ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕೋಟ್ಯಾಧಿಪತಿಗಳು
Team Udayavani, Apr 24, 2018, 4:13 PM IST
ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿನ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎಂಬುದು ಅವರು ಚುನಾವಣಾ ಅಧಿ ಕಾರಿಗೆ ಸಲ್ಲಿಸಿರುವ ಅμಡೆವಿಟ್ ಹೇಳುತ್ತಿದೆ.
ಅದಿರು ಉದ್ಯಮಿ ಸತೀಶ್ ಸೈಲ್ ಹಾಗೂ ಅವರ ಪತ್ನಿಯ ಒಟ್ಟು ಆಸ್ತಿ ಪರಿಶೀಲಿಸಿದರೆ ಅವರು ಶ್ರೀಮಂತರು. ಚರಾಸ್ತಿ ಸೈಲ್ ಬಳಿ ಹೆಚ್ಚಿದ್ದರೆ, ಮಾಜಿ ಆನಂದ ಅಸ್ನೋಟಿಕರ್ ಬಳಿ ಸ್ಥಿರಾಸ್ತಿ ಹೆಚ್ಚಿದೆ. ಚರಾಸ್ತಿ ಕಡಿಮೆ ಪ್ರಮಾಣದಲ್ಲಿದೆ. ಆನಂದ ಅಸ್ನೋಟಿಕರ್ ಬಳಿ 4 ಲಕ್ಷ ಕ್ಯಾಶ್ ಇದ್ದರೆ, ಅವರ ಪತ್ನಿ ಗೌರಿ ಬಳಿ 75 ಸಾವಿರ ಕ್ಯಾಶ್ ಇದೆ. ಬ್ಯಾಂಕ್ ಡೆಪಾಸಿಟ್ ಆನಂದ ಬಳಿ 88,00,227 ಲಕ್ಷ ಇದ್ದರೆ, ಪತ್ನಿ ಬಳಿ 4,75,634 ರೂ. ಇದೆ. ವಿವಿಧ ಉಳಿತಾಯದ ಬಾಂಡ್ ಗಳಲ್ಲಿ 1,10,43,00 ರೂ, ಆನಂದ ಅಸ್ನೋಟಿಕರ್ ತೊಡಗಿಸಿದ್ದಾರೆ. 6,70,750 ರೂ. ಮೊತ್ತದ ಬಂಗಾರದ ಆಭರಣಗಳು ಆನಂದ ಬಳಿ ಇವೆ. ಒಟ್ಟು ಚರಾಸ್ತಿ 5,42,76,567.00 ಆನಂದ ಅಸ್ನೋಟಿಕರ್ ಬಳಿ ಇದೆ.
ಸ್ಥಿರಾಸ್ತಿ:ಆಗುಂದದಲ್ಲಿ 5 ಕೋಟಿ ರೂ. ಮೊತ್ತದ ಕೃಷಿ ಭೂಮಿ ಸಹ ಇದೆ. ಕಾರವಾರ ಕಾಳಿ ನದಿ ಸಮೀಪದಲ್ಲಿ ಚಿತ್ತಾಕುಲಾ ಗ್ರಾಮದಲ್ಲಿ 14 ಕೋಟಿ ಮೌಲ್ಯದ ಹೋಟೆಲ್ ಇದೆ. ಗೋವಾ ಆಗುಂದದಲ್ಲಿ ರೆಸಾರ್ಟ್, ಕಡಲತೀರದಲ್ಲಿ ಭೂಮಿ, ಕಲ್ಲಂಗೂಟ್‌ನಲ್ಲಿ ಭೂಮಿ ಹಾಗೂ ಚಿತ್ತಾಕುಲಾ, ಮುಡುಗೇರಿಯಲ್ಲಿ ಕೃಷಿಯೇತರ ಭೂಮಿ ಇದೆ. ಕಾರವಾರದಲ್ಲಿ ಮನೆ ಹಾಗೂ ವಾಸ್ಕೋ ದಾಬೋಲಿಯಂನಲ್ಲಿ 3 ಪ್ಲಾಟ್ ಹೊಂದಿದ್ದಾರೆ. ಬೆಂಗಳೂರು ಬಿಡಿಎ ಪ್ಲಾಟ್ ಸಹ ಅವರ ಬಳಿ ಇದೆ. ಸುವನ್ ಲಾಜಸ್ಟಿಕ್ ಶಿಪ್ಪಿಂಗ್ ಕಂಪನಿಯನ್ನು ಅವರು ನಡೆಸುತ್ತಿದ್ದಾರೆ.
ಸತೀಶ್ ಸೈಲ್: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಸಹ ಕೋಟ್ಯಧಿ ಪತಿಯಾಗಿದ್ದು, ಅವರು ಅದಿರು ಉದ್ಯಮಿಗಳು. 35,64,73,197.00 ರೂ. ಚರಾಸ್ತಿ ಹೊಂದಿದ್ದಾರೆ. ಕೈಯಲ್ಲಿರುವ ನಗದು ಹಣ 1,54 (ಒಂದು ಲಕ್ಷ ಐವತ್ತಾಲ್ಕು ಸಾವಿರ ರೂ,ಮಾತ್ರ). ಅವರ ಬಳಿ 11,75 ಲಕ್ಷ ರೂ. ಮೊತ್ತದ ಬಂಗಾರದ ಆಭರಣಗಳಿವೆ. 30 ಲಕ್ಷ ಬೆಲೆಯ ವಾಹನ ಅವರ ಬಳಿ ಇದೆ. 4,91,68,298.00 ರೂ. ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಕಲ್ಪನಾ 20,25,30,824.00 ಮೊತ್ತದ ಚರಾಸ್ತಿ ಹೊಂದಿದ್ದಾರೆ. ಅವರ ಬಳಿ 45,77,840 ಮೊತ್ತದ ಬಂಗಾರದ ಆಭರಣಗಳಿವೆ. 59,72,673.00 ಬೆಲೆಯ ವಾಹನಗಳು ಅವರ ಬಳಿ ಇವೆ. 1,21,35,163.00 ಮೌಲ್ಯದ ಸ್ಥಿರಾಸ್ತಿ ಅವರ ಬಳಿ ಇದೆ. ಕುಟುಂಬದ ಹೆಸರಲ್ಲಿ 7 ಕೋಟಿ ರೂ. ವಿಮೆ ಇದೆ. 19.85 ಕೋಟಿ ಸಾಲವೂ ಇದೆ.
ರೂಪಾಲಿ ನಾಯ್ಕ
ಚರಾಸ್ತಿ : 2,32,98,659.21
ಸ್ಥಿರಾಸ್ತಿ : 1,03,50,000.00
ಸಾಲ : 52,67,340.00
ಸುನಿಲ್ ನಾಯ್ಕ 8.84 ಕೋ. ಒಡೆಯ
ಭಟ್ಕಳ: 79ನೇ ಭಟ್ಕಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನಿಲ್ ನಾಯ್ಕರ ಚರಾಸ್ತಿ ಒಟ್ಟೂ ಮೌಲ್ಯ 87 ಲಕ್ಷ ರೂಪಾಯಿಗಳಿದ್ದು ಇದರಲ್ಲಿ ಒಂದು ಜಾಗ್ವಾರ್ ಕಾರ್ ಇದ್ದು ಇದರ ಮೌಲ್ಯ 41 ಲಕ್ಷಗಳೆಂದು ಹೇಳಿದ್ದಾರೆ.
ಪತ್ನಿ ಕ್ಷಮಾ ಹೆಸರಿನಲ್ಲಿ ಚರಾಸ್ತಿ ಮೌಲ್ಯ ರೂ.33.25 ಲಕ್ಷ ಹಾಗೂ ಮಕ್ಕಳಿಬ್ಬರ ಹೆಸರಿನಲ್ಲಿ 8 ಲಕ್ಷ ರೂಪಾಯಿಗಳಿವೆ ಎಂದು ಹೇಳಿದ್ದು ಒಟ್ಟೂ ಕುಟುಂಬದ ಚರಾಸ್ತಿಯ ಮೌಲ್ಯ 1.28 ಕೋಟಿಗಳೆಂದು ಘೋಷಿಸಿದ್ದಾರೆ. ಕೃಷಿಯೇತರ ಸ್ಥಿರಾಸ್ತಿಯ ಮೌಲ್ಯ 7.25 ಕೋಟಿಗಳಷ್ಟಿದ್ದು ಪತ್ನಿಯ ಪಿತ್ರಾರ್ಜಿತ ಕೃಷಿ ಜಮೀನಿನ ಮೌಲ್ಯ 30.56 ಲಕ್ಷ ಎಂದೂ ಘೋಷಿಸಿದ್ದಾರೆ. ಇವರ ಕುಟುಂಬದ ಒಟ್ಟೂ ಆಸ್ತಿಯ ಮೌಲ್ಯ 8.84 ಕೋಟಿಗಳಷ್ಟಿದೆ ಎಂದು ಘೋಷಿಸಿದ್ದಾರೆ. ಸುನಿಲ್ ನಾಯ್ಕರ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಲ್ಲಿ 7.07 ಕೋಟಿ ಸಾಲ ಇದೆ ಎಂದೂ ಘೋಷಿಸಿದ್ದಾರೆ. ಸುನಿಲ್ ನಾಯ್ಕರಿಗೆ ಗ್ರಾಮೀಣ ಠಾಣೆಯಲ್ಲಿ 2003ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧ ಪಟ್ಟಂತೆ 2006ರಲ್ಲಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆ ಮಾಡಿ ತೀರ್ಪು ನೀಡಿದ್ದು ಒಂದು ವರ್ಷದ ಸಾದಾ ಜೈಲು ಶಿಕ್ಷೆ 1950ರೂ. ದಂಡ ವಿಧಿ ಸಿದೆ. ಪ್ರಕರಣವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಅಪೀಲು ಮಾಡಿದ್ದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದೂ ಘೋಷಿಸಿದ್ದಾರೆ.
ವೈದ್ಯ 11.80 ಕೋಟಿ ಒಡೆಯ
ಭಟ್ಕಳ: ಶಾಸಕ ಮಂಕಾಳ ವೈದ್ಯ ಒಟ್ಟು ಚರಾಸ್ತಿ ಮೌಲ್ಯ 6,28,17,927, ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಒಟ್ಟೂ 5,51,33,287 ರೂ. ವಿವಿಧ ಬ್ಯಾಂಕ್‌ಗಲ್ಲಿ 2,43,65,249 ರೂ. ಸಾಲ ಮಾಡಿದ್ದಾರೆ. 2013ರಲ್ಲಿ ಪಕ್ಷೇತರರಾಗಿ ಚುನಾವಣೆಗೆ ನಿಂತ ಮಂಕಾಳ ವೈದ್ಯ ಚರಾಸ್ತಿಯ ಮೌಲ್ಯ 5.62 ಕೋಟಿ, ಸ್ಥಿರಾಸ್ತಿಯ ಮೌಲ್ಯ 10.83 ಕೋಟಿ ರೂ. ಎಂದು ಘೋಷಿಸಿದ್ದರು. ಒಟ್ಟೂ ಆಸ್ತಿಯ ಮೌಲ್ಯ 16.5 ಕೋಟಿ ಎಂದು ಘೋಷಿಸಿದ್ದರೆ, ಈ ಬಾರಿ ಅವರು ಒಟ್ಟೂ 11.80 ಕೋಟಿ ಎಂದು ಘೋಷಿಸಿದ್ದು ಅವರ ಅಸ್ತಿಯಲ್ಲಿ ಸುಮಾರು 4.70 ಕೋಟಿ ರೂ. ಕಡಿಮೆಯಾಗಿದೆ. ಅದೇ ರೀತಿಯಾಗಿ ವಿವಿಧ ಬ್ಯಾಂಕುಗಳಲ್ಲಿ ಮಾಡಿದ ಸಾಲದಲ್ಲಿಯೂ 87 ಲಕ್ಷ ಕಡಿಮೆಯಾಗಿದೆ. ಅರಣ್ಯ ರಕ್ಷಣಾಧಿಕಾರಿಗಳ ನ್ಯಾಯಾಲಯ ಶಿರಸಿಯಲ್ಲಿ ಮೇಲ್ಮನವಿ ವಿಚಾರಣೆಗೆ ಬಾಕಿ ಇದೆ ಹಾಗೂ ಜೆಎಂಎಫ್‌ಸಿ ಕೋರ್ಟ್ ಕುಂದಾಪುರದಲ್ಲಿ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಎ.ರವೀಂದ್ರನಾಥ 71.37 ಲಕ್ಷ ರೂ
ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಎ.ರವೀಂದ್ರನಾಥ ನಾಯ್ಕ ನಾಮಪತ್ರ ಸಲ್ಲಿಸುವಾಗ 71.37 ಲಕ್ಷ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 3 ಲಕ್ಷ ರೂ. ಮೌಲ್ಯದ 2 ಗುಂಟೆ ಕೃಷಿ ಭೂಮಿ, ರವೀಂದ್ರನಾಥ ನಾಯ್ಕ ಹಾಗೂ ಅವರ ಪತ್ನಿ ಸವಿತಾ ನಾಯ್ಕ ಇಬ್ಬರಲ್ಲೂ ಸೇರಿ 10 ಲಕ್ಷ ರೂ. ನಗದನ್ನು ಹೊಂದಿದ್ದಾರೆ. 1 ಕಾರು ಹಾಗೂ 1 ಬೈಕ್ ಹಾಗೂ ಬಂಗಾರ ಸೇರಿ 24.50 ಲಕ್ಷ ರೂ. ಪತ್ನಿ ಬಂಗಾರ 33 ಲಕ್ಷ ರೂ. ಹಾಗೂ 5 ಲಕ್ಷ ರೂ. ಸಾಲವನ್ನು ಹೊಂದಿದ್ದೇನೆ ಎಂದು ನಾಮಪತ್ರದ ಜೊತೆ ತನ್ನ ಆದಾಯ ಪತ್ರವನ್ನು ಘೋಷಿಸಿಕೊಂಡಿದ್ದಾರೆ.
ಎಂಬಿಎ ಆದರೂ ಶಶಿಭೂಷಣ ಕೃಷಿಕ!
ಶಿರಸಿ: ಓದಿದ್ದು ಬಿಎಸ್‌ಸಿ ಅಗ್ರಿ, ಎಲ್‌ಎಲ್‌ಬಿ, ಎಂಬಿಎ ಆದರೂ ನೌಕರಿ ಮಾಡದೇ ರಾಜಕೀಯಕ್ಕಿಳಿದ ದೊಡ್ಮನೆ ಶಶಿಭೂಷಣ ಹೆಗಡೆ ಅವರ ಬಳಿ ಕೃಷಿ ಭೂಮಿಯೇ ಹೆಚ್ಚಿದೆ.
ಕೃಷಿ ಉದ್ಯೋಗ. ಕೈಯಲ್ಲಿ 1.84 ಲಕ್ಷ ರೂ. ಹಾಗೂ ಪತ್ನಿ ವಿನುತಾ ಬಳಿ 35 ಸಾವಿರ ರೂ. ನಗದು ಇದೆ. ಕೆಲವಡೆ ಮ್ಯೂಚ್ಯವಲ್ ಫಂಡ್ ಕೂಡ ಇಟ್ಟಿದ್ದಾರೆ. ಮೂರು ವಾಹನ ಅವರ ಹೆಸರಿನಲ್ಲಿದೆ. 400 ಗ್ರಾಂ ಬಂಗಾರ ತಮ್ಮ ಬಳಿ ಹಾಗೂ 5 ಕೆಜಿ ಬೆಳ್ಳಿಯ ಒಡೆಯ. ಕೃಷಿ ಭೂಮಿ ಸಿದ್ದಾಪುರದ ಕೊಂಡ್ಲಿ, ಹಣಜಿಬೈಲ್, ಹೊಸೂರು, ಸೊರಬ ತಾಲೂಕಿನ ಅಬ್ಬಿಗಳಲ್ಲೂ ಇದೆ. ತಮ್ಮ ಹೆಸರಿನಲ್ಲಿ ವಾಣಿಜ್ಯ ಕಟ್ಟಡ ಇರುವುದನ್ನೂ ಉಲ್ಲೇಖೀಸಿದ್ದಾರೆ.
ಬ್ಯಾಂಕ್-ಸೊಸೈಟಿ ಖಾತೆ ವೀರ ಭೀಮಣ್ಣ!
ಶಿರಸಿ: ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಭೀಮಣ್ಣ ನಾಯ್ಕ ಕೇವಲ ರಾಜಕಾರಣಿಯಲ್ಲ, ಕೇವಲ ಉದ್ಯಮಿ ಕೂಡ ಅಲ್ಲ, ಅವರು ಪ್ರಗತಿಪರ ಕೃಷಿಕರೂ ಹೌದು. ಇಂಥ ಭೀಮಣ್ಣ ಅವರು ನಗರದ ಬಹುತೇಕ ಬ್ಯಾಂಕ್, ಸೊಸೈಟಿಗಳಲ್ಲಿ ಖಾತೆ ಹೊಂದಿದ್ದಾರೆ. ಹಾಗಂತ ಅಲ್ಲೆಲ್ಲ 306 ರೂ.ಗಳಿಂದ 44 ಲಕ್ಷ ರೂ.ತನಕ ಹಣವಿದೆ.
ಭೀಮಣ್ಣ ಬಳಿ 5,08 ಲಕ್ಷ ರೂ. ನಗದಿದ್ದರೆ, ಪತ್ನಿ ಗೀತಾ ಬಳಿ 1.98 ಲಕ್ಷ, ಮಗನ ಬಳಿ 81 ಸಾವಿರ ರೂ. ನಗದಿದೆ. ಹಲವು ಸೊಸೈಟಿಗಳಲ್ಲಿ ಮುದ್ದತ್ತು ಠೇವೂ ಇಟ್ಟಿದ್ದಾರೆ. ಶಿವಮೊಗ್ಗದ ಶರಾವತಿ ಡೆಂಟಲ್ ಕಾಲೇಜಿನಲ್ಲಿ ಕೂಡ ಹಣ ತೊಡಗಿಸಿದ್ದಾರೆ. ಮಗನ ಹೆಸರಿನಲ್ಲಿ ಮೂರು ವಾಹನ, ಪತ್ನಿ ಹೆಸರಿನಲ್ಲಿ ಎರಡು ಕೃಷಿ ಸಂಬಂಧಿ ತ ವಾಹನ ಹಾಗೂ ತಮ್ಮ ಬಳಿ ಎರಡು ವಾಹನ ಇಟ್ಟುಕೊಂಡಿದ್ದಾರೆ.
ತಮ್ಮ ಬಳಿ 240 ಗ್ರಾಂ, ಪತ್ನಿ ಬಳಿ 950 ಗ್ರಾಂ ಚಿನ್ನ ಹಾಗೂ 2500 ಗ್ರಾಂ ಬೆಳ್ಳಿ, ಮಗನ ಬಳಿ 240ಗ್ರಾಂ ಚಿನ್ನ ಇದೆ. ಚರಾಸ್ತಿಗಳು 5.87 ಕೋಟಿ, ಪತ್ನಿ ಹೆಸರಿನಲ್ಲಿ 88 ಲಕ್ಷ, ಸ್ವಯಾರ್ಜಿತ ಸ್ಥಿರಾಸ್ತಿ 4.56 ಕೋಟಿ, ಪತ್ನಿ ಹೆಸರಲ್ಲಿ 10 ಕೋಟಿ, ಸ್ಥಿರಾಸ್ತಿ ಅಭಿವೃದ್ಧಿ 57 ಲಕ್ಷ, ಪತ್ನಿ 11.31 ಕೋಟಿ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ
ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.