ಹೊಸ ವರ್ಷದ ಸ್ವಾಗತಕ್ಕೆ ನಳನಳಿಸುತ್ತಿವೆ ಕಡಲ ತೀರಗಳು
Team Udayavani, Dec 26, 2018, 5:36 PM IST
ಕಾರವಾರ: ಕಡಲತೀರದ ನಗರಿ ಕಾರವಾರದ ರಾಕ್ ಗಾರ್ಡನ್, ರವೀಂದ್ರನಾಥ್ ಕಡಲತೀರ, ಯುದ್ಧನೌಕೆ ಮ್ಯುಜಿಯಂ, ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೈತೆರೆದು ನಿಂತಿವೆ. ಕಾರವಾರದ ಕಡಲತೀರ ಪ್ರವಾಸಿಗರನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದೆ. ಇಲ್ಲಿನ ಕಾಳಿ ರಿವರ್ ಗಾರ್ಡನ್, ಸದಾಶಿವಗಡದ ದುರ್ಗಾದೇವಿ ದೇವಸ್ಥಾನ ಹಾಗೂ ಅಲ್ಲಿಂದ ಕಾಣುವ ಕಾಳಿ ನದಿಯ ವಿಹಂಗಮ ನೋಟ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿ ಪರಿಣಮಿಸಿದ್ದು, ಪ್ರವಾಸಿಗರು ವಾರ ಮೊದಲೇ ಹೊಟೆಲ್ ಬಾಡಿಗೆ ರೂಮು ಕಾಯ್ದಿಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಸ್ಥಾನ, ಟಿಬೇಟಿಯನ್ ಕ್ಯಾಂಪ್, ಯಾಣದ ಶಿಖರ, ಗೋಕರ್ಣ, ಓಂ, ಕುಡ್ಲೆ, ಅಪ್ಸರ ಕೊಂಡ, ಮುರ್ಡೇಶ್ವರ ಬೀಚ್ ಗಳು ಪ್ರವಾಸೋದ್ಯಮದಲ್ಲಿ ಗೋವಾಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿವೆ. ಅದರಲ್ಲಿ ಪ್ರಮುಖವಾಗಿ ಇಲ್ಲಿನ ರವೀಂದ್ರನಾಥ್ ಕಡಲತೀರ ಪ್ರವಾಸಿಗರನ್ನು ಹೊಸ ವರ್ಷಾಚರಣೆಗೆ ಕೈ ಬೀಸಿ ಕರೆಯುತ್ತಿದೆ. ರಾಜ್ಯದ ಮೂಲಕ ಹಾದು ಹೋಗುವ ಪ್ರವಾಸಿಗರು ಗೋವಾದಲ್ಲಿ ಹೊಸ ವರ್ಷಾಚರಣೆ ನಡೆಸಲು ಹೆಚ್ಚು ಇಷ್ಟಪಡುತ್ತಿದ್ದರು. ಆದರೆ ಸುಂದರ ಬೀಚ್, ಸ್ಕೂಬಾ ಡೈವಿಂಗ್, ಡಾಲಿ #àನ್ ವೀಕ್ಷಣೆ, ಬೋಟಿಂಗ್, ಸಮುದ್ರ ಮೀನಿನ ಆಹಾರ ಮುಂತಾದ ಪ್ರವಾಸಿ ಆಕರ್ಷಕ ಮನರಂಜನಾ ತಾಣಗಳು, ಇಷ್ಟವಾದ ಸೀಫುಡ್ ಇಲ್ಲಿಯೂ ಲಭ್ಯವಿದೆ. ಹೊಸ ವರ್ಷದ ಸಂಭ್ರಮಕ್ಕಾಗಿ ಪ್ರವಾಸಿಗರು ಗೋವಾ ಬದಲಿಗೆ ಜಿಲ್ಲಾ ಕೇಂದ್ರ ಕಾರವಾರದ ರವೀಂದ್ರನಾಥ್ ಕಡಲತೀರಕ್ಕೆ ಬರಲು ಒಲವು ತೋರುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ವಾರ ಮುಂಚೆನೇ ಇಲ್ಲಿನ ಹೊಟೆಲ್‌ಗಳಲ್ಲಿ ಬಾಡಿಗೆ ರೂಮು ಕಾಯ್ದಿಡುತ್ತಿರುವುದರಿಂದ ಇಲ್ಲಿನ ಹೊಟೆಲ್‌ಗಳ ಬಾಡಿಗೆ ರೂಮುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕ್ರಿಸ್ಮಸ್ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಹಾಗೂ ಹೊಸ ವರ್ಷದ ಸಂಭ್ರಮಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಗೋವಾದತ್ತ ಪ್ರವಾಸಿಗರು ಹೆಜ್ಜೆ ಹಾಕುತ್ತಾರೆ. ಆದರೆ ಗೋವಾದ ಲಾಡ್ಜ್ಗಳು ದುಬಾರಿ ಹಾಗೂ ಅಲ್ಲಿ ಎಲ್ಲರಿಗೂ ಬಾಡಿಗೆ ರೂಮು ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಇದಲ್ಲದೇ ಅಲ್ಲಿ ಹೊಸ ವರ್ಷಾಚರಣೆ ನಿಮಿತ್ತ ಟ್ರಾಫಿಕ್ ಜಾಮ್ ಆಗುವುದರಿಂದ ವರ್ಷದ ಕೊನೆಯ ದಿನ ಇಲ್ಲಿನ ಗಡಿ ಮೂಲಕ ಗೋವಾಕ್ಕೆ ಬರುವ ವಾಹನಗಳನ್ನು ಗೋವಾ ಪೊಲೀಸ್ ಇಲಾಖೆ ವಾಹನ ಸಂಚಾರ ನಿಯಂತ್ರಿಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿ ಸಮೀಪ ರಾಜ್ಯದಿಂದ ಬರುವ ವಾಹನಗಳನ್ನು ಅಲ್ಲಿನ ಪೊಲೀಸರಿಂದ ಅರ್ಧಕ್ಕೆ ತಡೆಯಲಾಗುತ್ತದೆ. ಹೀಗಾಗಿ ಬಹಳಷ್ಟು ಪ್ರವಾಸಿಗರು ರವೀಂದ್ರನಾಥ್ ಕಡಲ ತೀರದತ್ತ ವಾಪಸ್ ಆಗಿ ಸಂಭ್ರಮಿಸುವ ಘಟನೆಗಳು ಮರುಕಳಿಸುತ್ತಿವೆ. ಇಲ್ಲಿಯೇ ನೂತನ ವರ್ಷವನ್ನು ಬರಮಾಡಿಕೊಳ್ಳುವ ಉದ್ದೇಶದಿಂದ ಒಂದು ವಾರ ಮೊದಲೇ ಇಲ್ಲಿನ ಹೊಟೆಲ್‌ಗಳ ಬಾಡಿಗೆ ರೂಮುಗಳನ್ನು ಕಾಯ್ದಿರಿಸಲಾಗುತ್ತಿದೆ. ಹೋಟೆಲ್ ಭರ್ತಿ: ಇಲ್ಲಿನ ಪ್ರತಿಷ್ಠಿತ ಹೊಟೆಲ್ ಗಳ ರೂಮುಗಳೆಲ್ಲವೂ 2019ರ ಜನವರಿ 1ರ ತನಕ ಬುಕ್ ಆಗಿದ್ದು, ರೂಮು ಬಾಡಿಗೆ ಸಾಮಾನ್ಯ ಮತ್ತು ಎಸಿ ಶ್ರೇಣಿಗೆ ತಕ್ಕಂತೆ, 1350 ರೂ.ನಿಂದ 2500 ರೂ.ತನಕ ದರ ಏರಿದೆ. ಮೂಲ ದರದೊಂದಿಗೆ ಶೇ.12 ಜಿಎಸ್‌ಟಿ ಕರ ಇದೆ. ಸೌಲಭ್ಯ ಬೇಕಾದರೆ ಹೆಚ್ಚಿನ ಬೆಲೆ ಆಕರಿಸಲಾಗುತ್ತದೆ. ಹೀಗಾಗಿ ಸಾಮಾನ್ಯ ದಿನಗಳಲ್ಲಿ ರೂಮ್ ಒಂದಕ್ಕೆ 1000 ರೂ.ಗಳ ಇದ್ದ ದರ, ಒಮ್ಮಿಂದಲೇ ಗಗನ ಮುಖೀಯಾಗಿದೆ ಎಂದು ಇಲ್ಲಿನ ಹೊಟೆಲ್ ಸಿಬ್ಬಂದಿ ರಮೇಶ್ ತಿಳಿಸಿದರು.
ನಾಗರಾಜ ಹರಪನಹಳ್ಳಿ
ಕಾರವಾರ: ಕಡಲತೀರದ ನಗರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.