ಜೀವಜಲ, ವಿಶ್ವ ದರ್ಶನ ಸೇವಾ‌ ಸಂಸ್ಥೆ‌ಯಿಂದ ಶಿರಸಿ, ಯಲ್ಲಾಪುರಕ್ಕೆ ಹೊಸ‌ ಆಂಬುಲೆನ್ಸ್ ಕೊಡುಗೆ


Team Udayavani, Sep 11, 2021, 4:28 PM IST

Ambulance contribution

ಶಿರಸಿ: ಯಲ್ಲಾಪುರ, ಶಿರಸಿಗೆ ಎರಡು ಹೊಸ ಆಂಬುಲೆನ್ಸ್ ಸಮರ್ಪಣೆ, ಶಿರಸಿ ನಗರದಲ್ಲಿ‌ ಸಮಸ್ಯೆಗೆ ಕಾರಣವಾದ ಇ‌ ಖಾತಾ, ಫಾರಂ ನಂ ‌3 ಸಮಸ್ಯೆ ನಿವಾರಣೆಗೆ ತಜ್ಞರ ಜೊತೆ ಸಮಾಲೋಚನೆ ಹಾಗೂ ಹಿರಿಯ ನ್ಯಾಯವಾದಿ ನಾರಾಯಣ ಯಾಜಿ ಅವರಿಗೆ ಸಮ್ಮಾನ‌ ಕಾರ್ಯಕ್ರಮ ನಗರದ ರಾಘವೇಂದ್ರ ‌ಕಲ್ಯಾಣ ಮಂಟಪದಲ್ಲಿ ಸೆ.12ರ ಮಧ್ಯಾಹ್ನ‌ 4ಕ್ಕೆ ನಡೆಯಲಿದೆ.

ಕೆರೆಗಳ ಅಭಿವೃದ್ದಿ, ನಗರ‌ ಹಾಗೂ ಗ್ರಾಮೀಣ ಸ್ವಚ್ಛತೆಗೆ ಆದ್ಯತೆ ನೀಡಿ‌ ನಗರದ‌ ಜನರ ಆರೋಗ್ಯ ರಕ್ಷಣೆಗೆ‌ ಕಾರ್ಯ ಮಾಡುತ್ತಿರುವ ಶಿರಸಿ‌ ಜೀವ ಜಲ‌ ಕಾರ್ಯ ಪಡೆ  ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡ  ವಿಶ್ವದರ್ಶನ ಸೇವಾ ಸಂಸ್ಥೆ ಆರೋಗ್ಯ ‌ ಕ್ಷೇತ್ರಕ್ಕೂ ವಿಶಿಷ್ಟವಾಗಿ ಸೇವೆ ಸಲ್ಲಿಸಲು‌  ಮುಂದಾಗಿದೆ.

ಶಿರಸಿ ಹಾಗೂ ಸಿದ್ದಾಪುರ, ಯಲ್ಲಾಪುರ ಮುಂಡಗೋಡ‌ ಸೇರಿದಂತೆ ವಿವಿಧ ತಾಲೂಕು ಹಾಗೂ ಹಾವೇರಿ, ಶಿವಮೊಗ್ಗ ಜಿಲ್ಲೆ ಭಾಗದಿಂದಲೂ ಶಿರಸಿ ಆಸ್ಪತ್ರೆಗಳಿಗೆ‌ ನಿತ್ಯ  ಅಸಂಖ್ಯ ರೋಗಿಗಳು ಬರುತ್ತಾರೆ. ಇವರಿಗೆ  ಅನೇಕ ತುರ್ತು ವೇಳೆ ದೂರದ ಮಂಗಳೂರು, ಮಣಿಪಾಲ ಅಥವಾ ಹುಬ್ಬಳ್ಳಿಯ ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆ ಗಳಿಗೆ ತೆರಳಲು ಆಂಬುಲೆನ್ಸ್ ಕೊರತೆ ಕೂಡ‌ ಉಂಟಾಗುತ್ತಿದ್ದವು.

ಕೋವಿಡ್ ವ್ಯಾಪಕವಾಗಿದ್ದ ಕಾಲದಲ್ಲೂ ಆಂಬುಲೆನ್ಸ್  ಸಮಸ್ಯೆ ಉಂಟಾಗಿದ್ದವು. ಈ‌ ಸಮಸ್ಯೆ ನೀಗಿಸಿ ಅನಾರೋಗ್ಯವುಳ್ಳ ಜನರಿಗೆ ನೆರವಾಗುವ, ಜೀವ ಉಳಿಸುವ ಕಾಯಕಕ್ಕೆ ಈ ಉಭಯ ಸಂಸ್ಥೆಗಳು‌ ಕಂಕಣ ಕಟ್ಟಿಕೊಂಡಿವೆ.

ಇದರ ಪರಿಣಾಮ‌  ಶಿರಸಿಗೆ ಹಾಗೂ ಯಲ್ಲಾಪುರಕ್ಕೆ‌ ತಲಾ ಒಂದು ಹೊಸ ಆಂಬುಲೆನ್ಸ್ ಸೇರ್ಪಡೆಯಾಗುತ್ತಿದೆ.

ನಿರ್ವಹಣೆ‌ ಹೇಗೆ?:

ಇಕೊ‌ ಪ್ರೆಂಡ್ಲಿ ಕೆಲಸ ಮಾಡುತ್ತಿರುವ ಕಾರ್ಯಪಡೆ ಹೊಸ  ಇಕೋ ಕಾರನ್ನು‌ ಖರೀದಿಸಿ ಆಂಬುಲೆನ್ಸ್ ಸೇವೆಗೆ ಸಜ್ಜುಗೊಳಿಸಿದೆ‌. ಯಾರಿಗೇ ತುರ್ತು  ಇದ್ದರೂ ಎಲ್ಲಿಗೇ ಬೇಕಿದ್ದರೂ ಆಂಬುಲೆನ್ಸ್ ಬಳಸಿಕೊಳ್ಳಬಹುದಾಗಿದೆ.

ಆಂಬುಲೆನ್ಸ್ ವಾಹನಕ್ಕೆ ಇಂಧನ ತುಂಬಿಸಿಕೊಂಡು ಆಂಬುಲೆನ್ಸ್ ಬಳಸಿಕೊಳ್ಳಬಹುದಾಗಿದೆ‌. ತುರ್ತು ಸಂದರ್ಭದಲ್ಲಿ ಉಭಯ ಆಂಬುಲೆನ್ಸ್ ಸೇವೆಗೆ  9901975204 /7899355049 ಸಂಪರ್ಕ ಮಾಡಬಹುದಾಗಿದೆ ಎಂದು‌ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಈ ಕಾರಣಗಳಿಗೆ ಕ್ರಿಕೆಟ್ Olympicsನಲ್ಲಿ ಇನ್ನೂ ಸೇರ್ಪಡೆಗೊಂಡಿಲ್ಲ

ಸಮಾಲೋಚನೆ, ಅಭಿನಂದನೆ:

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರವಿವಾರ ಸಂಜೆ 4ಕ್ಕೆ ಶಿರಸಿ ನಗರದಲ್ಲಿ‌ ಉಂಟಾದ ಫಾರಂ ನಂಬರ್ 3 ಗ್ರಾಮೀಣ ಭಾಗದ ಇ ಖಾತಾ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಕಾನೂನು ತಜ್ಞರ‌ ಜೊತೆ ಸಮಾಲೋಚನೆ‌ ಕೂಡ ಇದೇ ವೇದಿಕೆಯಲ್ಲಿ ಏರ್ಪಾಟಾಗಿದೆ. ಈ  ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಾಲೋಚನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಈ ಕಾರ್ಯಕ್ರಮದಲ್ಲಿ ಧಾರವಾಡದ ಹೈಕೊರ್ಟ್ ನ್ಯಾಯವಾದಿ ನಾರಾಯಣ ವಿಷ್ಣು ಯಾಜಿ, ಸಾಮಾಜಿಕ‌ ಕಾರ್ಯಕರ್ತ ನರಸಿಂಹ ಕೋಣೆಮನೆ, ಜೀವ ಜಲ‌ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ‌ ಸಾಮಾಜಿಕ‌ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಭಾರತೀಯ‌ ನ್ಯಾಯ‌ ಕಲ್ಪನೆ ಮತ್ತು ಸಾಮಾಜಿಕ‌ ನ್ಯಾಯ ವಿಷಯದಲ್ಲಿ ಹಂಪಿ ವಿವಿಯಿಂದ ಡಿ.ಲಿಟ್ ಪದವಿ ಪಡೆದ‌ ಉತ್ತರ ಕನ್ನಡದ ಹೊನ್ನಾವರ ಮೂಲದ ನಾರಾಯಣ‌ ಯಾಜಿ ಅವರನ್ನು‌ ಉಭಯ ಸಂಸ್ಥೆಗಳು  ಗೌರವಿಸುತ್ತಿವೆ.

ಕಷ್ಟದಲ್ಲಿದ್ದಾಗ ಅಂಬುಲೆನ್ಸ‌ ಸೇವೆ ಸಿಗಬೇಕು, ನನಗೂ ಇಂಥದ್ದೊಂದು ಸಂದಿಗ್ದ ಎದುರಾಗಿದ್ದರಿಂದಲೇ ಆಂಬುಲೆನ್ಸ್ ಸೇವೆ ಅಣಿಯಾಗಿದ್ದೇವೆ. ಇ ಖಾತಾ,‌ ಫಾರಂ‌ ನಂ 3 ಸಮಸ್ಯೆ ಕೂಡ ಬಗೆ ಹರಿದು ಜನತೆಗೆ ನಿರಾಳವಾಗಬೇಕಿದೆ ಎಂದು  ಜೀವ ಜಲ‌ಕಾರ್ಯಪಡೆ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

1-ankol

Ankola; ಮನೆ ಮಂದಿ ಮಲಗಿರುವಾಗಲೇ ಕನ್ನ: ದೇವರ ಮೂರ್ತಿಗಳನ್ನೇ ಕದ್ದೊಯ್ದರು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.