Sirsi: ಮುಂಬರುವ ಚುನಾವಣೆಗೆ ಸ್ಪರ್ಧಿಸುತ್ತಾರಾ ಅನಂತಕುಮಾರ ಹೆಗಡೆ? ಸಂಸದರು ಹೇಳಿದ್ದೇನು?
Team Udayavani, Dec 27, 2023, 2:06 PM IST
ಶಿರಸಿ: ಜನರಿಂದ ದೂರ ಇದ್ದರೆ ಜನ ಬೈತಾರೆ, ಚುನಾವಣೆಗೆ ಪಕ್ಷವೂ, ಅಭಿಮಾನಿಗಳೂ ಬೇರೆ ಅಭ್ಯರ್ಥಿ ನೋಡ್ತಾರೆ ಅಂದ್ಕೊಂಡಿದ್ದೆ. ಕಲ್ಪನೆ ಮೀರಿ ಮತ್ತೆ ಲೋಕಸಭಾ ಚುನಾವಣೆ ನಿಲ್ಲಬೇಕು ಎಂಬ ಒತ್ತಾಯ ಬಂದಿದೆ. ಅಂತಿಮವಾಗಿ ಸಂಘಟನೆ ಜೊತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಹಳಿಯಾಳ, ಜೋಯಿಡಾ ಭಾಗದಿಂದ ಬುಧವಾರ ಸಂಸದರ ಮನೆ ಶಿರಸಿಯ ಶಿವೋಹಂಗೆ ಆಗಮಿಸಿದ್ದ ಅನಂತಕುಮಾರ ಹೆಗಡೆ ಅಭಿಮಾನಿಗಳು, ಕಾರ್ಯಕರ್ತರು ಬರಲಿರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ ಎಂದು ಸಭೆಯಲ್ಲಿ ಹೇಳಿದರು.
ನಾನೇ ಕಳೆದ ನಾಲ್ಕು ವರ್ಷದಿಂದ ಅಂತರ ಕಾಯ್ದುಕೊಂಡಿದ್ದೆ. ತಪ್ಪು ನಂದೇ ಆಗಿತ್ತು. ಆದರೆ, ಈಗ ಒತ್ತಾಯ ಇದೆ. 15-20 ದಿನದಿಂದ ಚಿತ್ರಣ ಬದಲಾಗಿದೆ. ಆದರೆ, ನನಗೆ ಸಮಯ ಬೇಕು ಎಂದರು.
ಯಾರದ್ದಾದರೂ ಹೆಸರು ತೆಗೆದುಕೊಂಡು ಹೋಗಿ, ಅವರ ಜೊತೆ ನಾವೂ ಹೋಗೋಣ ಎಂದು ಕಳೆದ ಲೋಕ ಸಭೆಯ ಅವಧಿಯಲ್ಲೇ ಸಂಘಟನೆಯವರಿಗೆ ಹೇಳಿದ್ದೆ. ಆದರೆ, ಸಂಘಟನೆ ಕೂಡ ಈವರೆಗೆ ಬೇರೆ ಹೆಸರು ಹೇಳಿಲ್ಲ. ರಾಜಕಾರಣ ಬೇಡ ಎಂದು ದೂರ ಹೋಗಿದ್ದೇವು ಎಂದರು.
ರಾಜಕಾರಣದಲ್ಲಿ ಬೇಡ ಅಂತ ಯಾರೂ ಹೇಳಿಲ್ಲ. ಆರು ಸಲ ಆಯಿತು ಗೆಲ್ಲಿಸಿದ್ದು. ಎಷ್ಟು ಸಲ ಭಗವಂತನ ಬಳಿ ಮಿತಿ ಮೀರಿ ಮಾಂಗಣಿ ಇಟ್ಟರೂ ಒಪ್ಪಲ್ಲ. ಆದರೆ ಕಳೆದ 15-20 ದಿನದಿಂದ ಚಿತ್ರಣ ಬದಲಾಗಿದೆ ಎಂದರು.
ಬೇಡ ಎಂದೇ ಪಕ್ಷ, ಉಳಿದ ಚುನಾವಣೆ ಬಿಟ್ಟು ಹೋಗಿದ್ದೆ.
ನಂದೂ ತಪ್ಪಿದೆ. ಪಕ್ಷದ ಚುನಾವಣೆಗೂ ಹೋಗಿಲ್ಲ. ಮನದಲ್ಲಿ ಆಸೆ ಇದ್ದಿದ್ದರೆ ಹೋಕ್ತಿದ್ದೆ. ಬೇಡ ಅಂತನೇ ನಾನೇ ಅಂತರ ಕಾಯ್ದುಕೊಂಡಿದೆ. ಪ್ರಚಾರಕ್ಕೆ ಬಂದರೆ ಸುನೀಲ ಗೆಲ್ತಿದ್ದರು. ನಿಂತಕೊಳ್ಳಿ ಅಂದವನೂ ನಾನೇ. ನಂತರ ಎಲ್ಲೂ ಹೋಗಿಲ್ಲ. ಎರಡು ವರ್ಷ ಆರೋಗ್ಯ ಹಾಳಾಗಿತ್ತು. ಒಂದ್ ವರ್ಷದಿಂದ ತೊಂದರೆ ಇಲ್ಲ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ, ಬಹಳಷ್ಟು ಹಿಂದುತ್ವಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಪೊಲೀಸ್ ಸ್ಟೇಶನ್ ಗೆ ಕೂಡ ಹೋಗಿ ಹೋರಾಟ ಮಾಡಿದವರು. ನೇರವಾಗಿ ರಾಜಕಾರಣದಿಂದ ಬಂದವರಲ್ಲ. ಬಿಜೆಪಿ ಗಟ್ಟಿಯಾಗಿ ಜಿಲ್ಲೆಯಲ್ಲಿ ನೆಲೆ ನಿಲ್ಲಲು ಅನಂತಕುಮಾರ ಅವರು ಕಾರಣ. ಅನಂತಕುಮಾರ ಹೆಗಡೆ ಅವರು ಮರಳಿ ಬಂದು ನಮ್ಮ ತಂಡ ಗೆಲ್ಲಿಸಬೇಕು. ಅನಂತಕುಮಾರ ಹೆಗಡೆ ಅವರು ಎಂದರೆ ಕಥೆಯಲ್ಲ, ದಂತಕಥೆ. ವ್ಯಕ್ತಿಯಲ್ಲ, ಶಕ್ತಿ. ಇವತ್ತಿನ ರಾಜಕಾರಣದಿಂದ ಕ್ಷಣಿಕಕ್ಕೆ ಮಹತ್ವ ನೀಡುತ್ತಾರೆ. ರೇಶನ್ ಕಾರ್ಡ, ಮನೆ ಮಾತ್ರ ಅಭಿವೃದ್ದಿಯಲ್ಲ. ಸನಾತನ ಸಂಸ್ಕೃತಿಗಳ ಉಳಿವೂ ಮಹತ್ವದ್ದು ಎಂದರು.
ಅನಂತಕುಮಾರ ಹೆಗಡೆ ಅವರು ಯೋಜನೆಗಳ ಅನುಷ್ಠಾನಗಳನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಮನೆ ಸದಸ್ಯರಾಗಿ ಮಾರ್ಗದರ್ಶನ ಮಾಡಬೇಕು ಎಂದರು. ಹಳಿಯಾಳದ ಅನಿಲ್ ಮುತ್ನಾಳ, ಹಿಂದುತ್ವ, ಹಿಂದು ಬಗ್ಗೆ ಹೋರಾಟ ಮಾಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರು ಈ ಬಾರಿಯೂ ಸ್ಪರ್ಧಿಸಬೇಕು. ಅವರು ಸ್ಪರ್ಧಿಸಿದರೆ ನಾವು ಕೆಲಸ ಮಾಡುತ್ತೇವೆ ಎಂದರು.
ಮಂಗೇಶ ದೇಶಪಾಂಡೆ, ಅನಂತಕುಮಾರ ಹೆಗಡೆ ಅವರು ಹಿಂದುತ್ವಕ್ಕೆ ಕೈಗೊಂಡ ಹೋರಾಟವೇ ಅವರನ್ನು ಇಡೀ ರಾಜ್ಯದಲ್ಲಿ ಜನ ನೆನಪಿಟ್ಟಿದ್ದಾರೆ. ಅನಂತಕುಮಾರ ಅವರು ರಾಜಕೀಯ ಶಕ್ತಿಯಾಗಿ ಇರಬೇಕು ಎಂದರು. ಪ್ರಮುಖರಾದ ಗಣಪತಿ ಮಾಂಜ್ರೇಕರ್, ಶಿವಾಜಿ ನರಸಾನಿ, ಅನಿಲ್ ಮುತ್ನಾಳ, ಕೃಷ್ಣ ಎಸಳೆ, ಚಂದ್ರು ಎಸಳೆ ಇತರರು ಇದ್ದರು.
ಧರ್ಮದ ಕೆಲಸಕ್ಕೆ ಮುಲಾಜಿಲ್ಲ: ಅನಂತ್
ರಾಜಕಾರಣ ಬಂದಾಗ ಮಾತ್ರ ತಲೆ ಬೇನೆ ಆಗುತ್ತದೆ. ಆದರೆ, ಧರ್ಮದ ಕೆಲಸಕ್ಕೆ ಯಾವುದೇ ಮಲಾಜಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ನಮ್ಮ ಬಹುಕಾಲದ ಕನಸಿನಂತೆ ರಾಮ ಮಂದಿರ ಆಗಿದೆ. ಮುಂದೆ ಕಾಶೀ, ಮಥುರಾ ಕೂಡ ಆಗಬೇಕು. ಮಂದಿರಗಳು ಮಂದಿರವಾಗಿಯೇ ಉಳಿಯಬೇಕು ಎಂದ ಅವರು, ಬಿಜೆಪಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡೋಣ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಬರಲು ಈಗಿನಿಂದಲೇ ಕೆಲಸ ಮಾಡೋಣ ಎಂದರು.
ನಮ್ಮ ಪಕ್ಷದಲ್ಲೇ ಮೊದಲು ಮಾಡ್ತೇನೆ ಹೇಳಿ ನಂತರ ಮಾಡಬೇಡಿ ಎನ್ನುವವರನ್ನೂ ಕಂಡಿದ್ದೇವೆ. ಅಂಥವರಲ್ಲ ಇವರು. ನಿಷ್ಠುರರವಾದಿ. ಚುನಾವಣೆ ನಿಲ್ಲಲ್ಲ ಅಂತ ಮಾತ್ರ ಹೇಳಬೇಡಿ. ನಾನು ಬೇರೆ ಪಕ್ಷದಲ್ಲಿ ಇದ್ದಾಗ ಸಂಸತ್ತಿಗೆ ಮಾತ್ರ ಅನಂತ ಅವರಿಗೇ ಮತ ಹಾಕ್ತೇವೆ ಅಂತ ತಾಯಿ, ಪತ್ನಿ ಹೇಳುತ್ತಿದ್ದರು.
– ಸುನೀಲ್ ಹೆಗಡೆ, ಮಾಜಿ ಶಾಸಕ
ಇದನ್ನೂ ಓದಿ: Gangavathi: ಸುಟ್ಟು ಭಸ್ಮವಾದ ಗೆಸ್ಟ್ ಹೌಸ್; ಕಿಡಿಗೇಡಿಗಳ ಕೃತ್ಯವೆಂದ ಕೆಆರ್‌ಪಿಪಿ ಮುಖಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
Waqf ಬಗ್ಗೆ ಬಿವೈವಿ ಜತೆ ಮಾತಾಡುವ ಅವಶ್ಯಕತೆ ನನಗಿಲ್ಲ: ಯತ್ನಾಳ್
ರಾಜ್ಯದ ಅರಣ್ಯ ನಿಧಿಗಾಗಿ ಕೇಂದ್ರ ಸರಕಾರಕ್ಕೆ ನಿಯೋಗ: ಅರಣ್ಯ ಸಚಿವ ಖಂಡ್ರೆ
Bus Fare Hike: ಸರಕಾರದ ಹೊಟ್ಟೆಗೆ ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.