Kadambotsava: ಮಾರ್ಚ್ 5ರಂದು ಬನವಾಸಿ ಕದಂಬೋತ್ಸವ… ಆಹ್ವಾನ ಪತ್ರಿಕೆ ಬಿಡುಗಡೆ
Team Udayavani, Feb 29, 2024, 12:20 PM IST
ಶಿರಸಿ: ರಾಜ್ಯ ಮಟ್ಟದ ಕದಂಬೋತ್ಸವ ಮಾರ್ಚ್ 5 ಹಾಗೂ 6 ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 5ರ ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ.
ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರತಿಭೆಗಳ ಜೊತೆಗೆ ಮೊದಲ ದಿನ ರಘು ದೀಕ್ಷಿತ್ ತಂಡ ಹಾಗೂ ಎರಡನೇ ದಿನ ಹರಿಕೃಷ್ಣ ತಂಡ ಬೆಂಗಳೂರು ಕಾರ್ಯಕ್ರಮ ನೀಡಲಿದ್ದಾರೆ.
ಶಿರಸಿಯಲ್ಲಿ ಉತ್ಸವ ಸಮಿತಿ ಕಾರ್ಯದರ್ಶಿ ಎಸಿ ಅಪರ್ಣಾ ರಮೇಶ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ, ಈಗಾಗಲೇ ಉತ್ಸವದ ಸಿದ್ದತೆ ನಡೆದಿದೆ. ಸರಕಾರ ಕೂಡ 2 ಕೋ.ರೂ.ಬಿಡುಗಡೆಗೆ ಮಾಡಿದ ವರದಿ ಬಂದಿದೆ ಎಂದರು.
ಈ ವೇಳೆ ತಹಸೀಲ್ದಾರ ಶ್ರೀಧರ ಮುಂದಲಮನಿ, ಉಪ ತಹಶೀಲ್ದಾರರಾದ ಶ್ರೀಕೃಷ್ಣ ಕಾಮಕರ, ರಮೇಶ ಹೆಗಡೆ, ಬಿಇಓ ನಾಗರಾಜ ನಾಯ್ಕ, ಇಓ ಸತೀಶ ಹೆಗಡೆ ಇತರರು ಇದ್ದರು.
ಸಾಂಪ್ರದಾಯಿಕವಾಗಿ ಪಂಪ ಪ್ರಶಸ್ತಿ ಕದಂಬೋತ್ಸವದಲ್ಲಿ ಪ್ರಧಾನ ಆಗಬೇಕಿತ್ತು. ಆದರೆ, ಈ ಬಾರಿ ಬೆಂಗಳೂರಿನಲ್ಲಿ ನಾ.ಡಿಸೋಜ ಅವರಿಗೆ ಪ್ರಧಾನ ಆಗಿದೆ ಎಂಬುದೂ ಉಲ್ಲೇಖನೀಯ.
ಹೆಬ್ಬಾರ್ ಗೈರು!
ಪ್ರತಿ ಕದಂಬೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಿಂದ ಎಲ್ಲ ಹಂತದಲ್ಲೂ ಸಕ್ರೀಯವಾಗಿ ಇರುತ್ತಿದ್ದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಈ ಬಾರಿ ಆಹ್ವಾನ ಪತ್ರಿಕೆ ಬಿಡುಗಡೆಯಲ್ಲಿ ಗೈರಾದರು. ರಾಜ್ಯ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ಕದಂಬೋತ್ಸವ ಕೂಡ ನಡೆಯುತ್ತಿದ್ದು, ಹೆಬ್ಬಾರ್ ಅವರ ಗೈರು ಅನೇಕ ಅರ್ಥಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: Himachal: ಅಡ್ಡಮತದಾನ ಮಾಡಿದ 6 ಮಂದಿ ಕೈ ಶಾಸಕರು ಸದಸ್ಯತ್ವದಿಂದ ಅನರ್ಹ: ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.