ಉಮಾಕಾಂತ ಭಟ್ಟ ಕೆರೇಕೈ ದಂಪತಿಗಳಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ
ಕಲಾ ರಂಗಕ್ಕೆ ಒಂದು ಪ್ರೀತಿ ಕೊಟ್ಟರೆ ಸಾಕು. ಅದು ರಸಸ್ವಾದ ಆಗುತ್ತದೆ
Team Udayavani, May 1, 2022, 2:22 PM IST
ಶಿರಸಿ: ಸ್ಮರಣೆ ಮಾಡಿದರೆ ಮುಂದಿನ ತಲೆಮಾರಿ ದಾಟಿಸಲು ಸಾಧ್ಯ ಎಂದು ಪ್ರಸಿದ್ಧ ಚಿತ್ರನಟ ಸುಚೇಂದ್ರ ಪ್ರಸಾದ್ ಹೇಳಿದರು.
ಶನಿವಾರ ತಾಲೂಕಿನ ವರ್ಗಾಸರ ಅಭಿನವ ರಂಗ ಮಂದಿರದಲ್ಲಿ ಸಿದ್ದಾಪುರದ ಶ್ರೀಅನಂತ ಕ್ಷಿತಿಜ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಅನಂತೋತ್ಸವ 2022 ರಲ್ಲಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಇಂದು ಸ್ಮರಣೆ ಮಾಡದ ಕಾಲದಲ್ಲಿ ಇದ್ದೇವೆ. ಮೇಲ್ಪಂಕ್ತಿ ಹಾಕಿಕೊಟ್ಟವರು ಹಿರಿಯರು. ಆದರೆ, ನಾವೇ ಕೆಳಗೆ ಸರಿಸಿ ಬಿಡುತ್ತೇವೋ ಎಂಬ ಆತಂಕದಲ್ಲಿ ಇದ್ದೇವೆ ಎಂದೂ ಆತಂಕಿಸಿದರು. ಮುಂದಿನ ತಲೆಮಾರಿಗೆ ಕಲೆ ಹಾಗೂ ವಿದ್ಯೆ ದಾಟಿಸಲು ಗುರುತಿಸುವ ಕಾರ್ಯ ಆಗಬೇಕು. ಸೃತಿ ವಿಸ್ಮೃತಿ ಆಗಿದ್ದೇ ಹೆಚ್ಚಾಗಿದೆ. ಉತ್ತರ ಕನ್ನಡ ಜಿಲ್ಲೆ ಕಲೆ, ಸರಸ್ವತಿ ಇರುವ ಜಿಲ್ಲೆ. ಸಂಸ್ಕೃತಿ ಗೆ ಮಾರು ಹೋಗಿದ್ದೇನೆ ಎಂದರು.
ಅನಂತಶ್ರೀ ಪ್ರಶಸ್ತಿ ಪುರಸ್ಕೃತ ವಿ.ಉಮಾಕಾಂತ ಭಟ್ಟ ಮಾತನಾಡಿ, ಕಲಾ ರಂಗಕ್ಕೆ ಒಂದು ಪ್ರೀತಿ ಕೊಟ್ಟರೆ ಸಾಕು. ಅದು ರಸಸ್ವಾದ ಆಗುತ್ತದೆ. ಜೀವನ ರಂಗಕ್ಕೆ ಕೊಟ್ಟ ಅನೇಕ ಪ್ರೀತಿ, ಭಾವ ಕೊಟ್ಟ ನೆಲ ವರ್ಗಾಸರ. ನನ್ನ ಪ್ರೀತಿಯ ಸತ್ವ ಕೊಟ್ಟ ನೆಲದಲ್ಲಿ ಮಾತನ್ನು ಬದುಕಿಸುವ ಶಕ್ತಿ ಇಲ್ಲಿದೆ ಎಂದ ಅವರು, ಪ್ರೀತಿ ಕಲಾವಿದರನ್ನು, ಕಲಾಸಕ್ತರನ್ನು ಒಂದಾಗಿಸುತ್ತದೆ ಎಂದರು.
ಅಭಿನಂದನಾ ನುಡಿ ಆಡಿದ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಉಮಾಕಾಂತ ಭಟ್ಟ ಅವರು ರಾಷ್ಟ್ರ ಮಟ್ಟದ ವ್ಯಕ್ತಿ. ಪಂಡಿತರು. ಅವರಿಗೆ ರಾಜ್ಯೋತ್ಸವ ಬಂದಿಲ್ಲ. ಅದಕ್ಕಿಂತ ಪದ್ಮ ಪ್ರಶಸ್ತಿ ಬರಬೇಕು. ಅವರು ತಾಳಮದ್ದಲೆ, ಸಂಸ್ಕೃತ ಕ್ಷೇತ್ರದ ಅಸಾಧಾರಣ ಪಂಡಿತರು ಎಂದರು.
ಕರ್ನಾಟಕ ವಿಧಾನ ಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಯಾವ ನಾಡು ಸಮೃದ್ದ ಸಾಹಿತ್ಯ, ಕಲೆಯ ಆರಾಧನೆ ಪರಿಣಾಮಕಾರಿಯಾಗಿ ನಡೆಯಬೇಕು. ಆಗ ಸಮಾಜಕ್ಕೆ ದು ಸಂಸ್ಕಾರ ಸಿಗುತ್ತದೆ. ಕಲೆ, ಸಂಸ್ಕೃತಿ ಉಳಿವಿಗೆ ಇಂಥ ಕಾರ್ಯ ಆಗಬೇಕು. ಜೀವನೋತ್ಸಾಹ ಇಟ್ಟು ಕೆಲಸ ಮಾಡಬೇಕು. ಕೆರೇಕೈ ಅವರು ರಾಜ್ಯ, ರಾಷ್ಟ್ರ ಮಟ್ಟದ ವಿದ್ವಾಂಸರು. ಯುವ ಪೀಳಿಗೆಯನ್ನು ಕಲೆ, ಸಂಸ್ಕೃತಿ ಉಳಿಸಿಕೊಳ್ಳುವ ಆಗಬೇಕು. ಯಕ್ಷಗಾನ, ತಾಳಮದ್ದಲೆ ಸಂಸ್ಕಾರ ರೀತಿಯ ಕಲೆ. ಈ ಕಲೆ ಯುವಕರ ನಡುವೆ ಬರಬೇಕು. ಸರಕಾರ ಕೂಡ ಇನ್ನಷ್ಟು ಪೂರಕ ಪ್ರೋತ್ಸಾಹ ಮಾಡಬೇಕು ಎಂದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡ ಕುಮಟಾ ಮಾತನಾಡಿ,ಕೆರೇಕೈ ಅವರು ಆಡಿದ ನೆಲದಲ್ಲಿ ಈ ಪ್ರಶಸ್ತಿ ಪಡೆಯುವದು ಪದ್ಮಶ್ರೀ ಗಿಂತ ದೊಡ್ಡದು. ಕೆರೇಕೈ ಅವರ ಕೊಡುಗೆ ಈ ಕ್ಷೇತ್ರಕ್ಕೆ ದೊಡ್ಡದು ಎಂದ ಅವರು, ಯಕ್ಷಗಾನ ನಮ್ಮ ಜಿಲ್ಲೆಯ ಕೊಡುಗೆ. ಯಕ್ಷಗಾನ ವಿಸ್ತರಣೆ ಆಗಬೇಕು. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಯಕ್ಷಗಾನ ಸಮ್ಮೇಳನ ಆಗುತ್ತಿದೆ. ಸಮ್ಮೇಳನ ಎಲ್ಲಿ ಎಂಬ ಚರ್ಚೆ ನಡೆದಿದೆ ಎಂದರು.
ಸೆಲ್ಕೋ ಇಂಡಿಯಾ ಸಿಇಓ ಮೋಹನ ಹೆಗಡೆ ಹೆರವಟ್ಟ ಮಾತನಾಡಿ, ಶೀಲ ಸಂಸ್ಕೃತಿ ಉಳಿಸಿಕೊಂಡವರು, ಸೂಕ್ಷ್ಮ ಸಂವೇದಿ ಕಲಾವಿದರು ಕೆರೇಕೈ ಅವರು. ನೆನಪಿಡುವ ಸಾವಿರ ಮಾತುಗಳನ್ನು ಆಡುವ ಅನಂತ ಹೆಗಡೆ ಅವರು. ರಂಗ ಸ್ಥಳದಲ್ಲಿ ಹಾಡುಗಾರಿಕೆ, ನರ್ತನಗಾರಿಕೆ ಅಪಭ್ರಂಶ ಆದಂತೆ ಅರ್ಥಗಾರಿಕೆ ಕೂಡ ಅಪಭ್ರಂಶ ಆಗಿದೆ ಎಂದು ಆತಂಕಿಸಿದ ಅವರು ಸೂಕ್ಷ್ಮ ಸಂವೇದಿ ಕಲಾವಿದರು. ಸಂಸ್ಕಾರ, ಅಧ್ಯಯನ ಶೀಲತೆ ಮಾಡಿದವರು. ಸೂಕ್ಷ್ಮ ಸಂವೇದಿ ಆಗದೇ ಇದ್ದರೆ ಕಲಾವಿದರೇ ಆಗೋದಿಲ್ಲ ಎಂದರು.
ವಿದ್ವಾನ್ ದತ್ತಮೂರ್ತಿ ಭಟ್ಟ ಶಿವಮೊಗ್ಗ, ಉಮಾಕಾಂತ ಭಟ್ಟ ಅವರು ಎಂಬ ಶ್ರೆಷ್ಠ ರತ್ನವು ಕೊಳಗಿ ಅನಂತಣ್ಣ ಅವರ ಚೌಕಟ್ಟಿನಿಂದ ಶೋಭಿತವಾಗಿದೆ ಎಂದರು.
ಕಲಾ ಪೋಷಕ ವರ್ಗಾಸರದ ಆರ್.ಜಿ.ಭಟ್ಟ, ಕೆರೇಕೈ ಅವರಿಗೆ ಪ್ರಶಸ್ತಿ ವರ್ಗಾಸರ, ಪುಟ್ಟಣಮನೆಯಲ್ಲಿ ನಡೆಸುವದು ಹೆಮ್ಮೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಅಧ್ಯಕ್ಷತೆವಹಿಸಿದ್ದರು.
ಹರ್ಷಿತಾ ಹೆಗಡೆ, ಆದಿತ್ಯ ಹೆಗಡೆ, ಅನಿಶಾ ಹೆಗಡೆ ಪ್ರಾರ್ಥಿಸಿದರು. ರಾಜೇಂದ್ರ ಕೊಳಗಿ, ಶಂಕರ ಭಾಗವತ್ ಸಹಕಾರ ನೀಡಿದರು. ಜಿ.ಕೆ.ಭಟ್ಟ ಕಶಿಗೆ ಸ್ವಾಗತಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.