ದೇಹದ ಗರ್ಭಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಿಕೊಳ್ಳಬೇಕು: ಸ್ವರ್ಣವಲ್ಲೀ ಶ್ರೀ
ಬರೂರು ಶ್ರೀ ಲಕ್ಷ್ಮೀನರಸಿಂಹ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ
Team Udayavani, Feb 5, 2022, 6:11 PM IST
ಶಿರಸಿ: ಗರ್ಭ ಗುಡಿಯಲ್ಲಿ ದೇವರ ಪ್ರತಿಷ್ಠಾಪನೆ ಆದಂತೆ ಪ್ರತಿ ವ್ಯಕ್ತಿ ದೇಹದ ಗರ್ಭಗುಡಿಯಾದ ಹೃದಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ಬರೂರು ಶ್ರೀ ಲಕ್ಷ್ಮೀನರಸಿಂಹ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶನಿವಾರ ಶಿಖರ ಕಳಶ ಪ್ರತಿಷ್ಠೆ ನೆರವೇರಿಸಿ ಅವರು ಆಶೀರ್ವಚನ ನುಡಿದರು.
ದೇವಾಲಯಕ್ಕೂ, ವ್ಯಕ್ತಿಯ ದೇಹಕ್ಕೂ ಸಾಮ್ಯತೆ ಇದೆ. ಒಬ್ಬ ಮನುಷ್ಯ ಶಾಂತಚಿತ್ತತೆಯಲ್ಲಿ ಕುಳಿತಿರುವ ಸ್ಥಿತಿ ಹೇಗಿರುತ್ತದೆಯೋ, ದೇವಾಲಯವೂ ಹಾಗಿರುತ್ತದೆ. ನೆಲಕ್ಕೆ ಕೂತಾಗ ಇರುವ ಶರೀರದ ವಿನ್ಯಾಸದ ರೀತಿ ಗರ್ಭ ಗುಡಿ ಇರುತ್ತದೆ. ಧ್ವಜ ಸ್ತಂಬ ದೇವರ ಪಾದದ ಪ್ರತೀಕ ಎಂದರು.
ಮೂಲಧಾರದಿಂದ ಆರಂಭಿಸಿ ಬ್ರಹ್ಮರಂದ್ರದ ವರೆಗೆ ಗರ್ಭಗುಡಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಅದು ಕ್ಷಣಾಧಾರದ ಸ್ಥಾಪನೆ. ನಮ್ಮೊಳಗೂ ದೇವರ ಸ್ಥಾಪನೆ ಮಾಡಬೇಕು, ಮೊದಲು ದೇವರ ಗುಡಿಯಲ್ಲಿ ಅವನ ಸ್ಥಾಪನೆ, ಉಪಾಸನೆ, ನಂತರ ಶರೀರದ ಒಳಗೆ ಉಪಾಸಣೆ, ಸ್ಥಾಪನೆ ಆಗಬೇಕು ಎಂದರು.
ಹಿರಣ್ಯ ಕಶ್ಯಪನನ್ನು ನಾಶಮಾಡಲು ಭಗವಂತ ರೌದ್ರಾವತಾರ ತಾಳಿದ್ದ. ಆ ಬಳಿಕ ಪ್ರಹಲ್ಲಾದನನ್ನು ಅಷ್ಟೇ ಸೌಮ್ಯತೆಯಿಂದ ಎತ್ತಿ ಪ್ರೀತಿ ತೋರಿದ್ದಾನೆ. ಭಗವಂತನ ಸಾನ್ನಿಧ್ಯವೇ ಅದಮ್ಯವಾದುದು. ಲಕ್ಷ್ಮೀ ನರಸಿಂಹನ ಅನೇಕ ದೇವಸ್ಥಾನಗಳಿದ್ದರೂ, ಶೀಲಾಮಯ ದೇವಸ್ಥಾನ ಬಹಳ ಕಡಿಮೆಯಿದೆ ಎಂದರು.
ದೇವಾಲಯದ ಗೌರವಾಧ್ಯಕ್ಷರೂ ಆಗಿರುವ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇವಸ್ಥಾನದ ಶಕ್ತಿಯನ್ನು ದೇವಾಲಯ ತೋರಿಸಿದೆ. 1.5 ಕೋಟಿ ರೂ. ಮೊತ್ತದಲ್ಲಿ ಕೇವಲ 9 ತಿಂಗಳಲ್ಲಿ ಮಾಡಿರುವುದು ದೇವರ ಆಶೀರ್ವಾದವನ್ನು ತೋರಿಸುತ್ತಿದೆ ಎಂದರು.
ವೇದಮೂರ್ತಿ ಮಂಜುಗುಣಿ ಶ್ರೀನಿವಾಸ ಭಟ್, ವಿ. ಗಣಪತಿ ಭಟ್ ಕಿಬ್ಬಳ್ಳಿ, ವಿ. ಕುಮಾರ ಭಟ್ ಕೊಳಗಿಬೀಸ್ ಪ್ರಧಾನ ಆಚಾರ್ಯತ್ವ ವಹಿಸಿದ್ದರು.
ಕ್ರೇನ್ ಮೂಲಕ ತೆರಳಿದ ಸ್ವಾಮೀಜಿ! :
ದೇವಾಲಯದ ಶಿಖರ ಕಳಶ ಪ್ರತಿಷ್ಠೆಗೆ ತೆರಳುವ ಸಲುವಾಗಿ ಸ್ವಾಮೀಜಿಯವರಿಗೆ ಕ್ರೇನ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಭಕ್ತರ ಸಮ್ಮುಖದಲ್ಲಿ ಕ್ರೇನ್ ಮೂಲಕ ಏರಿದ ಸ್ವಾಮೀಜಿ ಕಳಶ ಪ್ರತಿಷ್ಠೆ ನೆರವೇರಿಸಿದರು.
ಇಲ್ಲಿ ಯೋಗ ನರಸಿಂಹ ಇದೆ. ಅದು ಗ್ರಾಮಸ್ಥರ ಯೋಗ. ಹೃದಯದಲ್ಲಿ ಲಕ್ಷ್ಮೀ ಆವಾಸವಿದೆ. ಭಕ್ತರಹತ್ತಿರ ಬರುವಲ್ಲಿ ಭಗವಂತನಿಗೆ ಯಾವುದೇ ಅಡೆತಡೆಗಳಿಲ್ಲ. ಹೀಗಾಗಿ, ಬರೂರು ಎಲ್ಲರೂ ಬರುವ ಊರಾಗಿದೆ.-ಸ್ವರ್ಣವಲ್ಲೀ ಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.