ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ
Team Udayavani, Oct 20, 2021, 5:00 PM IST
ಶಿರಸಿ: ಕೋವಿಡೋತ್ತರ ಸಂಕಷ್ಟದಲ್ಲೇ ಮುಂದುವರಿದ ಬೆಳೆಗಾರರಿಗೆ ನೀಡಬೇಕಿದ್ದ ಪ್ರೋತ್ಸಾಹಕ್ಕೂ ಸರಕಾರ ಕತ್ತರಿ ಹಾಕಿದೆ. ಒಂದಡೆಗೆ ಹನಿ ನೀರಾವರಿಗೆ ಉತ್ತೇಜಿಸಿ ನೀರಿನ ಮಿತ ಬಳಕೆ ಹಾಗೂ ಸಮೃದ್ಧ ಬೇಸಾಯಕ್ಕೆ ನೆರವಾಗಬೇಕಿದ್ದ ತೋಟಗಾರಿಕಾ ಇಲಾಖೆ ಈಗ ಯೋಜನೆಯನ್ನು ಕನ್ನಡಿಯೊಳಗಿನ ಗಂಟಾಗಿಸುತ್ತಿದೆ.
ಕಳೆದ ವರ್ಷ ಅರ್ಜಿ ಸಲ್ಲಿಸಿ, ಕೋವಿಡ್ಸಂಕಷ್ಟದಲ್ಲಿಯೂ ರೈತರು ಹನಿ ನೀರಾವರಿ ಅಳವಡಿಸಿಕೊಂಡಿದ್ದರೆ, ಅದರ ಸಹಾಯಧನದ ಮೊತ್ತ ಪಾವತಿ ಆಗದ ರೈತರಿಗೆ ಈಗ ಇನ್ನಷ್ಟು ದಾಖಲೆ ಕೇಳಿದೆ.
ಅಂದು ಅರ್ಜಿ ಸಲ್ಲಿಸಿದ್ದರೂ ರೈತರಿಗೆ ಸಹಾಯಧನ ಪಾವತಿಸದೇ ಇರುವದು ಸರಕಾರದ ಸಮಸ್ಯೆ. ಆದರೆ, ಈಗ ಆ ಸಹಾಯಧನ ಪಡೆಯಲು ಸರಕಾರ ಭೂಮಿ ಮಾರಾಟಕ್ಕೆ ಬೇಕಾದ ಇಸಿಹಾಗೂ ಮ್ಯುಟೇಶನ್ ಎಂಟ್ರಿ ಕೇಳುತ್ತಿದೆ! ತನ್ನದಲ್ಲದ ತಪ್ಪಿಗೆ ಫಲಾನುಭವಿ ನೆರವುಪಡೆಯಬೇಕಾದರೆ ಕಂದಾಯ ಇಲಾಖೆಗೆ ಅಲೆದಾಟ ಮಾಡಬೇಕಾಗಿದೆ.
ಇನ್ನೊಂದಡೆ 50 ಗುಂಟೆಗಿಂತ ಅರ್ಧ ಅಣೇ ಅಡಿಕೆ ಭಾಗಾಯತ ಹೆಚ್ಚಿದ್ದರೂ ಇಲಾಖೆಯ ಸಬ್ಸಿಡಿ ಶೇ.90ರಷ್ಟು ಸಿಗದಂತೆ ಆಗಿದೆ. ಅರ್ಧ ಎಕರೆ ಅಡಿಕೆ ತೋಟವಿದ್ದು, ಉಳಿದದ್ದು ಭತ್ತದ ಕ್ಷೇತ್ರ, ಮಾಲ್ಕಿ ಬೇಣ ಇದ್ದರೂ ರೈತರಿಗೆ ಈ ಯೋಜನೆಯ ಲಾಭ ಗೇಟ್ ಪಾಸ್ ಆಗಲಿದೆ.
ಮೊದಲೆಲ್ಲ 2 ಹೆಕ್ಟೇರ್ ತನಕ ಶೇ.90 ರಷ್ಟು ಸಹಾಯಧನ ಹಾಗೂ ಅದಕ್ಕೂ ನಂತರದ ಹನಿ ನೀರಾವರಿಗೆ ಶೇ.45ರಷ್ಟು ಸಹಾಯಧನ ಸೌಲಭ್ಯ ಇತ್ತು. ಆದರೆ, ಈಗ ಕಂದಾಯ ಇಲಾಖೆಯ ಪ್ರಮಾಣ ಪತ್ರ ಕೂಡ ಬೇಕಾಗಿದೆ ಎಂದು ತೋಟಗಾರಿಕಾ ಇಲಾಖೆ ಹೇಳುತ್ತಿದ್ದು, ಅದರ ಪರಿಣಾಮ ಕಂದಾಯ ಇಲಾಖೆ ಭಾಗಾಯತ ಗುಣಿಸಿ ಎಕರೆಗೆ ಎರಡುವರೆ ಎಕರೆ ಪ್ರಮಾಣ ಪತ್ರ ನೀಡುತ್ತಿದೆ. ಇದು ಸಮಸ್ಯೆಗೆ ಕಾರಣವಾಗಿದೆ.
ಪ್ರಸಕ್ತ 2021-2022 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿರೈತರಿಗೆ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಕಾಫಿ, ಟೀ ಹಾಗೂ ರಬ್ಬರ ಹೊರತುಪಡಿಸಿ ಹನಿ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿಆಹ್ವಾನಿಸಿದೆ. ರೈತರು ಅನಮೋದಿತ ಹನಿ ನೀರಾವರಿ ಕಂಪನಿಯವರಿಂದ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.
ಸಣ್ಣ, ಅತಿ ಸಣ್ಣ ರೈತ ಪ್ರಮಾಣ ಪತ್ರ ನೀಡಿದವರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 5 ಎಕರೆಗೆ ವರೆಗೆ ಶೇ.90 ರ ಸಹಾಯಧನ, ಅದಕ್ಕಿಂತ ಜಾಸ್ತಿ ಇದ್ದವರಿಗೆ ಶೇ.45 ರ ಸಹಾಯಧನ ಹಾಗೂ ದೊಡ್ಡ ರೈತರಿಗೆ ಒಟ್ಟಾರೆ 12 ಎಕರೆ 20 ಗುಂಟೆವರೆಗೆ ಶೇ.45 ರಷ್ಟು ಸಹಾಯಧನ ಲಭ್ಯವಿದೆ. ಮೊದಲು ಆರಂಭಕ್ಕೇ ಶೇ.45 ರ ಪ್ರಸ್ತಾಪವೇ ಇದ್ದಿರಲಿಲ್ಲ. ಸರಕಾರದ ಪ್ರಕಾರ 5ಎಕರೆ ಮೇಲ್ಪಟ್ಟ ಇದ್ದವರಿಗೆ ಚಿಕ್ಕ ಹಿಡುವಳಿ ಬರುವದಿಲ್ಲ. ಕಂದಾಯ ಇಲಾಖೆ ಭಾಗಾಯತ ಒಂದುಕಾಲು ಎಕರೆ ಭೂಮಿ ಇದ್ದರೆ ನಾಲ್ಕು ಪಟ್ಟು ಗುಣಿಸಿ ಪ್ರಮಾಣಪತ್ರ ನೀಡುತ್ತದೆ. ಅಲ್ಲಿಗೆ 5ಎಕರೆ ದಾಟುತ್ತದೆ. ಬಡ ರೈತರಿಗೂ ಕಂದಾಯ ಇಲಾಖೆಯ ಗುಣಾಕಾರ ಭಾಗಾಕಾರ ಅರ್ಥವಾಗದೇ ಸಮಸ್ಯೆ ಆಗಿದೆ.
ಮೊದಲೆಲ್ಲ ಸುಲಭ ಹಾಗೂ ಸರಳವಾಗಿದ್ದ ಯೋಜನೆ ಬಳಸಿಕೊಂಡು ಅನೇಕ ರೈತರು ಅಡಿಕೆ, ತರಕಾರಿ ಬೇಸಾಯಗಳಿಗೆ ಹನಿ ನೀರಾವರಿ, ಮೈಕ್ರೋ ಸ್ಪಿಂಕ್ಲರ್ ಸೌಲಭ್ಯ ಸುಲಭವಾಗಿ ಪಡೆದುಕೊಳ್ಳುತ್ತಿದ್ದರು. ಆದರೆ, ಈಗ ಪ್ರಮಾಣಿಕೃತ ಏಜೆಂಟರ ಬದಲಾಗಿ ನೇರವಾಗಿ ಕಂಪನಿಯಿಂದಲೇ ನೀಲನಕ್ಷೆ ತರಿಸಬೇಕಾಗಿದೆ. ಏನೇ ಸಮಸ್ಯೆ ಆದರೂ ಸಿದ್ದಗೊಳಿಸಿದ, ಅಥವಾನಿರ್ವಹಣಾ ಜವಬ್ದಾರಿ ವಸ್ತು ನೀಡಿದ ಏಜೆಂಟರಿಗೆಸಂಬಂಧವೇ ಇಲ್ಲ. ಕೆಳ ಹಂತದಲ್ಲಿ ಗೋಲ್ಮಾಲ್ ಆಗುತ್ತದೆ ಎಂದು ಹೀಗೆ ಸರಕಾರ ಮಾಡಿದೆ ಎಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅದಾಯ್ತು, ಆದರೆ,ಕಾಗದಪತ್ರಗಳ ಕಟ್ಟಳೆ ಏನು ಎಂದು ಕೇಳಿದರೆ ಅಧಿಕಾರಿಗಳ ಬಳಿ ಉತ್ತರವೇ ಇಲ್ಲವಾಗಿದೆ.
ಮೊದಲು ರೈತರ ಪಹಣಿ, ಹಾತ್ ನಕಾಶೆ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ೨೦ ರೂ. ಬಾಂಡ್, ಬಾವಿ ಸರ್ಟಿಫಿಕೇಟ, ಮಣ್ಣು ನೀರು ತಪಾಸಣೆ ವರದಿಗಳು, ರೇಷ್ಮೆ, ಕೃಷಿ ಇಲಾಖೆಯ ನಿರಪೇಕ್ಷಣಾ ಪ್ರಮಾಣಪತ್ರ ಬೇಕಿದ್ದವು.
ಆದರೆ, ಈಗ ಹಳೆ ಬಾಕಿ ಪಡೆದುಕೊಳ್ಳಲು ಸರಕಾರ ಭೂಮಿ ಪರಭಾರೆ ಮಾಡುವಾಗ ಕೇಳುವ ಕಂದಾಯ ಇಲಾಖೆ ನೀಡುವ 5 ವರ್ಷದ ಇಸಿ ಹಾಗೂ ಮ್ಯುಟೇಶನ್ ಎಂಟ್ರಿ ಕೂಡಬೇಕಾಗಿದೆ. ಈ ಮಧ್ಯೆ ಹನಿ ನೀರಾವರಿಗೆ ಬಳಕೆಗೆಬೇಕಾಗುವ ಉಪಕರಣಗಳಮಾರುಕಟ್ಟೆಯ ದರಕ್ಕೂ, ಸರಕಾರದಗೈಡ್‌ಲೈನ್ ದರಕ್ಕೂ ಸಂಬಂಧವೇ ಇಲ್ಲ.ಸಾಕಷ್ಟು ದರದ ವ್ಯತ್ಯಾಸವಿದೆ. ಇದರಿಂದ ರೈತರಿಗೆ ಉತ್ತರಿಸುವದೂ ಕಷ್ಟವಾಗುತ್ತದೆ ಎನ್ನುತ್ತಾರೆ ಸಿದ್ಧ ಏಜನ್ಸಿಯ ರೋಹಿತ್ ಹೆಗಡೆ.
ಶೇ.45 ರಷ್ಟು ಸಹಾಯಧನ ಪಡೆಯಲು ಹೋದರೆ ಕಾಗದಪತ್ರಗಳ ಅಲೆದಾಟಕ್ಕೇ ಅಧಿಕ ಖರ್ಚಾಗುತ್ತದೆ. ಸರಕಾರ ರೈತರ ಪಾಲಿಗೆ ಯೋಜನೆಯನ್ನು ಗಗನ ಕುಸುಮವಾಗಿಸಿದೆ. – ಕಮಲಾಕರ ನಾಯ್ಕ, ರೈತ
ಹನಿ ನೀರಾವರಿ ಯೋಜನೆಗೆ ಎರಡು ಹೆಕ್ಟೇರ್ ಇದ್ದರೆ ಅಥವಾ ಕಡಿಮೆ ಇದ್ದರೆ ಸಣ್ಣ ರೈತರು. ಆದರೆ, ಕಂದಾಯ ಇಲಾಖೆ ಅದನ್ನು ಗುಣಿಸುವದು ಬಹುತೇಕ ರೈತರಿಗೆತೊಂದರೆ ಆಗುತ್ತಿದೆ. ಸರಕಾರದಗಮನಕ್ಕೆ ಕೂಡ ತರುತ್ತಿದ್ದೇವೆ. ಮೊದಲು 2 ಹೆಕ್ಟೇರ್‌ಗೆ ಶೇ.90, ನಂತರ ಶೇ.45 ಸಹಾಯಧನ ಇತ್ತು. ಆದರೆ, ಈಗ ನಿಯಮ ಬದಲಾಗಿದೆ. 5 ಎಕರೆ ಒಳಗೆ ಇದ್ದರೆ ಶೇ.೯೦ ಹಾಗೂ ನಂತರ ಉಳ್ಳವರಿಗೆ ಶೇ.45 ಸಹಾಯಧನ ಸಿಗಲಿದೆ. – ಬಿ.ಪಿ.ಸತೀಶ, ಉಪ ನಿರ್ದೇಶಕರು ಜಿಲ್ಲಾ ತೋಟಗಾರಿಕೆ ಇಲಾಖೆ
-ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.