ಅಂಡಮಾನ್ – ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಅಂಕೋಲಾ ಮೂಲದ ನೌಕಾಪಡೆ ಯೋಧ ಹುತಾತ್ಮ
Team Udayavani, Jan 4, 2023, 5:28 PM IST
ಅಂಕೋಲಾ : ಅಂಡಮಾನ್ – ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕೋಲಾ ಮೂಲದ ಭಾರತೀಯ ನೌಕಾಸೇನಾ ಸಿಬ್ಬಂದಿಯೋರ್ವರು ಕಳೆದ 3-4 ದಿನಗಳ ಹಿಂದೆ ಆಕಸ್ಮಿಕ ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ (ಜ. 5 ರಂದು ) ಹುಟ್ಟೂರಿಗೆ ತರಲಾಗುತ್ತಿದೆ.
ತಾಲೂಕಿನ ಪುರಸಭೆ ವ್ಯಾಪ್ತಿಯ ಲಕ್ಷೇಶ್ವರ ನಿವಾಸಿ ನಾಗರಾಜ ಮುಕುಂದ ಕಳಸ (33) ಅಕಾಲಿಕವಾಗಿ ನಿಧನಹೊಂದಿದ ಯೋಧ. ಇವರು ಕಳೆದ 2010 ರಲ್ಲಿ ಐ.ಎನ್.ಎಸ್. ಚಿಲಕ ಕಾರವಾರದ ಮೂಲಕ ಭಾರತೀಯ ನೌಕಾ ಸೇನೆಗೆ ಸೇರಿಕೊಂಡು ದೇಶಸೇವೆಗೆ ಅಣಿಯಾದರು. ಬಳಿಕ ಮುಂಬೈನಲ್ಲಿ ಸೇವೆ ಸಲ್ಲಿಸಿದರು, ಅದಾದ ಮೇಲೆ ಅಂಡಮಾನ್ – ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದ್ದರು. ಸೇವಾ ನಿವೃತ್ತಿಗೆ ಒಂದೆರಡು ವರ್ಷ ಬಾಕಿ ಇರುವಾಗಲೇ ಹುತಾತ್ಮರಾಗಿರುವುದು ವಿಧಿಯಾಟವೇ ಸರಿ.
ಅಂಡಮಾನ್ ನಿಕೋಬಾರ್‌ನಿಂದ ಪಾರ್ಥಿವ ಶರೀರವನ್ನು ಗುರುವಾರ ಬೆಳಗಿನ ಜಾವ ಅಂಕೋಲಾಕ್ಕೆ ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಲಕ್ಷ್ಮೇಶ್ವರದ ಮೂಲ ಮನೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 2 ತಾಸುಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಐಸ್ ಫ್ಯಾಕ್ಟರಿ ರಸ್ತೆಯಿಂದ – ಕೆ.ಸಿ. ರಸ್ತೆ ಹಾಗೂ ಕೆ. ಎಲ್ ಇ ರಸ್ತೆಯಲ್ಲಿ ಸಾಗಿ ಕೋಟೆವಾಡಾದ ಹಿಂದೂ ರುದ್ರ ಭೂಮಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದ್ದು ಸಂಬಂಧಿಸಿದ ಅಧಿಕಾರಿ ವರ್ಗ ಹಾಗೂ ಕುಟುಂಬಸ್ಥರು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆದ ಸ್ಕೂಟಿ; ಲಾರಿ ಹರಿದು ಯುವತಿ ದಾರುಣ ಅಂತ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.