ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಯತ್ನ
Team Udayavani, Jan 20, 2020, 4:21 PM IST
ಶಿರಸಿ: ತಾಲೂಕಿನ ಕೋಳಿಗಾರನಲ್ಲಿ ಭಾನುವಾರ ನಡೆದ ರಾಸು ಪ್ರದರ್ಶನ ಹಾಗೂ ಬರಡು ದನ ಚಿಕಿತ್ಸಾ ಶಿಬಿರ ಜನ ಮೆಚ್ಚುಗೆಗೆ ಪಾತ್ರವಾಯಿತು.
ಕೆ.ಎಂ.ಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ರಾಸು ಪ್ರದರ್ಶನಕ್ಕೆ ಚಾಲನೆ ನೀಡಿ, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಕೇಂದ್ರ ರಚಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಈ ಕುರಿತು ಹೋರಾಡುತ್ತಿದ್ದೇವೆ ಎಂದರು. ದೇಶಿ ತಳಿಗಳಿಗೆ ವಿದೇಶಿ ತಳಿಗಳ ಮಿಶ್ರಣದಿಂದಗುಣಮಟ್ಟದ ತಳಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕೆ.ಎಂ.ಎಫ್ ಹಾಗೂ ಪಶು ಇಲಾಖೆ ತಳಿಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುತ್ತಿದೆ ಎಂದರು.
ಹಳ್ಳಿ ಬಿಟ್ಟು ಪಟ್ಟಣ ಸೇರಿದ ಯುವಕರಲ್ಲಿಯೂ ಹೈನುಗಾರಿಕೆ ಕುರಿತು ಜಾಗೃತಿ ಮೂಡಿದೆ. ಕೃಷಿ ಲಾಭದಾಯವೆಂಬಜಾಗೃತಿ ಮೂಡಿಸಿ ಪುನಃ ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದರು. ಪಶು ಇಲಾಖೆ ಉಪನಿರ್ದೇಶಕ ಡಾ| ಸುಬ್ರಾಯ ಭಟ್ಟ ಮಾತನಾಡಿ, ಈಚೆಗೆ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಯುವಕರು ಪಶುವೈದ್ಯಕೀಯ ವಿದ್ಯಾಭ್ಯಾಸದ ಮೂಲಕ ವೈದ್ಯಕೀಯ ವೃತ್ತಿಗೆ ಪಾದಾರ್ಪಣೆ ಮಾಡಬೇಕಿದೆ. ಯುವಕರು ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಬೇಕು ಎಂದರು.
ತಾಪಂ ಸದಸ್ಯ ರವಿ ಹೆಗಡೆ ಹಳದೋಟ ಮಾತನಾಡಿ, ಸರ್ಕಾರದಿಂದ ಹೈನುಗಾರರಿಗೆ ನೀಡಲ್ಪಡುವ ಔಷಧಗಳನ್ನು ಹಣಕ್ಕೆ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬಂದಿವೆ. ಅಂತಹ ಪ್ರಕರಣಗಳು ಮತ್ತೆಮತ್ತೆ ನಡೆಯದಂತೆ ಪಶು ಇಲಾಖೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು. ಇದೇ ವೇಳೆ ಕೋಳಿಗಾರ್ ಹಾಲು ಉತ್ಪಾದಕ ಸಂಘದ ಸದಸ್ಯರಿಗೆ ಹಾಲು ಕ್ಯಾನ್ ವಿತರಣೆ ಮಾಡಲಾಯಿತು. ಸಂಘದ ಹಿರಿಯ ಸದಸ್ಯ ರಾಮಕೃಷ್ಣ ಗಣಪತಿ ಹೆಗಡೆ ಮುರೇಗಾರ್ ಅವರನ್ನು ಸನ್ಮಾನಿಸಲಾಯಿತು.
ಅಂತೆಯೇ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹಾಗೂ ಉಪನಿರ್ದೇಶ ಡಾ| ಸುಬ್ರಾಯ ಭಟ್ಟ ಅವರನ್ನು ಗೌರವಿಸಲಾಯಿತು. ಜಿಪಂ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ್,ಕೆಎಂಎಫ್ ಸಹಾಯಕ ಸಿ.ಎಸ್. ಪರಮೇಶ್ವರಪ್ಪ, ತಟ್ಟಿಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಟಿ. ಹೆಗಡೆ ಇನ್ನಿತರರು ಇದ್ದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ| ಆರ್.ಜಿ. ಹೆಗಡೆ, ಪಶು ವೈದ್ಯಾಧಿಕಾರಿ ಡಾ| ಎನ್.ಎಚ್. ಸವಣೂರು, ಡಾ| ರೋಹಿತ್ ಹೆಗಡೆ, ಡಾ| ರಾಕೇಶ್ ಇವರು ರಾಸುಗಳ ಆರೋಗ್ಯಕ್ಕೆ ಅಗತ್ಯವಿರುವ ಮಾಹಿತಿ ನೀಡಿದರು. ಪ್ರದರ್ಶನಗೊಂಡ ರಾಸುಗಳಲ್ಲಿ ಆಯಾ ವಿಭಾಗಕ್ಕೆ ತಕ್ಕಂತೆ ಉತ್ತಮ ರಾಸುಗಳೆಂದು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.