ಹೆಗಡೆಕಟ್ಟಾ ಸೊಸೈಟಿಯಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ
ರೈತರ ಗಮನ ಸೆಳೆದ ಕೃಷಿ ಯಂತ್ರ ಸಾಧನ
Team Udayavani, Jul 22, 2019, 3:57 PM IST
ಶಿರಸಿ: ಹೆಗಡೆಕಟ್ಟಾ ಸೊಸೈಟಿಯಲ್ಲಿ ಯಂತ್ರ ಪ್ರಾತ್ಯಕ್ಷಿಕೆ ನಡೆಯಿತು.
ಶಿರಸಿ: ಹೆಗಡೆಕಟ್ಟಾ ಸೊಸೈಟಿ ಆವಾರದಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ಜರುಗಿತು. ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ, ಟಿಎಂಎಸ್ ಶಿರಸಿ ಮತ್ತು ಹೆಗಡೆ ಆಗ್ರೋಟೆಕ್ ಕಡ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ರೈತರಿಗಾಗಿ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನಡೆಯಿತು.
ಇಲ್ಲಿನ ಜಡ್ಡಿಮನೆಯ ರವೀಂದ್ರ ಹೆಗಡೆ ಅವರ ತೋಟದಲ್ಲಿ ಅಡಕೆಗೆ ಕೆಳಗಿನಿಂದಲೇ ಮದ್ದು ಸಿಂಪಡಣೆ ಮಾಡುವ ಹೆಗಡೆ ಆಗ್ರೋಟೆಕ್ ಅವರಿಂದ ನಿರ್ಮಿತ ಟೆಲಿಸ್ಕೋಪಿಕ್ ದೋಟಿ, ಬ್ಯಾಟರಿ ಚಾಲಿತ ಪವರ್ ಸ್ಪ್ರೇಯರ್ ಮತ್ತು ಹಾಲು ಕರೆಯುವ ಯಂತ್ರದ ಬಗ್ಗೆ ರೈತರಿಗೆ ಸವಿವರವಾದ ಮಾಹಿತಿ ನೀಡಲಾಯಿತು.
ನೆಲದಿಂದಲೇ ಅರವತ್ತು ಹಾಗೂ ಎಂಭತ್ತು ಅಡಿ ಎತ್ತರದವರೆಗೆ ಮದ್ದನ್ನು ಸಿಂಪಡಿಸಲು ಈ ಯಂತ್ರದಿಂದ ಸಾಧ್ಯ. ಒಂದು ಬಾರಿ ಆರರಿಂದ ಎಂಟು ಡ್ರಮ್‌ಗಳ ವರೆಗೆ ಮದ್ದನ್ನು ಸಿಂಪಡಿಸುವಷ್ಟು ಬ್ಯಾಟರಿ ಶಕ್ತಿಯುತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ದರಕು ಬರಗುವ ಸಲಕರಣೆ, ಸಸ್ಯ ಬೀಜ ಹಾಗೂ ಬೀಜ ಬಿತ್ತುವ ಟ್ರೇ ಅಲ್ಲದೆ ಇನ್ನೂ ಅನೇಕ ಕೃಷಿ ಯಂತ್ರ ಸಾಧನಗಳು ರೈತರ ಗಮನ ಸೆಳೆದವು.
ಟಿಎಂಎಸ್ ಕೃಷಿ ತಜ್ಞ ಡಾ| ಕಿಶೋರ ಹೆಗಡೆ ಮಾತನಾಡಿ, ಬೋರ್ಡೋ ಮಿಶ್ರಣವನ್ನು ತಯಾರಿಸುವ ಹಾಗೂ ಸಿಂಪಡಣೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಕಡಿಮೆ ಮಳೆಯಾದರೂ ಕೊಳೆ ರೋಗ ಕಂಡು ಬರುತ್ತಿರುವ ಬಗ್ಗೆ ವಿವರಿಸಿದ ಅವರು, ಕಳೆದ ವರ್ಷದ ಫಂಗಸ್ ಈ ವರ್ಷವೂ ಬಾಧಿಸಿದೆ ಎಂದರು. ರೈತ ಸೇವೆಯ ವಿಷಯದಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತ ಗಮನ ಸೆಳೆದಿರುವ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಟಿಎಂಎಸ್ ಉಪಾಧ್ಯಕ್ಷರೂ ಆಗಿರುವ ಎಂ.ಪಿ. ಹೆಗಡೆ ಕೊಟ್ಟೇಗದ್ದೆ ತಮ್ಮ ಸಂಘದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತಜ್ಞರಿಂದ ಬೇಕಾದ ಮಾಹಿತಿ ದೊರಕಿಸಿಕೊಟ್ಟರು. ಸಂಘವು ಈ ಮಾದರಿಯ ಕಾರ್ಯಕ್ರಮ ಪ್ರತಿವರ್ಷ ನಡೆಸುತ್ತ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಯಂತ್ರ ಪ್ರಾತ್ಯಕ್ಷಿಕೆಯಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ನಿರ್ದೇಶಕ ಗುರುಪಾದ ಹೆಗಡೆ ಅಮಚಿಮನೆ, ರತ್ನಾಕರ ನಾಯ್ಕ ಬಬ್ಬೀಸರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಹೆಗಡೆ ಹಾಗೂ ಸಂಘದ ನಿರ್ದೇಶಕರು ಕೃಷಿ ಸಲಹೆಗಾರ ಗುರುಮೂರ್ತಿ ಹೆಗಡೆ ಮತ್ತು ಟಿಎಂಎಸ್ ಸಿಬ್ಬಂದಿ ನಾಗರಾಜ ಹೆಗಡೆ ಮತ್ತಿತರರು ಇದ್ದರು. ಸುಮಾರು ಐವತ್ತಕ್ಕೂ ಹೆಚ್ಚು ರೈತರು ಪ್ರಾತ್ಯಕ್ಷಿಕೆ ಪ್ರಯೋಜನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.