಪತ್ರಕರ್ತ-ಪ್ರಕಾಶಕರಾಗಿ ಸಾಹಿತ್ಯದ ಸೇವೆ ಮಾಡಿದ್ದರು: ಹೆಬ್ಬಾರ್
Team Udayavani, Dec 26, 2020, 3:07 PM IST
ಕಾರವಾರ: ಹಿರಿಯ ಸಾಹಿತಿ, ಅಂಕಣಕಾರರು ಹಾಗೂ ಯಲ್ಲಾಪುರ ತಾಲೂಕು ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ನಾ.ಸು. ಭರತನಳ್ಳಿ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಹಿತಿ, ರಂಗಕರ್ಮಿ, ಪತ್ರಕರ್ತ,
ಪ್ರಕಾಶಕರಾಗಿ ಸಾಹಿತ್ಯದ ಸೇವೆ ಮಾಡಿದ್ದರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವಿಶೇಷ ಬರಹಗಳ ಮೂಲಕವಾಗಿ ಯಲ್ಲಾಪುರದ ಸಾಹಿತ್ಯ ರಂಗಕ್ಕೆ ಹೊಸ ಮೆರಗನ್ನು ನೀಡಿದರು.
ಮುನ್ನಡೆ ಪತ್ರಿಕೆಗೆ ಪತ್ರಕರ್ತರಾಗಿ ಕೆಲಸ ಮಾಡಿದ್ದ ನಾಸು ಭರತನಳ್ಳಿ ಸೇರಿದಂತೆ ರಾಜ್ಯ ಪತ್ರಿಕೆಯಲ್ಲಿ ಅಂಕಣ ಬರೆಯುವುದರ ಮೂಲಕ ಗುರುತಿಸಿಕೊಂಡಿದ್ದರು. ನಾಸು ಅವರ ನಿಧನದಿಂದ ತಾಲೂಕಿನ ಸಾಹಿತ್ಯ ರಂಗವು ಸಜ್ಜನರನ್ನು ಕಳೆದುಕೊಂಡಿದೆ ಎಂದಿದ್ದಾರೆ. ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಸಚಿವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೂರುಸಾವಿರ ಮಠದ ರಕ್ಷಣೆಗೆ ಮುಂದಾಗಿದ್ದಕ್ಕೆ ಜೀವಬೆದರಿಕೆ: ದಿಂಗಾಲೇಶ್ವರ ಸ್ವಾಮೀಜಿ
ಗಣ್ಯರ ಕಂಬನಿ
ಹಿರಿಯ ಸಾಹಿತಿಗಳು, ಖ್ಯಾತ ಅಂಕಣಕಾರ ನಾ.ಸು ಭರತನಳ್ಳಿ ಅವರ ನಿಧನದಿಂದ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದುಅವರ ನೆನಪು ಶಾಶ್ವತ ಎಂದು ಚೇತನಾ ಸಹಕಾರಿ ಮುದ್ರಣಾಲಯದ ಅಧ್ಯಕ್ಷ, ಸಹಕಾರಿ ರತ್ನ ಪುರಸ್ಕೃತ ಜಿ.ಎಮ್ ಹೆಗಡೆ ಹುಳಗೋಳ ಕಂಬನಿ ಮಿಡಿದಿದ್ದಾರೆ.
ಕಳೆದ ಮೂವತ್ತೆರಡು ವರ್ಷಗಳಿಂದ ಚೇತನಾ ಸಹಕಾರಿ ಮುದ್ರಣಾಲಯದ ಸಂಸ್ಥಾಪಕ ನಿರ್ದೇಶಕರಾಗಿ, ಹಾಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಂಸ್ಥೆಯ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇವಲ ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಹಕಾರಿ ಕ್ಷೇತ್ರದಲ್ಲಿನ ಅವರ ಸಾಧನೆಯ ಸಂಗತಿಗಳು ಎಲೆಮರೆಯ ಕಾಯಿ ಇದ್ದಂತೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.
ತಮ್ಮ ಕೊನೆ ದಿನಗಳಲ್ಲಿಯೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನಾ.ಸು ಅವರ ನಿಧನಕ್ಕೆ ಚೇತನಾ ಸಹಕಾರಿ ಮುದ್ರಣಾಲಯದ ನಿರ್ದೇಶಕರಾದ ಎಸ್.ಪಿ ಶೆಟ್ಟಿ, ಎನ್.ಆರ್ ಹೆಗಡೆ ಬುಗಡಿಮನೆ, ಪರಮೇಶ್ವರ ಹೆಗಡೆ ಕಾಗೇರಿ, ಸಲಹೆಗಾರ ಪಿ.ವಿ. ಹೆಗಡೆ ಕಂಪ್ಲಿ ಹಾಗೂ ಸಂಸ್ಥೆ ಸಿಬ್ಬಂದಿ ದುಃಖ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಲ್ಲಾಪುರ ಬಳಿ ಭೀಕರ ಅಪಘಾತ: ಪ್ರಧಾನಿ ಮೋದಿ ಸಂತಾಪ, ಕೇಂದ್ರ ಸರಕಾರದಿಂದ ಪರಿಹಾರ ಘೋಷಣೆ
Yellapur; ಹೆದ್ದಾರಿಯಲ್ಲಿ ಭೀಕರ ಅಪಘಾ*ತ:10 ಮಂದಿ ದಾರುಣ ಸಾ*ವು
Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುತ್ತಿದ್ದ ಯುವಕರ ಚಳಿ ಬಿಡಿಸಿದ ಪೊಲೀಸರು
Dandeli: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್