ಜಾಲತಾಣದಲ್ಲಿ ಸ್ಪೀಕರ್ ಕಾಗೇರಿ ಅವಹೇಳನ-ಆರೋಪಿ ಬಂಧನ
Team Udayavani, Sep 18, 2022, 2:49 PM IST
ಹೊನ್ನಾವರ: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕುರಿತು ಜಿಲ್ಲೆಯ ಸಾಮಾಜಿಕ ಜಾಲತಾಣವೊಂದರಲ್ಲಿ ಬಂದ ಕಾಮೆಂಟ್‌ನಲ್ಲಿ ಅಗೌರವದ ಶಬ್ಧ ಬಳಸಿ ಟೀಕೆ ಮಾಡಿ ಉದ್ರೇಕಿಸಿದ ಮತ್ತು ಇದಕ್ಕೆ ಕಾಮೆಂಟ್ ಹಾಕಿದ ಒಬ್ಬರು ? ಕಾಗೇರಿಗೆ……ನಲ್ಲಿ ಹೊಡೆಯಬೇಕು? ಎಂದು ಕಾಮೆಂಟ್ ಹಾಕಿದ್ದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಕುರಿತು ಸಾಮಾಜಿಕ ಕಾರ್ಯಕರ್ತ ಹೊಸಾಕುಳಿಯ ವಸಂತ ಈಶ್ವರ ನಾಯ್ಕ ಎಂಬವರು ಸಾಮಾಜಿಕ ಜಾಲತಾಣದ ಎಡ್ಮಿನ್ ಅಶೋಕ ಎಂಬವರ ಮೇಲೆ ಮತ್ತು ಅವಹೇಳನಕಾರಿ ಕಾಮೆಂಟ್ ಹಾಕಿದ ಗಣೇಶ ಶಂಕರ ಗೌಡ ಬಡಗಣಿ ಎಂಬವರ ಮೇಲೆ ದೂರು ನೀಡಿದ್ದರು.
ಪೊಲೀಸರು ತಕ್ಷಣ ಕಲಂ 107, 151 ಸಿಆರ್‌ಪಿಸಿ ಅನ್ವಯ ಎನ್.ಸಿ. ನಂ. 294/2022 ದಿನಾಂಕ 16-9-2022 ಪ್ರಕಾರ ಗಣೇಶ ಶಂಕರ ಗೌಡನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಅಗತ್ಯಬಿದ್ದರೆ ಇದಕ್ಕೆ ಸಂಬಂಧಿಸಿದ ಇತರರ ಮೇಲೂ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಿಪಿಐ ಹೇಳಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಅವರು ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕಾದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಕುರಿತು ಚುಕ್ಕಿ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಆರಂಭಿಸಿದ್ದರು. ಈ ಪ್ರಶ್ನೆಗೆ ಉತ್ತರ ಕೊಡಬೇಕಾದ ಆರೋಗ್ಯ ಸಚಿವರು ಅನಾರೋಗ್ಯದಿಂದ ಸದನದಲ್ಲಿ ಗೈರುಹಾಜರಿರುವುದರಿಂದ ಉತ್ತರ ಸಿಗುವುದಿಲ್ಲ, ಆದ್ದರಿಂದ ಇನ್ನೊಂದು ದಿನ ಅವಕಾಶ ಕೊಡುತ್ತೇನೆ. ಇದು ನಮ್ಮ ಜಿಲ್ಲೆಯ ಪ್ರಶ್ನೆಯೂ ಹೌದು ಎಂದು ಕಾಗೇರಿ ಸಮಜಾಯಿಷಿ ನೀಡಿದ್ದರು.
ಸರಿಯಾಗಿ ಕೇಳಿಸಿಕೊಂಡರೆ ಇದರಲ್ಲಿ ತಪ್ಪೇನು ಇಲ್ಲ, ಕಾಗೇರಿಯವರ ಶುಭ್ರ ವ್ಯಕ್ತಿತ್ವಕ್ಕೆ ಮತ್ತು ಜಿಲ್ಲೆಯಲ್ಲಿರುವ ಅವರ ಪ್ರಭಾವಕ್ಕೆ ಮಸುಕು ಉಂಟು ಮಾಡುವ ದೃಷ್ಟಿಯಿಂದ ಕೆಲವರು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣ ಬಳಸಿಕೊಂಡಿದ್ದು ಸರಿಯಲ್ಲ, ಇದನ್ನು ಖಂಡಿಸುತ್ತೇವೆ ಎಂದು ಅಖೀಲ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಎಚ್. ಆರ್. ಗಣೇಶ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಹಲವರು ಈ ಘಟನೆಯಿಂದ ನೊಂದುಕೊಂಡಿದ್ದು ಕಾಗೇರಿಯವರ ತಪ್ಪೇನು ಇಲ್ಲ, ಅವರು ವಿಧಾನಸಭೆಯ ಹಿರಿಯ ಸದಸ್ಯರಾಗಿ, ಸಚಿವರಾಗಿ, ವಿಧಾನಸಭಾ ಸ್ಪೀಕರ್ ಆಗಿ ವಿವಾದಾತೀತ ವ್ಯಕ್ತಿಯಾಗಿದ್ದಾರೆ. ಸಾಮಾಜಿಕ ಜಾಲತಾಣದ ದುರುಪಯೋಗ ಇತ್ತೀಚೆ ಹೆಚ್ಚಾಗುತ್ತಿದ್ದು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.