ಬನವಾಸಿ; ಕಂದಬೋತ್ಸವದ ಮೆರಗು-ಬಿಸಿಲ ಬೇಗೆಯಲ್ಲೂ ಅರಳಿದ ಫಲ-ಪುಷ್ಪ

ಬೆಂಗಳೂರಿನಿಂದ ನೇರ ಖರೀದಿಸಿ ತಂದು ಇಲ್ಲಿ ಚೆಂದದಿಂದ ಜೋಡಿಸಲಾಗಿದೆ.

Team Udayavani, Mar 6, 2024, 6:00 PM IST

ಬನವಾಸಿ; ಕಂದಬೋತ್ಸವದ ಮೆರಗು-ಬಿಸಿಲ ಬೇಗೆಯಲ್ಲೂ ಅರಳಿದ ಫಲ-ಪುಷ್ಪ

ಬನವಾಸಿ (ಶಿರಸಿ): ಕಂದಬೋತ್ಸವ ಅಂಗವಾಗಿ ಇಲ್ಲಿನ ಬನವಾಸಿ ಮೈದಾನದಲ್ಲಿ ಫಲ-ಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ. ಬಿಸಿಲ ಬೇಗೆ ಮಧ್ಯೆಯೂ ವೈವಿಧ್ಯಮಯ ಪುಷ್ಪಗಳು ಅರಳಿ ನಿಂತು ಆಸಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಪುಷ್ಪ ಕೃಷಿ ಉತ್ತೇಜಿಸುವ ಆಶಯದೊಂದಿಗೆ ತೋಟಗಾರಿಕೆ ಇಲಾಖೆ ಹಮ್ಮಿಕೊಂಡ ಫಲ-ಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ವಿವಿಧ ಕಲಾಕೃತಿ ಸಿದ್ಧಗೊಂಡಿದ್ದು ನೋಡುಗರ ಮನ ಮುದಗೊಳಿಸುತ್ತಿವೆ.

ಬನವಾಸಿಯ ಅಧಿದೇವ ಶ್ರೀ ಮಧುಕೇಶ್ವರ ಸೇರಿದಂತೆ ವಿವಿಧ ಆಕೃತಿಗಳನ್ನು ಪುಷ್ಪದಲ್ಲೇ ಸಿದ್ಧಗೊಳಿಸಲಾಗಿತ್ತು. ಐದು ಬಣ್ಣಕ್ಕೂ ಅಧಿಕ ಸಾವಿರಾರು ಸೇವಂತಿಗೆ, ನಾಲ್ಕು ಬಣ್ಣದ ಗುಲಾಬಿಗಳು, ಜರಬೇರಾ, ಆರ್ಕಿಡ್‌, ಗ್ಲಾಡಿಯೋಲಸ್‌ ಡೈಸಿಯ
ಪುಷ್ಪಗಳನ್ನು ಚಿಕ್ಕಬಳ್ಳಾಪುರದ ರೈತರ ಹೊಲಗಳಿಂದ, ಬೆಂಗಳೂರಿನಿಂದ ನೇರ ಖರೀದಿಸಿ ತಂದು ಇಲ್ಲಿ ಚೆಂದದಿಂದ ಜೋಡಿಸಲಾಗಿದೆ.

40 ಸಾವಿರಕ್ಕೂ ಅಧಿಕ ತರಾವರಿ ಪುಷ್ಪಗಳು, ಐದು ಸಾವಿರಕ್ಕೂ ಅಧಿಕ ಮಾರಿಗೋಲ್ಡ, ಜಿನಿಯಾ, ಬಸ್ಲಾಂ ಸೇರಿದಂತೆ 20 ಕ್ಕೂ ಅಧಿಕ ಹೂವುಗಳು ಕುಂಡಗಳಲ್ಲಿ ಗಮನ ಸೆಳೆದವು. ಹೂವಗಳು ವಿವಿಧ ರೂಪ ತಳೆದು ಜನರನ್ನು ಆಕರ್ಷಿಸಿದವು. ಗಿರೀಶ ಶಿವಮೊಗ್ಗ ಅವರ ಕಲ್ಲಂಗಡಿಯ ಆಕರ್ಷಕ ಕೆತ್ತನೆಗಳು, ಚಂದ್ರಯಾನ, ಬನವಾಸಿ ಮಧುಕೇಶ್ವರ ದೇವರು ಪುಷ್ಪಗಳಲ್ಲೇ ಅರಳಿದ್ದು ಗಮನ ಸೆಳೆದವು.

ಚಂದ್ರಯಾನಕ್ಕೆ 20 ಸಾವಿರ, ಮಧುಕೇಶ್ವರ ದೇವರ ಕಲಾಕೃತಿಯನ್ನು 8 ಸಾವಿರ ಹೂವುಗಳಿಂದ ಅರಳಿಸಲಾಗಿದೆ. ಸತೀಶ ಹೆಗಡೆ, ರವಿ ಹೆಗಡೆ ಅವರ ತಂಡದಿಂದ ಬಗೆ ಬಗೆಯ ಪುಷ್ಪ ಜೋಡಣೆ ಪ್ರದರ್ಶನದ ಸೌಂದರ್ಯ ಹೆಚ್ಚಿಸಿದ್ದವು. ಹೂವಿನಿಂದ ಅಣಬೆ, ಸೆಲ್ಪಿ ಪಾಯಿಂಟ್‌ ಇನ್ನಷ್ಟು ವೈವಿಧ್ಯತೆಗೆ ಸಾಕ್ಷಿಯಾಗಿದ್ದವು. ಸಿತಾರಾಮ ಹೆಗಡೆಯವರ ವೆಜಿಟೇಬಲ್‌ ರಂಗೋಲಿ ಪೂರ್ಣಿಮಾ ಶೆಟ್ಟಿ ಬಿಡಿಸಿದ್ದ ಪುಷ್ಪ ರಂಗೋಲಿ ಆಕರ್ಷಿಕವಾಗಿದ್ದವು.

ತೆಂಗು, ಬಾಳೆ, ಅನಾನಸ್‌, ಅಡಿಕೆ, ವಿವಿಧ ತರಕಾರಿಗಳು, ಲಾವಂಚ, ಜೇನಿನ ವಿವಿಧತೆಗಳು ಇಲ್ಲಿ ಅನಾವರಣಗೊಂಡವು. ತೋಟಗಾರಿಕಾ ಅಧಿಕಾರಿಗಳಾದ ಬಿ.ಪಿ.ಸತೀಶ, ಸತೀಶ ಹೆಗಡೆ, ಗಣೇಶ ಹೆಗಡೆ, ಇತರ ಅ ಧಿಕಾರಿಗಳು, ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಸಹಕಾರ ನೀಡಿದರು.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.