ಹಸಿ ಅಡಕೆ ಕೊಯ್ಲಿಗೆ ಯೋಜನೆ
Team Udayavani, Dec 22, 2019, 3:37 PM IST
ಶಿರಸಿ: ರೈತಸ್ನೇಹಿ ಯೋಜನೆಗಳಿಂದ ಸಹಕಾರಿ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು ತನ್ನ ಸದಸ್ಯರಿಗಾಗಿ ರೈತರ ಅಡಕೆ ಬೆಳೆ ಕೊಯ್ದು, ಹಸಿ ಅಡಕೆ ವಿಕ್ರಯಿಸುವ ಹೊಸ ಯೋಜನೆ ಜಾರಿಗೆ ತರುವ ಮೂಲಕ ಗಮನಸೆಳೆದಿದೆ.
ಕೃಷಿ ಕೂಲಿ ಸಮಸ್ಯೆ, ರೈತ ಕುಟುಂಬದಲ್ಲಿ ದುಡಿಯುವ ಕೈಗಳ ಕೊರತೆಯಿಂದಾಗಿ ಇಂದು ಹಲವು ಕುಟುಂಬಗಳಿಗೆ ತಾವು ಬೆಳೆದ ಬೆಳೆ ಕಟಾವು ಮಾಡುವುದು ಸಮಸ್ಯೆಯಾಗಿದೆ. ಡಿಸೆಂಬರ ತಿಂಗಳೆಂದರೆ ಎಲ್ಲ ಕಡೆ ಒಂದೇ ಸಮಯಕ್ಕೆ ಕೊನೆ ಕೊಯ್ಲು ಆರಂಭವಾಗುವುದರಿಂದ ಕೊನೆ ಗೌಡರಿಂದ ಹಿಡಿದು, ಕೃಷಿ ಕಾರ್ಮಿಕರ ಕೊರತೆ ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಕೊಯ್ಲು ಸಹ ಆಗದಂತಾಗುತ್ತದೆ. ಇದು ಅಡಕೆ ಬೆಳೆಗಾರರ ಸರ್ವೇ ಸಾಮಾನ್ಯ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘವು ತನ್ನ ಸದಸ್ಯರಿಗಾಗಿ ಈ ಯೋಜನೆ ರೂಪಿಸಿದೆ.
ಚಿಕ್ಕ ಹಿಡುವಳಿದಾರರಿಂದ ಹಿಡಿದು ಮಧ್ಯಮ, ದೊಡ್ಡ ಬೆಳೆಗಾರರಾದ ಸಂಘದ ಎಲ್ಲ ಸದಸ್ಯ ರೈತರಿಗಾಗಿ ಸಂಘವು ಈ ಪ್ರಮುಖವಾದ ಯೋಜನೆ ಪ್ರಸಕ್ತ ವರ್ಷದಿಂದ ಜಾರಿಯಲ್ಲಿ ತಂದಿದೆ. ಕಳೆದ ವರ್ಷವಷ್ಟೇ ಗ್ರಾಮೀಣ ಭಾಗದಲ್ಲಿ ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ ಸಂಘವು ಈ ವರ್ಷದಿಂದ ಈ ಯೋಜನೆ ರೈತರಿಗೆ ಅನುಕೂಲವಾಗಲಿದೆ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ ಹೆಗಡೆ ಕೊಟ್ಟೆಗದ್ದೆ ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ಕೃಷಿ ಕಾರ್ಮಿಕರಿಗೆ ಖಾಯಂ ಉದ್ಯೋಗ, ರೈತರ ದೃಷ್ಟಿಯಿಂದ ಅಡಕೆ ಕೊಯ್ಲು ಮತ್ತಷ್ಟು ಸುಲಭವಾಗಲಿದೆ ಎಂದು ಸಂಘದ ಕೃಷಿ ಸಲಹೆಗಾರ ಗುರುಮೂರ್ತಿ ಹೆಗಡೆ ತುಂಬೆಮನೆ ಹೇಳಿದ್ದಾರೆ. ಸಂಘವೇ ನಿರ್ಧರಿಸಿದ ದಿನದಂದು ಕೊನೆ ಗೌಡರು, ಕೃಷಿ ಕಾರ್ಮಿಕರನ್ನು ರೈತನ ತೋಟಕ್ಕೆ ಕಳುಹಿಸಿ ಕೊನೆಕೊಯ್ಲು ನಡೆಸಿಕೊಡುತ್ತದೆ. ಸಂಘದ ವಾಹನದ ಮೂಲಕ ಸಾಗಾಣಿಕೆ ಮಾಡಿ ಹಸಿ ಅಡಕೆ ಟೆಂಡರ ಪ್ರಕ್ರಿಯೆಯ ಮೂಲಕ ಪಾರದರ್ಶಕ ರೀತಿಯಲ್ಲಿ ಹಸಿ ಅಡಕೆ ಮಾರಾಟ ಕೂಡ ಮಾಡಿಸಿಕೊಡುತ್ತದೆ. ಇದರಿಂದ ರೈತನಿಗೆ ನಿರಾತಂಕವಾಗಿ ವರ್ಷದ ಕೆಲಸ ನಡೆಯುವುದಲ್ಲದೆ, ಅನಗತ್ಯ ಒತ್ತಡ ಕಡಿಮೆ ಮಾಡುತ್ತದೆ. ಪ್ರಸಕ್ತ ವರ್ಷ ಹೆಗಡೆಕಟ್ಟಾ ಹಸಿ ಅಡಕೆ ಟೆಂಡರಿನಲ್ಲಿ ಪ್ರತಿ ಕ್ವಿಂಟಲಿಗೆ 4350ರ ಗಡಿ ದಾಟಿ ಹಾಗೂ ಗೋಟು ಅಡಕೆ 4580 ರೂಪಾಯಿಗೂ ಹೆಚ್ಚಿನ ದರಕ್ಕೆ ಮಾರಾಟವಾಗಿ ಹೆಗಡೆಕಟ್ಟಾ ಭಾಗದ ರೈತರಲ್ಲಿ ಹರ್ಷ ಮೂಡಿಸಿದ್ದಷ್ಟೇ ಅಲ್ಲದೆ ನೂತನ ಕೊನೆಕೊಯ್ಯುವ ಯೋಜನೆ ಮತ್ತಷ್ಟು ಆಶಾಭಾವನೆ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.