Ankola; ನಕಲಿ ಮಂಗಳಮುಖಿಯ ಬಟ್ಟೆ ಬಿಚ್ಚಿ ಧರ್ಮದೇಟು!
Team Udayavani, Oct 14, 2023, 11:55 PM IST
ಅಂಕೋಲಾ: ಯುವತಿಯಂತೆ ವೇಷ ಹಾಕಿಕೊಂಡು, ಜನರ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿ ಹಣ ಕೇಳುತ್ತಿದ್ದ ವ್ಯಕ್ತಿಯನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಕಾರವಾರ ಹಾಗೂ ಅಂಕೋಲಾ ಪಟ್ಟಣದಲ್ಲಿ ಸೂರಜ್ ಎನ್ನುವ ವ್ಯಕ್ತಿ ಮಂಗಳಮುಖೀ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣ ವಸೂಲಿ ಮಾಡುತ್ತಿದ್ದ. ಈ ವಿಷಯವನ್ನು ಅಸಲಿ ಮಂಗಳಮುಖಿಯರ ಅಂತರಂಗ ಸಂಘಟನೆ ಸದಸ್ಯೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.
ಕೂಡಲೇ ಅಂಕೋಲಾ ಹಾಗೂ ಕಾರವಾರದಲ್ಲಿ ಕಾರ್ಯಾಚರಣೆಗೆ ಇಳಿದ ಮಂಗಳಮುಖಿಯರಾದ ಸಂಧ್ಯಾ ಉಡುಪಿ, ಉ.ಕ. ಅಂತರಂಗ ಸಂಘಟನೆ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ.
ಚೂಡಿದಾರ ಧರಿಸಿ ಹೆಣ್ಣಿನಂತೆ ವಯ್ಯಾರ ಪ್ರದರ್ಶಿಸುತ್ತ ನಾಗರಿಕರಿಂದ ಹಣ ಕೇಳುತ್ತಿದ್ದ ಈತನ ಚೂಡಿದಾರ ಬಿಚ್ಚಿಸಿ ಮಂಗಳಾರತಿ ಮಾಡಿದ್ದಾರೆ. ನಿಜವಾದ ಮಂಗಳಮುಖಿಯರು ನಿಷ್ಠಾವಂತರಿದ್ದಾರೆ. ಆದರೆ ಇಂಥ ನಕಲಿ ಮಂಗಳಮುಖಿ ವೇಷಧಾರಿಗಳಿಂದ ನಿಜವಾದ ಮಂಗಳಮುಖೀಯರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಆಗ್ರಹಿದ್ದಾರೆ.
ಸದ್ಯ ನವರಾತ್ರಿ ಹಾಗೂ ದೀಪಾವಳಿ ಹಬ್ಬ ಬರುತ್ತಿದ್ದು ಹೊರ ಜಿಲ್ಲೆಯಿಂದ ಕಾರವಾರ ಹಾಗೂ ಅಂಕೋಲಾಕ್ಕೆ ಮಂಗಳಮುಖಿಯರು ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇಂಥ ಮಂಗಳಮುಖಿಯರಿಗೆ ಅಂಜದೆ, ನಿರ್ಭೀತವಾಗಿ ಪೊಲೀಸ್ ಅಥವಾ ಅಂತರಂಗ ಸಂಘಟನೆ ಗಮನಕ್ಕೆ ತನ್ನಿ ಎಂದು ಆಯಿಷಾ ಹೊನ್ನಾವರ ತಿಳಿಸಿದ್ದಾರೆ.
ಚೂಡಿದಾರ ಧರಿಸಿ ಮಂಗಳಮುಖಿ ವೇಷ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಅಸಲಿ ಮುಖವನ್ನು ಬಯಲು ಮಾಡಿದ್ದೇವೆ. ಈ ರೀತಿಯ ಘಟನೆಗಳು ಉ.ಕ. ಜಿಲ್ಲೆಯಲ್ಲಿ ಅನೇಕ ಕಡೆ ಕಂಡು ಬರುತ್ತಿದೆ. ಎಸ್ಪಿ ಅವರು ಈ ಬಗ್ಗೆ ವಿಶೇಷವಾಗಿ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
-ಆಯಿಷಾ ಹೊನ್ನಾವರ, ಉಪಾಧ್ಯಕ್ಷೆ ಅಂತರಂಗ ಸಂಘಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.