Sirsi: ಶಂಕರ ಪರಂಪರೆಯ ಸ್ವರ್ಣವಲ್ಲೀ‌ ಮಠದಲ್ಲಿ ನಾಳೆ ಸನ್ಯಾ‌ಸ ಸ್ವೀಕಾರ


Team Udayavani, Feb 21, 2024, 3:35 PM IST

Sirsi: ಶಂಕರ ಪರಂಪರೆಯ ಸ್ವರ್ಣವಲ್ಲೀ‌ ಮಠದಲ್ಲಿ ನಾಳೆ  ಸನ್ಯಾ‌ಸ ಸ್ವೀಕಾರ

ಶಿರಸಿ: ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾ‌ಸ್ವಾಮೀಜಿಗಳ  ಉತ್ತರಾಧಿಕಾರಿ ಹಾಗೂ ಶಿಷ್ಯ ಸ್ವೀಕಾರ ಫೆ.22ರಂದು‌ ನಡೆಯಲಿದೆ. ಈ ಕ್ಷಣಕ್ಕೋಸ್ಕರ ಮಠದ ಶಿಷ್ಯ ಭಕ್ತರು‌ ಕಾತರದಿಂದ ಕಾಯುತ್ತಿದ್ದಾರೆ.

ಫೆ.18ರಿಂದ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳ‌‌ ಮೂಲಕ ನಡೆಯುತ್ತಿದ್ದು, ಗುರುವಾರ ಯಲ್ಲಾಪುರದ ಗಂಗೆ ಮನೆಯ ಬ್ರಹ್ಮಚಾರಿ ಶ್ರೀನಾಗರಾಜ ಭಟ್ಟರು ಸಂಸ್ಥಾನದ 55ನೇ ಯತಿಗಳಾಗಿ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಲಿದ್ದಾರೆ.

ಬೆಳಿಗ್ಗೆ ಶಾಲ್ಮಲಾ‌ ನದಿಯಲ್ಲಿ ಜಲಾಶಯಗಮನ, ಸಾವಿತ್ರೀ ಪ್ರವೇಶ, ಪ್ರೇಷೋಚ್ಛಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ‌ಮಹಾ ವಾಕ್ಯೋಪದೇಶ, ನಾಮಕರಣ, ಪರ್ಯಂಕಶೌಚ, ಶ್ರೀ ಮಠದಲ್ಲಿ ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ.

ವಿವಿಧ ಯತಿಗಳು ಸಾನ್ನಿಧ್ಯ‌ ನೀಡಲಿದ್ದಾರೆ.  ನೂತನ ಯತಿಗಳ‌ ನಾಮಧೇಯ‌ ಕೂಡ ಘೋಷಣೆ ಆಗಲಿದೆ.

ಮಧ್ಯಾಹ್ನ 3.30ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮ ಸಭೆ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ‌ ಸಾನ್ನಿಧ್ಯದಲ್ಲಿ ನಡೆಯಲಿದೆ.

ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾ‌ನಂದ‌ ಮಹಾ ಸ್ವಾಮೀಜಿ, ಕೂಡಲಿ ಶೃಂಗೇರಿ‌ ಮಠದ ಶ್ರೀವಿದ್ಯಾ ವಿಶ್ವೇಶ್ವರ ಭಾರತೀ‌ ಮಹಾ ಸ್ವಾಮೀಜಿ, ಹೊಳೆನರಸಿಪುರದ ಪ್ರಕಾಶಾನಂದೇಂದ್ರ ಸರಸ್ವತೀ‌ ಮಹಾಸ್ವಾಮೀಜಿ, ಕಾಸರಗೋಡು ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ‌ ಮಹಾ ಸ್ವಾಮೀಜಿಗಳು, ಶ್ರೀಮನ್ನೆಲಮಾವುಮಠದ ಶ್ರೀಮಾಧವಾನಂದ ಭಾರತೀಯ ಮಹಾ ಸ್ವಾಮೀಜಿ, ತುರುವೇಕೆರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು, ಕಾಂಚಿಂಪುರಂದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿ, ಶ್ರೀಅಂಜನಾನಂದ ತೀರ್ಥ ಸ್ವಾಮೀಜಿ ಹಾಗೂ ನೂತನ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ.  ಕೇಂದ್ರ ಸಚಿವ ಪ್ರಹ್ಕಾಯ ಜೋಶಿ ಪಾಲ್ಗೊಳ್ಳುವರು.  ಇದೇ ವೇಳೆ  ಶ್ರೀಗಳಿಂದ ವಿರಚಿತ ಯೋಗ ವಾಸಿಷ್ಠ ಪ್ರಥಮ ಸಂಪುಟ ಬಿಡುಗಡೆ ಆಗಲಿದೆ. ಗುರುವಾರ ಶ್ರೀಮಠಕ್ಕೆ ೨೦ ಸಹಸ್ರಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಇದೆ.

ವಿವಿಧ ಧಾರ್ಮಿಕ ಕಾರ್ಯಕ್ರಮ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕಂಚಿಪುರದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿಯವರ  ಸಾನ್ನಿಧ್ಯದಲ್ಲಿ ಶತಚಂಡಿ ಹವನದ ಪೂರ್ಣಾಹುತಿ ಬುಧವಾರ ನಡೆಯಿತು. ಬ್ರಹ್ಮ ಚಾರಿ ನಾಗರಾಜ ಭಟ್ಟರ ಸಂನ್ಯಾಸ ಗ್ರಹಣ ಸಂಕಲ್ಪ, ಪುಣ್ಯಾಹ, ನಾಂದಿಶ್ರಾದ್ಧ, ಮಾತೃಕಾ ಪೂಜಾದಿ ಕರ್ಮಗಳು ಅಗ್ನಿಹೋತ್ರಿ ಭಾಲಚಂದ್ರ ಉಪಾಧ್ಯಾಯರು ಗೋಕರ್ಣ ಹಾಗೂ ಶ್ರೀಮಠದ ವೈದಿಕರು, ಅನೇಕ ವಿದ್ವಾಂಸರಿಂದ ನಡೆದವು.

8  ಸಹಸ್ರಕ್ಕೂ ಅಧಿಕ ಭಕ್ತರಿಗೆ ಅನ್ನ‌ ಪ್ರಸಾದ ವಿತರಣೆ

ಸ್ವರ್ಣವಲ್ಲೀ ‌ಮಠದಲ್ಲಿ ನಡೆಯುತ್ತಿರುವ ನಾಲ್ಕನೇ‌ ದಿನದ ಅನ್ನ ಪ್ರಸಾದ ವಿತರಣೆಯೂ 8 ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಶ್ರದ್ಧೆಯಿಂದ ವಿತರಿಸಲಾಯಿತು. ಕೇವಲ ಒಂದುವರೆ ತಾಸಿನಲ್ಲಿ ಪ್ರಸಾದ ವಿತರಣೆ‌ ನಡೆಯಿತು.

ಅನ್ನ‌ ಪ್ರಸಾದದಲ್ಲಿ ಸಂಬಾರ, ಸಾಸಿವೆ, ಪಲ್ಯ, ಪಾಯಸ, ಬುಂದಿಲಾಡುಗಳನ್ನು 15 ಕೌಂಟರ್ ಮೂಲಕ ವಿತರಿಸಲಾಯಿತು.

ಎರಡು ಕೌಂಟರ ಮೂಲಕ ಚಹಾ, ಕಷಾಯ, ಅವಲಕ್ಕಿ, ಮೊಸರು ನೀಡಿ ಆಗಮಿಸಿದ ಶಿಷ್ಯ ಭಕ್ತರಿಗೆ ಬೆಳಗಿನಿಂದ‌ ಸಂಜೆ ತನಕ ವಿತರಿಸಲಾಯಿತು. ಭಕ್ತರು ತಮ್ಮ ಶಕ್ತ್ಯಾನುಸಾರ ಹಾಲು, ಮೊಸರು, ಅಡಿಕೆ ಹಾಳೆ, ಬೆಲ್ಲ, ಕಿರಾಣಿ, ತುಪ್ಪ, ತರಕಾರಿ, ಅಕ್ಕಿ, ಕಾಯಿಗಳೂ ಸೇವೆಯಾಗಿ ಸಮರ್ಪಿಸಿದರು.

ಆಹಾ ಚೆಲುವಾಯಿತು‌ ಮಠ

ಸ್ವರ್ಣವಲ್ಲೀ‌ ಮಠದಲ್ಲಿ ರಾತ್ರಿ ಬೆಳಗಾಗುವದರೊಳಗೆ ಹೂವಿನ‌ ಅಲಂಕಾರದ ಮೂಲಕ ಸುಂದರವಾಗಿ ಅಲಂಕರಿಸಲಾಗಿತ್ತು. ಬೆಂಗಳೂರಿನಲ್ಲಿ ವೈದಿಕರಾಗಿರುವ ಮೂಲತಃ ಯಲ್ಲಾಪುರ ಮೊಳೆಮನೆಯ ಪ್ರಸನ್ನ ಭಟ್ಟ, ರಾಮಚಂದ್ರ ಭಟ್ಟ ಸಹೋದರರು ಬೆಂಗಳೂರಿನಿಂದ ಐದು‌ ಲಕ್ಷ ರೂಪಾಯಿಗೂ ಅಧಿಕ ಪುಷ್ಪಗಳನ್ನು ತರಿಸಿ ಸೇವಾ ಅಲಂಕರಿಸಲಾಗಿತ್ತು. ಇದು ಎಲ್ಲರ‌ ಗಮನ ಸೆಳೆಯಿತು.

ಸಾಂಪ್ರದಾಯಿಕ‌ ಉಡುಪೇ‌ ಎಲ್ಲ!

ಶ್ರೀ ಮಠದಲ್ಲಿ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವದ ಲೈವ್ ಹಾಗೂ ಮಠದ ಐದಾರು ಕಡೆ ಸ್ಕ್ರೀನ್, ಟಿವಿ ವ್ಯವಸ್ಥೆ ಮಾಡಲಾಗಿತ್ತು. ಖುಷಿಯಿಂದ ಖುರ್ಚಿಯ ಮೇಲೆ‌ ಕುಳಿತು ವೀಕ್ಷಿಸಿದರು. ಕಾಲು ತೊಳೆದೂ ಮಠದ ಆವರಣಕ್ಕೆ ಬರುವ ಬಹುತೇಕ‌ ಶಿಷ್ಯರು ಲುಂಗಿ, ಶಾಲು ಧರಿಸಿ ಸಾಂಪ್ರದಾಯಿಕ‌ ಉಡುಪಿನಲ್ಲಿ ಗಮನ ಸೆಳೆದರು. ಸ್ವರ್ಣವಲ್ಲೀ ಭಗವತ್ಪಾದ ಪ್ರಕಾಶನದ ಪುಸ್ತಕಗಳ‌ ಮಾರಾಟ ಪ್ರದರ್ಶನ, ಕುಠೀರ ವೇದಿಕೆ ಕೂಡ ಗಮನ ಸೆಳೆಯಿತು.

ಆರಾಮ, ಬನ್ನಿ….

ರಾಷ್ಟ್ರ‌ಧರ್ಮ, ಸಂಸ್ಕೃತಿ, ಸನಾತನ‌, ಜಾಗೃತಿಯ‌ ಫಲಕಗಳು, ಮಾರ್ಗಸೂಚಿಗಳು, ಮಾಹಿತಿ ನೀಡುವ ಕಾರ್ಯಕರ್ತರು ಹೀಗೆ ಗಮನ ಸೆಳೆದವು.

ಪ್ರವೇಶ ದ್ವಾರದಲ್ಲೇ ಭೈರುಂಬೆಯ‌ ಪ್ರೌಢ ಶಾಲೆಯ  ಮಕ್ಕಳು ತಿಲಕ ಇಟ್ಟು, ‘ಆರಾಮ‌, ಬನ್ನಿ‌’ ಎಂದು ಮಾತನಾಡಿಸಿ ಗಮನ‌ ಸೆಳೆದರು.

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು

Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.