ಲೋಕಸಭಾ ಸ್ಥಾನದ ಮೇಲೆ ಕಣ್ಣಿಟ್ಟ ಅಸ್ನೋಟಿಕರ್: ರೂಪಾಲಿ ನಾಯ್ಕ ವಿರುದ್ಧ ಕಿಡಿ
Team Udayavani, May 18, 2023, 4:11 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಬಯಕೆಯಿದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೆ ಲೋಕಸಭೆಗೆ ಸ್ಪರ್ಧಿಸಿ, 30 ದಿನಗಳ ಅತ್ಯಲ್ಪ ಸಮಯದಲ್ಲಿ ಪ್ರಚಾರ ಮಾಡಿ, 3.60 ಲಕ್ಷ ಮತ ಪಡೆದಿದ್ದೆ. ಈ ಸಲ ಲೋಕಸಭಾ ಕ್ಷೇತ್ರದಲ್ಲಿ ಗಂಭೀರವಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವೆ. ಆರು ತಿಂಗಳ ಮೊದಲೇ ಕಾರ್ಯ ಪ್ರಾರಂಭಿಸುವೆ ಎಂದರು.
ಕಾರ್ಯಕರ್ತರ ಸಲಹೆ ಪಡೆದು ತಿಂಗಳೊಪ್ಪತ್ತಿನಲ್ಲಿ ರಾಜಕೀಯ ನಿರ್ಧಾರ ಮಾಡುವೆ. ಕಾಂಗ್ರೆಸ್, ಬಿಜೆಪಿಯಲ್ಲಿ ಒಳ್ಳೆಯ ಸಂಪರ್ಕ ಇದೆ. ಮರಾಠಿ, ಕೊಂಕಣಿ, ಹಿಂದಿ, ಇಂಗ್ಲಿಷ್, ಕನ್ನಡ ಬಲ್ಲ ನನಗೆ ಕ್ಷೇತ್ರದಲ್ಲಿ ಈ ಎಲ್ಲಾ ಭಾಷೆ ಮಾತನಾಡುವ ಜನರ ತಲುಪಬಲ್ಲೆ. ಜಾತಿ, ಭಾಷೆ, ಹಣ, ಜನರ ಒಡನಾಟ. ಚುನಾವಣೆ ಗೆಲ್ಲಲು ಅವಶ್ಯ ಎಂದ ಅವರು ಒಬಿಸಿ ಜನಾಂಗದವರು ಮುಂದೆ ಲೋಕಸಭಾ ಸದಸ್ಯರಾಗಬೇಕು. ಕಳೆದ 25 ವರ್ಷದಿಂದ ಬ್ರಾಹ್ಮಣರು ಸಂಸದರಾಗಿದ್ದರು. ಈಗ ಬದಲಾವಣೆ ಬೇಕಾಗಿದೆ ಎಂದರು.
ಛೇಡಿಸಿದ್ದೆ ಸೋಲಿಗೆ ಕಾರಣ: ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸತೀಶ್ ಸೈಲ್ ಮಾಜಿ ಮಾಜಿ ಎಂದು ಛೇಡಿಸಿದ್ದೆ ಶಾಸಕಿ ರೂಪಾಲಿ ನಾಯ್ಕ ಚುನಾವಣೆಯಲ್ಲಿ ಸೋಲಲು ಕಾರಣ ಎಂದು ಆನಂದ ಅಸ್ನೋಟಿಕರ್ ಹೇಳಿದರು.
ರೂಪಾಲಿ ನಾಯ್ಕ ಸರ್ವಾಧಿಕಾರಿಯ ರೀತಿ ವರ್ತಿಸುತ್ತಿದ್ದರು. ಅವರು ಸೋತ ನಂತರ ಬಿಜೆಪಿ ಹಿರಿಯರನ್ನು, ಮೂಲ ಹಿರಿಯ ಕಾರ್ಯಕರ್ತರನ್ನು ಬೈದಿರುವ ಆಡಿಯೋ ನನ್ನ ಬಳಿಯಿದೆ. ಆದರೆ ಬಿಜೆಪಿಯ ಒಂದು ಮತವೂ ಕಾಂಗ್ರೆಸ್ ಗೆ ಬಂದಿಲ್ಲ. ಬಿಜೆಪಿ ಮತ ಬಿಜೆಪಿಗೆ ಬಿದ್ದಿವೆ. ಆದರೂ ಬಿಜೆಪಿ ಮೂಕ ಕಾರ್ಯಕರ್ತರನ್ನು ಮಾಜಿ ಶಾಸಕಿ ಬಾಯಿಗೆ ಬಂದಂತೆ, ಅಸಂವಿಧಾನಿಕ ಪದ ಬಳಸಿ ಬೈದಿದ್ದಾರೆ. ಅವರ ವರ್ತನೆ ಬಹುತೇಕ ಸರ್ವಾಧಿಕಾರಿಯಂತಿತ್ತು ಎಂದು ಅಸ್ನೋಟಿಕರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ. ಬಹುಶಃ ಕಮಿಷನ್ ಸರಿಯಾಗಿ ತಂದು ಕೊಟ್ಟಿದ್ದಕ್ಕೆ ಧನ್ಯವಾದ ಹೇಳಬೇಕಿತ್ತು. ಅಲ್ಲದೆ ಶಾಸಕಿ ಅಧಿಕಾರದಲ್ಲಿ ಇದ್ದಾಗ ಅಧಿಕಾರಿಗಳಿಗೆ ಕೊಟ್ಟ ಕಿರುಕುಳ ದಾಖಲೆಯಗುವಂತಹದ್ದು ಎಂದರು. ಬಿಜೆಪಿ ಬಿಟ್ಟು ಆಕೆ ಪಕ್ಷೇತರರಾಗಿ ನಿಲ್ಲಲಿ. 2000 ಮತಗಳು ಬಂದರೆ ಹೆಚ್ಚು ಎಂದು ಆನಂದ ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.