ರೈತರಿಗೆ ಕೈಗೆಟುಕದ ಸರಕಾರಿ ಸೌಲಭ್ಯ


Team Udayavani, Jan 4, 2018, 3:29 PM IST

04-32.jpg

ಕುಮಟಾ: ತಾಲೂಕಿನ ಬಾಡ, ಕಾಗಲ, ಹೆಗಡೆ ಪಂಚಾಯತ್‌ ವ್ಯಾಪ್ತಿಯ ರೈತರು ಕೋಡ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 800 ಎಕರೆಗೂ ಹೆಚ್ಚು ಬಹೂಪಯೋಗಿ ಗಜನಿಗಳನ್ನು ಹೊಂದಿದ್ದರೂ ಜನವಸತಿ ಇಲ್ಲ ಎಂಬ ಒಂದೇ ಕಾರಣಕ್ಕೆ ಸರಕಾರದ ಯಾವುದೇ ಸೌಲಭ್ಯಗಳು ಕೈಗೆಟುಕದ ವಿಚಿತ್ರ ಸನ್ನಿವೇಶ ಎದುರಿಸುತ್ತಿದ್ದಾರೆ.

ಕೋಡ್ಕಣಿ ಗ್ರಾಮ ಪಂಚಾಯತದಲ್ಲಿ ಕಪ್ಪೆ ಕೂರ್ವೆ, ಮಾಸೂರುಕೂರ್ವೆ, ಐಗಳಕೂರ್ವೆ ಹಾಗೂ ಬೇಲೆ ಎಂಬ ನಡುಗಡ್ಡೆ ಗ್ರಾಮಗಳಿವೆ. ಈ ಪೈಕಿ ಐಗಳಕೂರ್ವೆ ಹಾಗೂ ಬೇಲೆಯಲ್ಲಿ ಮಾತ್ರ ಜನವಸತಿಯಿದೆ. ಆದರೆ ಜನವಸತಿ ಇಲ್ಲದ ಕಪ್ಪೆ ಕೂರ್ವೆ,
ಮಾಸೂರುಕೂರ್ವೆಯ ಭೂಮಾಲಿಕತ್ವ ಹೊಂದಿದ  ಗಜನಿಯ ರೈತರಿಗೆ ತಮ್ಮ ಜಮೀನಿಗೆ ಸಂಬಂಧಿ ಸಿಯಾವುದೇ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಕಪ್ಪೆಕೂರ್ವೆ ಭಾಗದಲ್ಲಿ ಕಪ್ಪೆಕೂರ್ವೆ ಗಜನಿ, ದೊಡ್ಡ ಮೂಳೆ ಗಜನಿ, ಸಣ್ಣಮೂಳೆ ಗಜನಿ, ಯಂಕಣ್ಣ ಗಜನಿಗಳಿವೆ. ಮಾಸೂರು ಕೂರ್ವೆಯಲ್ಲಿ ಮಾಸೂರುಕೂರ್ವೆ, ಕೇಕಿನಕೋಡಿ, ರಂಗನಬೇಲೆ, ಏಳು ಭಾಗ, ಹಾಂಬರಕೋಡಿ, ಮೂಡ್ಲತರ, ಕಲಕಾಟ, ಕೆಳಗಿನಬೈಲ್‌ ಹೀಗೆ ಸುಮಾರು 800 ಎಕರೆಯಷ್ಟು ಗಜನಿ ಕ್ಷೇತ್ರ ಇದೆ.

ಸುಮಾರು 400 ರೈತ ಕುಟುಂಬಗಳ ಜ್ವಲಂತ ಸಮಸ್ಯೆ ಏನೆಂದರೆ ತಮ್ಮ ಕುಟುಂಬದ ಹೊಟ್ಟೆ ಹೊರೆಯುವ ಭೂಮಿ ಇಲ್ಲಿದ್ದರೂ ಅವರೆಲ್ಲರ ವಸತಿ ಮಾತ್ರ ಬಾಡ, ಕಾಗಾಲ ಹಾಗೂ ಹೆಗಡೆ ಈ ಮೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ಹೀಗಾಗಿ
ಸರಕಾರದ ಸೌಲಭ್ಯಗಳ ಬಳಕೆಯಲ್ಲಿ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಕೃಷಿ ಭೂಮಿಯಲ್ಲಿ ವ್ಯವಸಾಯಕ್ಕಾಗಿ ಸರ್ಕಾರದ ಸಹಕಾರವನ್ನು ಯಾಚಿಸಿದರೆ ಆ ಅರ್ಜಿಗಳು ತಿರಸ್ಕೃತವಾಗುತ್ತಲೇ ಬಂದಿವೆ. ಕೃಷಿ ಯೋಜನೆಗೆ 
ಬೇಕಾದ ದಾಖಲಾತಿಗಳನ್ನು ಸಲ್ಲಿಸುವಾಗ ವಾಸ್ತವ್ಯದ ಮನೆ ನಂಬರ್‌ ಒಂದು ಪಂಚಾಯತಕ್ಕೆ ಸೇರಿದರೆ ಜಮೀನು ಇನ್ನೊಂದು ಪಂಚಾಯತಕ್ಕೆ ಸೇರಿದೆ.

ಹಾಗಿದ್ದರೆ ಜನವಸತಿಯಿಲ್ಲದ ಗ್ರಾಮದಲ್ಲಿ ಮಾಡುವ ಕೃಷಿಗೆ ಸರಕಾರದ ಪ್ರೋತ್ಸಾಹವಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಉಪ್ಪು ನೀರು ನುಗ್ಗುವ ಇಲ್ಲಿ ರೈತರೇ ತಾತ್ಕಾಲಿಕ ಮಣ್ಣಿನ ಬಂಡ್‌ನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ನೀರು ತುಂಬುವುದರಿಂದ ಯಾರೂ ಮನೆ ಕಟ್ಟುವ ಧೈರ್ಯ ಮಾಡುತ್ತಿಲ್ಲ. ತಾತ್ಕಾಲಿಕ ಮನೆಗಾದರೂ ಕೋಡ್ಕಣಿ ಪಂಚಾಯತ್‌ ಪರವಾನಿಗೆ ನೀಡಿದರೆ, ಕೃಷಿಕಾರ್ಯ ಸಂದರ್ಭದಲ್ಲಿ ಉಪಯೋಗವಾಗುತ್ತದೆ ಎಂದು ರೈತರು ಹೇಳುತ್ತಾರೆ.

ಎನ್‌.ಆರ್‌.ಇ.ಜಿ ಮತ್ತಿತರ ವಿವಿಧ ಯೋಜನೆಯ ಸೌಲಭ್ಯ ಪಡೆಯಲು ಕೋಡ್ಕಣಿ ಗ್ರಾಪಂ ವ್ಯಾಪ್ತಿಯಲ್ಲಿನ ರೈತರ ಜಮೀನುಗಳನ್ನು
ಅವರ ವಾಸ್ತವ್ಯವಿರುವ ಕಾಗಾಲ, ಬಾಡ ಹಾಗೂ ಹೆಗಡೆ ಗ್ರಾಪಂ ವ್ಯಾಪ್ತಿಗೆ ಸೇರಿಸುವುದೊಂದೇ ದಾರಿ ಉಳಿದಿದೆ. ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ 1993ರ ಅಧ್ಯಾಯ 3 ರನ್ವಯ ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಇನ್ನೊಂದು ಗ್ರಾಪಂ ವ್ಯಾಪ್ತಿಗೆ ಸೇರಿಸುವ ಹಾಗೂ ಘೋಷಿಸುವ ಅಧಿಕಾರವು ಜಿಲ್ಲಾಧಿಕಾರಿಗಳಿಗೆ ಇರುವುದರಿಂದ ಈ ನಿಟ್ಟಿನಲ್ಲಿ ಕ್ರಮವಾಗಲಿ ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. 

ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬಹುದು. ಕೃಷಿ ಕಾರ್ಯಚಟುವಟಿಕೆಗಳಿಗೆ ಬೇಕಾದ ಯಂತ್ರೋಪಕರಣಗಳನ್ನು ನೀಡಬೇಕು. ಗಜನಿಗಳಿಗೆ ರಕ್ಷಣಾ ಗೋಡೆ ನಿರ್ಮಿಸಬೇಕು. ಮಾಸೂರಿನಿಂದ ಶ್ರೀ ಬಬ್ರುಲಿಂಗೇಶ್ವರ ದೇವಸ್ಥಾನಕ್ಕೆ ತೂಗುಸೇತುವೆ ನಿರ್ಮಿಸಬೇಕು. ಎಲ್ಲ ಕೃಷಿ ಸೌಲಭ್ಯವನ್ನು ಒದಗಿಸಬೇಕು. 
 ಜಿ.ಕೆ. ಪಟಗಾರ ಕಾಗಾಲ, ರೈ

ಶಂಕರ ಶರ್ಮಾ

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.