ಶಿರಸಿ: ಅನಧಿಕೃತ ಸಾರಾಯಿ ವ್ಯವಹಾರ ತಡೆಯಲು ಮನವಿ
Team Udayavani, Jan 11, 2022, 2:15 PM IST
ಶಿರಸಿ: ವ್ಯಾಪಕವಾಗಿ ಸಿದ್ಧಾಪುರ ತಾಲೂಕಿನಾದ್ಯಂತ ಅನಧಿಕೃತ ಸಾರಾಯಿ ವ್ಯವಹಾರ ಜರಗುತ್ತಿದ್ದರೂ ಅಬಕಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ಷೇಪಗಳ ಜತೆ, ತಕ್ಷಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ, ಇಲಾಖೆಯ ಕಛೇರಿಯ ಮುಂದೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಇಲಾಖೆಯ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಘಟನೆ ಜರುಗಿತು.
ಸಿದ್ಧಾಪುರ ತಾಲೂಕಿನ ಅಣಲೇಬೈಲ್ ಜಿಲ್ಲಾ ಪಂಚಾಯತ ವ್ಯಾಪ್ತಿಯ ವಿವಿಧಗ್ರಾಮಗಳಿಂದ ಬಂದತಹ ಪ್ರಮುಖರು ಮಂಗಳವಾರ ಶಿರಸಿ ಅಬಕಾರಿ ಇಲಾಖೆಯ ಉಪಅಧೀಕ್ಷಕರು ಮಹೇಂದ್ರ ನಾಯ್ಕ ಅವರಿಗೆ ಮನವಿ ನೀಡಿ ಆಗ್ರಹಿಸಿದರು.
ದಿನನಿತ್ಯ ಸಾರಾಯಿ ಕುಡಿದು ರಸ್ತೆಮೇಲೆ ಬೀಳುತ್ತಾರೆ, ಮನೆಯಲ್ಲಿ ಶಾಂತತೆ ಇಲ್ಲ, ಕೆಲಸಕ್ಕೆ ಹೊಗುವುದಿಲ್ಲ, ದಿನ ನಿತ್ಯ ಕುಡಿಯುವುದರಿಂದ ಕುಟುಂಬದ ನೆಮ್ಮದಿ ಕೆಟ್ಟಿದೆ, ಕುಡಿದು ಬಿದ್ದವರನ್ನ ಮಧ್ಯರಾತ್ರಿ ಹೋಗಿ ಎಬ್ಬಿಸಿಕೊಂಡು ಮನೆಗೆತರಬೇಕು, ಅನಧಿಕೃತವಾಗಿ ಕಂಡ ಕಂಡಲ್ಲಿ ಸಾರಾಯಿ ಮಾರಲಿಕಕೆ ಕಾನೂನು ಪರವಾನಿಗೆ ಕೋಡುತ್ತದೆಯೋ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಾದ ಸರೋಜಾ ನಾಯ್ಕ, ಶೋಭಾ ಭೋವಿವಡ್ಡರ್, ಲೀಲಾವತಿ ಹೆಗಡೆ, ಮಂಜುನಾಥನಾಯ್ಕ, ಕರ್ಣಕರ ಹೆಗಡೆ, ಈರ ಬೀರಾ ಗೌಡ, ಪಂಚಾಯತ ಸದಸ್ಯೆ ಮಂಗಲಾ ಮುಕ್ರಿ, ಶಾರದಾ ಜಿ ಹೆಗಡೆ, ಲೋಕೇಶ್ ಪಿ ಮಡಿವಾಳ, ಹರೀಶ ವಿ ಮಡಿವಾಳ,ಶ್ರೀಕಾಂತ ಪಿ ನಾಯ್ಕ, ಮಂಜುನಾಥ ಎಮ್ ಬಡಗಿ, ಗೌರಿ ರಾಮ ಗೌಡ ಮುಂತಾದವರು ನಿಯೋಗದಲ್ಲಿ ಇದ್ದರು.
ಹೆಗ್ಗರಣೆ ಗ್ರಾಮ ಪಂಚಾಯತ ಅಧ್ಯಕ್ಷ ರಾಜಾರಾಮ ಹೆಗಡೆ ಬೆಳೆಕಲ್, ಸದಸ್ಯರಾಘವೇಂದ್ರ ಹೆಗಡೆ ಇಟ್ಲೋಣಿ ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚೆಯ ಸಂದರ್ಭದಲ್ಲಿ ಅಬಕಾರಿ ನೀರಿಕ್ಷಕರು ಜ್ಯೋತಿಶ್ರೀ ನಾಯ್ಕ, ಅಬಕಾರಿ ಉಪ ನೀರಿಕ್ಷಕರು ಡಿ ಎನ್ ಶಿರಸಿಕರ್ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.