ಕಾಡಿನಲ್ಲಿ ಕೆಲಸ ಮಾಡಿದವರಿಗೆ ಪ್ರಶಸ್ತಿ
Team Udayavani, Oct 2, 2019, 1:29 PM IST
ಶಿರಸಿ: ಕಾಡಿನಲ್ಲಿ ಕೆಲಸ ಮಾಡಿ, ಅರಣ್ಯಗಳ್ಳತನ, ವನ್ಯಜೀವಿ ರಕ್ಷಣೆಯಲ್ಲಿ ಕೆಲಸ ಮಾಡಿದ ಅರಣ್ಯ ಇಲಾಖೆ ಪ್ರಾಮಾಣಿಕ, ನೇರ ಅಧಿಕಾರಿಗಳಿಗೆ ನೀಡಲಾಗುವ ಮುಖ್ಯಮಂತ್ರಿಗಳ ಚಿನ್ನದ ಪ್ರಶಸ್ತಿಗೆ ರಾಜ್ಯದ 32 ವೃತ್ತಗಳಿಂದ 25 ಸಿಬ್ಬಂದಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಇಲಾಖೆಯ ಪ್ರತ್ಯೇಕ ಐದು ವಿಭಾಗಗಳಲ್ಲಿ ಪಶಸ್ತಿ ಪ್ರಕಟಿಸಲಾಗಿದೆ. ಈ ಪೈಕಿ ಕೆನರಾ ಅರಣ್ಯ ವೃತ್ತದ ಸಿಬ್ಬಂದಿ ಹೆಚ್ಚಿನ ಪ್ರಶಸ್ತಿಗಳನ್ನು ಬಾಚಿಕೊಂಡು ಅರಣ್ಯಾದಾಯ ಕೊಡುವ ಜೊತೆಗೆ, ರಕ್ಷಣೆಯಲ್ಲೂ ಮುಂದಿದೆ!
ಕೆನರಾ ಅರಣ್ಯ ವೃತ್ತಕ್ಕೆ ಆರು ಪ್ರಶಸ್ತಿಗಳು ಬಂದಿದ್ದು, 4 ಪ್ರಶಸ್ತಿ ಬಾಚಿಕೊಂಡ ಧಾರವಾಡ ನಂತರದ ಸ್ಥಾನದಲ್ಲಿದೆ. ಬಳ್ಳಾರಿ, ಚಿಕ್ಕಮಗಳೂರು ಅರಣ್ಯ ವೃತ್ತಗಳು ತಲಾ ಮೂರು ಪ್ರಶಸ್ತಿ ಪಡೆದು ಮೂರನೇ ಸ್ಥಾನದಲ್ಲಿವೆ.
ಏನಿದು ಪ್ರಶಸ್ತಿ?: ಅರಣ್ಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ವನ್ಯಜೀವಿ ರಕ್ಷಣೆ, ಅರಣ್ಯ ಸಂರಕ್ಷಣೆ, ಅಪರಾಧ ಚಟುವಟಿಕೆ ನಿಯಂತ್ರಿಸಿದ, ಅರಣ್ಯ ನಿರ್ವಹಣೆ ತರಬೇತಿ, ಸಂಶೋಧನೆ, ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಾಧಕ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶಸ್ತಿ ಇದು. ಶೌರ್ಯತನ, ದಿಟ್ಟತನ ತೋರಿದ ಅಧಿಕಾರಿಗಳಿಗೂ ಪ್ರಶಸ್ತಿ. ವೃತ್ತ ಮಟ್ಟದಿಂದ ಸ್ವೀಕೃತವಾದ ಅರ್ಜಿಗಳನ್ನು ಕಳೆದ ಜು.17 ರಂದು ರಾಜ್ಯ ಮಟ್ಟದ ಸಭೆಯಲ್ಲಿ ಅಖೈರುಗೊಳಿಸಿದ ಪ್ರಸ್ತಾವನೆಗೆ ಕಳೆದ ಸೆ.30 ರಂದು ಸರಕಾರದ ಅಧೀನ ಕಾರ್ಯದರ್ಶಿ ಪಿ.ವಿ. ಶ್ರೀನಿವಾಸನ್ ಮುಖ್ಯಮಂತ್ರಿಗಳ ಪದಕ ಪ್ರದಾನಕ್ಕೆ ಸಹಿ ಹಾಕಿದ್ದಾರೆ.
ಯಾರಿಗೆಲ್ಲ ಬಂತು?: ಚಿಕ್ಕಮಗಳೂರು ವೃತ್ತದ ವಲಯಾರಣ್ಯಾಧಿಕಾರಿ ಶಿಲ್ಪಾ ಎಸ್ಸೆಲ್, ಮಂಜುನಾಥ ಎಚ್.ವಿ, ಬಳ್ಳಾರಿಯ ಎ.ಎಚ್. ಮುಲ್ಲಾ, ಗುರುನ ಗೌಡ ಪಾಟೀಲ, ಧಾರವಡದ ಡಿ.ಜಿ. ಕನ್ನಜ್ಜವನರ್, ಕೆನರಾ ವೃತ್ತದ ಶಿರಸಿಯಲ್ಲಿ ಕೆಲಸ ಮಾಡಿದ್ದ ವಿ.ಮುನಿರಾಜು, ಬೆಳಗಾವಿಯ ಎ.ವೈ. ಪಾಟೀಲ, ಉಪ ವಲಯ ಅರಣ್ಯಾಧಿಕಾರಿಗಳಾದ ಧಾರವಾಡದ ಶಂಕರಪ್ಪ ಮಾಣಿ, ಎಸ್.ಬಿ.ಪೂಜಾರ, ಚಾಮರಾಜನಗರದ ಚಂದ್ರಕುಮಾರ ಆರ್, ಕೆನರಾದ ಹರಿಶ್ಚಂದ್ರ ಪಟಗಾರ, ವೈ.ಎಲ್. ಲಮಾಣಿ, ಬೆಳಗಾವಿಯ ಜಿ.ಎಂ. ಬಾಯಣ್ಣವರ್, ಬೆಂಗಳೂರು ತನೂರ್ ಅಹಮದ್, ಕೊಡಗಿನ ವೈ.ಕೆ. ಜಗದೀಶ, ಬಳ್ಳಾರಿಯ ರಾಮಣ್ಣ, ಅರಣ್ಯ ರಕ್ಷಕರಾದ ಕೆನರಾದ ತಾರಾ ನಾಯ್ಕ, ಬೆಂಗಳೂರಿನ ಅನಿಲಕುಮಾರ ಎಸ್. ಜೆ., ಧಾರವಾಡದ ಗಿರೀಶ ಅಗಸಾಲೆ, ಚಾಮರಾಜ ನಗರದ ಮುತ್ತುರಾಜ ಬಿ., ಮಂಗಳೂರಿನ ಮೋಹನ, ಹಾಸನದ ಮಲ್ಲಯ್ಯ ಪಡೆದಿದ್ದಾರೆ.
ಮಾವುತರಿಗೂ: ಅರಣ್ಯ ಸಂರಕ್ಷಣೆ ಜೊತೆಗೆ ಆನೆಗಳನ್ನು ಪಳಗಿಸಿದ ಮಾವುತರಿಗೂ ಪ್ರಶಸ್ತಿ ಲಭಿಸಿದೆ. ಆನೆ ಮಾವುತ ಚಿಕ್ಕಮಗಳೂರಲ್ಲಿ ಚಿಕ್ಕಮಗಿ ಅಂಥೋಣಿ ಯು.ಆರ್. ಅವರಿಗೆ ಲಭಿಸಿದೆ. ಅರಣ್ಯ ಸಂರಕ್ಷಣೆಯಲ್ಲಿ ವಿಶೇಷ ಪಾಲು ನೀಡುವ ಅರಣ್ಯ ವೀಕ್ಷಕರಾದ ಕೆನರಾ ವೃತ್ತದ ಗೋಪಾಲ ಗೌಡ, ಪರಶುರಾಮ ತೋರಸ್ಕರಗೆ ಮುಖ್ಯಮಂತ್ರಿಗಳ ಪದಕ ಪ್ರಾಪ್ತವಾಗಿದೆ.
ಅರಣ್ಯ ರಕ್ಷಣೆಗಾಗಿ ಗುದ್ದಾಟ ಮಾಡಿದ್ದಕ್ಕೆ ಸರಕಾರ ಬೆನ್ನುತಟ್ಟಿದೆ. ಇದು ಇನ್ನಷ್ಟು ಕೆಲಸ ಮಾಡುವ ಉಮೇದು ನೀಡಿದೆ. ವಿ.ಮುನಿರಾಜು, ಶಿರಸಿಯಲ್ಲಿ ಕೆಲಸ ಮಾಡಿ ಹೆಬ್ರಿಗೆ ವರ್ಗಾವಣೆಗೊಂಡ ಅರಣ್ಯಾಧಿಕಾರಿ
ಪ್ರತೀ ವರ್ಷ ಈ ಪ್ರಶಸ್ತಿಯನ್ನು ವಿಶ್ವ ಪರಿಸರ ದಿನಾಚರಣೆಗೇ ನೀಡುವಂತಾಗಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿದ ಅಧಿಕಾರಿಗಳನ್ನೂ ಅಭಿನಂದಿಸಿದಂತಾಗುತ್ತದೆ. –ರಮೇಶ ಹಳೇಕಾನಗೋಡ, ಪರಿಸರ ಕಾರ್ಯಕರ್ತ
ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.