![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 26, 2022, 1:13 PM IST
ಶಿರಸಿ: ಈಗ ಕೇಂದ್ರ ಸರಕಾರ ಜಾರಿಗೆ ತಂದ ಅಗ್ನಿಪಥದಿಂದ ದೇಶ ಕಾಯುವ ನವ ಯೋಧರಿಗೆ ಪೂರ್ಣ ಪ್ರಮಾಣದ ತರಬೇತಿಯೂ ಇಲ್ಲ. ಅತ್ತ ದೀರ್ಘ ಕಾಲದ ಉದ್ಯೋಗವೂ ಇಲ್ಲ ಎಂಬತಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆತಂಕ ವ್ಯಕ್ತಪಡಿಸಿದರು.
ಶನಿವಾರ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಅಗ್ನಿಪಥ ಜನರ ಜೊತೆ ಸಮಾಲೋಚಿಸಿ ಜಾರಿಗೆ ತರಬೇಕಿತ್ತು. ಗಡಿ ಭದ್ರತೆ ಆಯ್ಕೆಯಲ್ಲಿ ಹುಡುಗಾಟ ಮಾಡಬಾರದು ಎಂದೂ ಹೇಳಿದರು. ಅಗ್ನಿಪಥದ ವಿರುದ್ಧ ರಾಜ್ಯದ ಎಲ್ಲಡೆ ಧರಣಿ ಮಾಡಲಾಗುತ್ತಿದೆ. ಅಂದು ಎಲ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತಿಯುತ ಧರಣಿ ನಡೆಯಲಿದೆ ಎಂದರು.
ಸರಕಾರ ಈ ಯೋಜನೆ ಕೈ ಬಿಡಬೇಕು ಅಥವಾ ಬದಲಾಯಿಸಬೇಕಿದೆ. ಸೇನೆಗೆ ಸೇರಿಸಿಕೊಂಡ ಯುವಕರನ್ನು ನಾಲ್ಕು ವರ್ಷದ ನಂತರ ಮನೆಗೆ ಕಳಿಸುತ್ತದೆ. ನಂತರ ಆ ಯುವಕರಿಗೆ ಉದ್ಯೋಗ ಎಲ್ಲಿ ಸಿಗುತ್ತದೆ. ತರಬೇತಿಯೂ ಇಲ್ಲ, ಉದ್ಯೋಗವೂ ಇಲ್ಲ ಎಂಬಂತಾಗುತ್ತದೆ ಎಂದೂ ಹೇಳಿದರು.
ಕೇವಲ ಆರು ತಿಂಗಳ ತರಬೇತಿ ಬೇಡ. ಅದರ ಅವಧಿ ಹೆಚ್ಚಿಸಬೇಕು. ಯೋಧ ಇಚ್ಛೆಪಟ್ಟಷ್ಟು ವರ್ಷ ಉದ್ಯೋಗ ನೀಡಬೇಕು. ಇಲ್ಲವಾದರೆ ಯೋಜನೆ ಕೈ ಬಿಟ್ಟು ಹೊಸ ಯೋಜನೆ ತರಬೇಕು ಎಂದರು.
ರಾಷ್ಟ್ರದ ಯೋಧರಿಗೂ ಗೌರವ ಹೆಚ್ಚಿಸುವ ಕೆಲಸ ಆಗಬೇಕು ಎಂದೂ ಪ್ರತಿಪಾದಿಸಿದ ಭೀಮಣ್ಣ, ಸೇನಾ ನಿವೃತ್ತಿ ಪಡೆದ ಯೋಧರಿಗೆ ಸಿಗಬೇಕಾದ ಸಕಲ ಸರಕಾರಿ ಗೌರವ ಕೂಡ ಅಲೆದಾಡದೇ ಸಿಗುವಂತೆ ಆಗಬೇಕು ಎಂದರು.
ವಕ್ತಾರ ದೀಪಕ ದೊಡೂxರು, ಎಸ್.ಕೆ. ಭಾವಗತ, ಬ್ಲಾಕ್ ಕಾಂಗ್ರೆಸ್ ಜಗದೀಶ ಗೌಡ, ಅಬ್ಟಾಸ ತೋನ್ಸೆ ಇತರರು ಇದ್ದರು.
ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್ ಜೂ.27 ರಂದು ಜನ ಜಾಗೃತಿ ಪ್ರತಿಭಟನೆ ನಡೆಸಲಿದೆ. ಅಂದು ಬೆಳಿಗ್ಗೆ 11 ಕ್ಕೆ ಬಿಡಕಿಬೈಲಿನ ಗಾಂಧಿ ಪ್ರತಿಮೆ ಎದುರು ಶಾಂತಿಯಿಂದ ಧರಣಿ ನಡೆಸಲಿದೆ. ಆರೂ ವಿಧಾನ ಸಭಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಯಲಿದೆ. –ಭೀಮಣ್ಣ ನಾಯ್ಕ, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್, ಶಿರಸಿ
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.