ಆ್ಯಪ್‌ನಲ್ಲಿ ಅಡಕೆ ಬದಲು ಬಾಳೆ!
ಪಹಣಿಯಲ್ಲಿ ಎಡವಟ್ಟು: ಬೆಳೆಗಾರರಿಗೆ ದಿಗಿಲು,ಮುಖ್ಯ ಬೆಳೆ ಬದಲಾಯಿಸಿದ ಆ್ಯಪ್
Team Udayavani, Feb 24, 2021, 5:11 PM IST
ಶಿರಸಿ: ರೈತರ ಪಹಣಿಯಲ್ಲಿ ರೈತರೇ ಬೆಳೆ ನೋಂದಣಿ ಮಾಡಿಕೊಳ್ಳುವಂತೆ ಸಿದ್ಧಪಡಿಸಿಅನುಷ್ಠಾನಗೊಳಿಸಿದ ಆ್ಯಪ್‌ನಲ್ಲಿ ಮುಖ್ಯ ಬೆಳೆಯನ್ನೇ ಬದಲಾಯಿಸಿ ಎಡವಟ್ಟು ಮಾಡಿದ ಪ್ರಸಂಗ ನಡೆದಿದೆ.
ಇದರಿಂದ ಅನೇಕ ಬೆಳೆಗಾರರಿಗೆ ದಿಗಿಲು ಸೃಷ್ಟಿಸಿದ್ದು, ಕೆಳಸ್ಥರದ ಅಧಿಕಾರಿಗಳು ಸಾಫ್ಟ್ ವೇರ್ ಬೈಯ್ಯುವಂತಾಗಿದೆ. ಕಳೆದ ಜೂನ್, ಜುಲೈ, ಆಗಸ್ಟ್‌ನಲ್ಲಿಬೆಳೆಗಾರರ ಕೈಗೆ ಮೊಬೈಲ್ ಮೂಲಕ ಸಾಫ್ಟ್ ವೇರ್ ನೀಡಿ, ಕೆಲವೆಡೆ ಕೃಷಿ ಇಲಾಖೆಮೂಲಕ ಜನರನ್ನು ನೇಮಿಸಿ ಬೆಳೆ ಸರ್ವೇಮಾಡಲಾಗಿತ್ತು. ಅಂದು ಮಾಡಿದ ಬೆಳೆ ಸರ್ವೇ ಇದೀಗ ಪಹಣಿಯಲ್ಲೂದಾಖಲಾಗಿದ್ದು, ಮುಖ್ಯ ಬೆಳೆಯ ಕಾಲಂನಲ್ಲಿ ಇರಬೇಕಿದ್ದ ಅಡಕೆ ಬದಲಿಗೆ ಬಾಳೆ ಎಂದುಬರೆಯಲಾಗಿದೆ. ಅಡಕೆ ಬೆಳೆಗಾರರ ಭಾಗಾಯ್ತ ಕಾಲಂನಲ್ಲಿ ನಿಲ್ ಮಾಡಿದೆ. ಮುಖ್ಯವಾಗಿ ಒಂದೇ ಬೆಳೆ ದಾಖಲಿಸಿದ್ದಪಹಣಿಯಲ್ಲಿ ಈ ಎಡವಟ್ಟು ಆಗಿಲ್ಲ.ಬದಲಿಗೆ ಅಡಕೆಯಂತಹ ಮಿಶ್ರ ಬೆಳೆಯ ತೋಟದಲ್ಲಿ ಈ ಸಮಸ್ಯೆ ಉಂಟಾಗಿದೆ. ಬಹುವಾರ್ಷಿಕ ಅಡಕೆಯ ಬದಲಿಗೆ ಬಾಳೆ ಮುಖ್ಯ ಬೆಳೆಯಾದರೆ, ಅಡಕೆ, ಕಾಳು ಮೆಣಸು, ಏಲಕ್ಕಿಗಳು ಉಪ ಬೆಳೆಯಾಗಿ ಗುರುತಾಗಿದೆ.
ಇದು ರೈತರಿಗೆ ಏಪ್ರಿಲ್‌ನಲ್ಲಿ ಸಿಗಬೇಕಾದ ಬೆಳೆ ಸಾಲಕ್ಕೂ, ಬೆಳೆವಿಮೆಗೂ ಸಂಕಷ್ಟ ತಂದೊಡ್ಡಲಿದೆ.ಸರಕಾರದ ಈ ಆ್ಯಪ್‌ನಲ್ಲಿ ಮೊದಲೇ ಮುಖ್ಯ ಬೆಳೆ, ಅಂತರ ಬೆಳೆ ಪ್ರತ್ಯೇಕವಾಗಿ ದಾಖಲಿಸಲು ಅವಕಾಶ ನೀಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬದಲಿಗೆ ಎಲ್ಲವೂ ಮುಖ್ಯ ಹಾಗೂ ಅಂತರ ಬೆಳೆ ಎಂದು ದಾಖಲಿಸಲು ಅವಕಾಶ ಮಾಡಿತ್ತು. ಭಾಗಾಯ್ತದ ಪ್ರಸ್ತಾಪ ಕೂಡ ಇಲ್ಲವಾಗಿತ್ತು. ಈ ಕುರಿತು ಬೆಳೆ ಸರ್ವೇ ಆ್ಯಪ್ ಕುರಿತು “ಉದಯವಾಣಿ’ ಆಗಸ್ಟ್ 22 ರಂದೇ ವರದಿ ಮಾಡಿತ್ತು. ಕೃಷಿ ಸಚಿವ ಬಿ.ಸಿ. ಪಾಟೀಲರು ಶಿರಸೀಲಿ ಇದು ಗೊಂದಲ ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಈಗ ಮುಖ್ಯ ಬೆಳೆ ಮಿಶ್ರ ಬೆಳೆ ಕಾಲಂಗೆ ಹೋಗಿದ್ದರಿಂದ ಬೆಳೆ ಸಾಲ ಹಾಗೂ ಬೆಳೆವಿಮೆ ಎರಡಕ್ಕೂ ಸಮಸ್ಯೆ ಆಗುವ ಸಾಧ್ಯತೆಇದೆ. ಅಡಕೆ ಬೆಳೆಗಾರರ ಭಾಗಾಯ್ತ ಕೂಡ ದಾಖಲಾಗಿಲ್ಲ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ಶಿಫಾರಸ್ಸು ಮೂಲಕ ಈ ಪಹಣಿಯ ದುರಸ್ತಿ ಮಾಡುವ ಅಧಿಕಾರ ಉಪ ತಹಶೀಲ್ದಾರರು ಅಥವಾ ತಹಶೀಲ್ದಾರರಿಗೆ ನೀಡಬೇಕು. ಆ್ಯಪ್‌ನಲ್ಲೂ ಮುಖ್ಯಬೆಳೆ, ಅಂತರ ಬೆಳೆ, ಬದುವಿನ ಬೆಳೆ ಎಂದು ಪ್ರತ್ಯೇಕವಾಗಿ ದಾಖಲಿಸಿ ಭೂಮಿ ಸಾಫ್ಟ್‌ವೇರ್‌ಗೆಕೊಡುವಂತಾಗಬೇಕು. ಹಾಗಾದಾಗ ಮಾತ್ರ ಈ ಗೊಂದಲಕ್ಕೆ ಶೀಘ್ರ ತೆರೆ ಎಳೆಯಬಹುದು. ಕೋವಿಡ್ ಸಂಕಷ್ಟದ ಬೆನ್ನಲ್ಲೇ ಪಹಣಿ ಸಂಕಷ್ಟ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಬಹು ವಾರ್ಷಿಕ ಬೆಳೆ ಹಾಗೂ ಮಿಶ್ರ ಬೆಳೆ ಇದ್ದಲ್ಲಿ ಈ ಸಮಸ್ಯೆ ಆಗಿದ್ದು ಗಮನಕ್ಕೆ ಬಂದಿದೆ. ಪರಿಹಾರ ಕುರಿತು ಸಂಬಂಧಪಟ್ಟವರ ಜತೆಸಮಾಲೋಚಿಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. –ಎಚ್.ಕೆ. ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ.
ಪಹಣಿಯಲ್ಲಿ ಅಡಕೆ ಪ್ರಧಾನ ಬೆಳೆ. ಆದರೆ, ಬಾಳೆ ಎಂದು ದಾಖಲಾಗಿದೆ. ಸರಕಾರವೇ ಇದನ್ನು ದುರಸ್ತಿ ಮಾಡಿ ರೈತರ ಅಲೆದಾಟ, ಆತಂಕ ತಪ್ಪಿಸಬೇಕು. – ಜಗದೀಶ ಬಾಳೇಹದ್ದ, ರೈತ. -ರಾಘವೇಂದ್ರ ಬೆಟ್ಟಕೊಪ್ಪ
-ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.