ಭಟ್ಕಳ: ಅರವಿಂದ ಸ್ವಾಮಿ ಅಭಿನಯಿಸುತ್ತಿರುವ ಮಲಯಾಳಂ ಸಿನಿಮಾ ಚಿತ್ರೀಕರಣ
Team Udayavani, Oct 29, 2021, 3:16 PM IST
ಭಟ್ಕಳ: ಮಲಯಾಳಂ, ತಮಿಳು ಸೇರಿದಂತೆ ಬಹುಭಾಷಾ ತಾರೆ ಅರವಿಂದ ಸ್ವಾಮಿ ಅಭಿನಯದ ಅಭಿನಯನದ “ಒಟ್ಟು” ಮಲಯಾಳಂ ಚಿತ್ರದ ಚಿತ್ರೀಕರಣ ನಗರದ ಶಂಶುದ್ಧೀನ್ ಸರ್ಕಲ್, ಮುಖ್ಯ ರಸ್ತೆ, ಮೀನು ಮಾರುಕಟ್ಟೆಗಳಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಿತು.
ದೃಶ್ಯವೊಂದರಲ್ಲಿ ನಿಂತಿರುವ ಕಾರೊಂದರ ಹಿಂದುಗಡೆ ನಿಂತಿರುವ ಅರವಿಂದ ಸ್ವಾಮಿ ದೂರವಾಣಿಯಲ್ಲಿ ಮಾತನಾಡುತ್ತಾ ಭಟ್ಕಳ್, ಭಟ್ಕಳ್ ಎನ್ನುವ ದೃಶ್ಯವನ್ನು ಚಿತ್ರೀಕರಿಸಲಾಯಿತು. ಇನ್ನೊಂದು ದೃಶ್ಯದಲ್ಲಿ ನಗರದ ಹಳೇ ಪುರಸಭಾ ಕಟ್ಟಡದ ಒಳಗಿರುವ ತರಕಾರಿ ಮಾರುಕಟ್ಟೆಯೊಳಕ್ಕೆ ಹೋಗಿ ಹೊರ ಬರುವ ದೃಶ್ಯವಿದೆ.
ಬಹುಭಾಷಾ ಹೀರೋ ಭಟ್ಕಳಕ್ಕೆ ಬಂದಿರುವ ಸುದ್ದಿ ತಿಳಿಯುತ್ತಲೇ ಸಿನೆಮಾ ಪ್ರಿಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಚಿತ್ರೀಕರಣದ ವೇಳೆ ಕ್ಯಾಮರಾಮೆನ್, ಸಹ ನಟರು, ಸಹಾಯಕರು ಸೇರಿದಂತೆ 50ಕ್ಕೂ ಹೆಚ್ಚು ಜನರು ಬಂದಿದ್ದು, ಚಿತ್ರೀಕರಣದ ಸ್ಥಳದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು.
ಇದನ್ನೂ ಓದಿ: ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು
ಪ್ರಮುಖ ಮಲಯಾಳಿ ನಟ ಕುಂಚಾಕೋ ಬೋಬಾನ್, ನಟಿ ಈಶಾ ರೆಬ್ಬಾ ಕೂಡಾ ಹಾಜರಿದ್ದರು. ಎಸ್. ಸಂಜೀವ ಅವರ ಕಥೆಯನ್ನಾಧರಿಸಿ ಆಗಸ್ಟ್ ಸಿನೆಮಾಸ್ ಮತ್ತು ಸಿನಿ ಹಾಲಿಕ್ಸ ನಿರ್ಮಾಣದಡಿಯಲ್ಲಿ ಚಿತ್ರ ಮೂಡಿಬರುತ್ತಿದ್ದು ಪಿಲ್ಲಿನಿ ಟಿ.ಪಿ. ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಆಹ್ ಖಾಸೀಫ್ ಸಂಗೀತ ನಿರ್ದೇಶಕರಾಗಿದ್ದು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಕೊರೊನಾದ ನಂತರ ಭಟ್ಕಳದ ಸುತ್ತಮುತ್ತ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿದ್ದು ಜನರಲ್ಲಿ ಹೆಚ್ಚು ಕುತೂಹಲ ಮೂಡಲು ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.