ಅಡಕೆ ತೋಟ ಪುನರ್ ನಿರ್ಮಾಣಕ್ಕೆ ಬೆಂಬಲ
Team Udayavani, Sep 10, 2019, 12:51 PM IST
ಶಿರಸಿ: ಜಿಲ್ಲೆಯಲ್ಲಿ ಅತಿ ನೆರೆಗೆ ಉಂಟಾದ ಹಾನಿಗೆ ಅಡಕೆ ಬೆಳೆಗಾರರು ಕೂಡ ಕಂಗಾಲಾಗಿದ್ದು, ತೋಟ ಪಟ್ಟಿಗಳ ದುರಸ್ತಿ, ಹೊರ ಕಂಟ ದುರಸ್ತಿ, ತೋಟಗಳಲ್ಲಿ ಮರಗಳ ನಾಶ ಸೇರಿದಂತೆ ಅನೇಕ ಕಾರ್ಯಗಳ ಮೂಲಕ ಪುನರ್ ಸೃಷ್ಟಿಯ ಕೆಲಸ ಆಗಬೇಕಿದೆ. ಈಗ ಈ ಕಾರ್ಯಕ್ಕೆ ಬೆಂಬಲವಾಗಿ ರಾಷ್ಟ್ರೀಯ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಲ ಕೊಡಲಿದೆ.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸುಮಾರು 2,853 ಹೆಕ್ಟೇರ್ ಅಡಕೆ ತೋಟಗಳಿಗೆ ಹಾನಿ ಆಗಿದೆ. ಇಂತಹ ತೊಟಗಳ ಪುನಶ್ಚೇತನಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ತೊಟಗಾರಿಕಾ ಇಲಾಖೆ ನೆರವು ನೀಡಲು ಮುಂದಾಗಿದೆ.
ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಹೊಳೆಹಳ್ಳಗಳು ತುಂಬಿ ಹರಿದು ಅಡಕೆ ತೋಟಗಳನ್ನು ನಾಶ ಮಾಡಿವೆ. ಸುಳಿಯಾಗಿ ಬಂದ ಗಾಳಿಯಿಂದ ಅಡಕೆ ಮರಗಳು ಮುರಿದು ಹೋಗಿವೆ. ಮುಖ್ಯವಾಗಿ ತೋಟದ ಪಕ್ಕದ ಧರೆ ಕುಸಿದು ತೋಟವನ್ನೇ ಬುಡಮೇಲು ಮಾಡಿವೆ. ಅತಿವೃಷ್ಟಿಯಿಂದ ಗ್ರಾಮೀಣ ರೈತರ ಬದುಕಾದ ಅಡಕೆ ಬೇಸಾಯ ಬಾಣಲೆಗೆ ಕೆಡಗಿದೆ.
ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ತಾಲೂಕಿನ ಸಾವಿರಾರು ಕುಟುಂಬಗಳು ಈ ಹಾನಿಯಿಂದ ಕಂಗಾಲಾಗಿವೆ. ಈ ಮಧ್ಯೆ ಅಡಕೆ ಕೊಳೆ ರೋಗ ಕೂಡ ಬೇರೆ ಪರಿಣಾಮ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ ಸಣ್ಣ, ಅತಿಸಣ್ಣ ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರು ಉದ್ಯೋಗ ಖಾತ್ರಿ ಯೋಜನೆಯ ನೆರವಿಗೆ ಆರ್ಹತೆ ಪಡೆದುಕೊಳ್ಳಲಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶೇ.25 ಕ್ಕಿಂತ ಹೆಚ್ಚಿನ ಹಾನಿಯಾದ ಅಡಕೆ ತೋಟ ನಿರ್ಮಿಸಲು ಪ್ರತಿ ಹೆಕ್ಟರ್‌ಗೆ 73, 684ರೂ. ಹಾಗೂ ಶೇ.50ಕ್ಕಿಂತ ಹೆಚ್ಚಿನ ಹಾನಿಯಾದರೆ ಪ್ರತಿ ಹೆಕ್ಟರ್‌ಗೆ 1.38,777ರೂ.ಗಳ ಈ ಸವಲತ್ತು ಪಡೆಯಬಹುದಾಗಿದೆ. ರೈತರು ತಮ್ಮ ಅಧಿಕೃತ ಜಮೀನಿನ ಕನಿಷ್ಠ 20 ಗುಂಟೆ ವಿಸ್ತೀರ್ಣದಲ್ಲಿ ಹಾನಿಗೊಳಗಾದ ಅಡಕೆ ತೋಟವನ್ನು ಪುನಶ್ಚೇತನಗೊಳಿಸಬಹುದಾಗಿದೆ.
ಈ ಯೋಜನೆಯ ಲಾಭ ಪಡೆಯಲು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ರೈತರು ಇಲಾಖೆಗೆ ಸಲ್ಲಿಸಿದ ಅರ್ಜಿ ಸಂಬಂಧಿಸಿದ ವಿಶೇಷ ಗ್ರಾಪಂ ಸಭೆ ಆಯೋಜಿಸಿ ಠರಾವು ಅಂಗಿಕರಿಸಿ ನಿಯಮದಂತೆ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.
ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಎಲ್ಲರಿಗೂ ಅಳವಡಿಕೆ ಮಾಡಿಕೊಡಬೇಕು. ಪ್ರತೀ ಗಿಡ ನೆಟ್ಟರೂ ಅದಕ್ಕೂ ಗಿಡದ ಮೊತ್ತ, ನಾಟಿ ಮೊತ್ತವನ್ನೂ ಕೊಡುವಂತೆ ಆಗಬೇಕು. ಆಗ ಮಾತ್ರ ಎಲ್ಲರಿಗೂ ನೆರವಾಗುತ್ತದೆ. • ವೆಂಕಟೇಶ ಹೆಗಡೆ, ರೈತ
•ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್ ವ್ಯಾಪಾರಿಗಳ ಘೋಷಣೆ
SC: ಲಾಟರಿ ಕಿಂಗ್ ಮಾರ್ಟಿನ್ ಕೇಸ್: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್ ತಡೆ
Malayalam ಕಥೆಗಾರ, ಸಾಹಿತಿ ವಾಸುದೇವನ್ ನಾಯರ್ ವಿಧಿವಶ
Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.