ಉತ್ತರ ಕನ್ನಡದ ಶಿಕ್ಷಣಕ್ಕೆ ಮುಕುಟಪ್ರಾಯ ಭಟ್ಕಳ ಎಜ್ಯುಕೇಶನ್ ಟ್ರಸ್ಟ್
ಹಲವು ವೈಶಿಷ್ಟ್ಯಗಳೊಂದಿಗೆ ಸಾಧಿಸಿದೆ ಅಕ್ಷರ ದಾಸೋಹದ ಅಭೂತಪೂರ್ವ ಮೈಲಿಗಲ್ಲುಗಳು
Team Udayavani, Jul 3, 2022, 3:00 PM IST
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಲಕ್ಷಾಂತರ ಜನ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ.
ವಿಶೇಷವಾಗಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಅವರ ಬಾಳಿಗೆ ಬೆಳಕಾಗಿದೆ. ಜಿಲ್ಲೆಯ ಜನತೆಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗೆ ತೆರೆದ ಭಾಗ್ಯದ ಬಾಗಿಲು ಎಂದರೆ ಉತ್ಪ್ರೇಕ್ಷೆಯಾಗಲಾರದು.
ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದ ಜನರ ವಿದ್ಯಾಭ್ಯಾಸಕ್ಕಾಗಿ 1935ರಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಹುಟ್ಟು ಹಾಕಿ, ನಾಡಿನ ಶಿಕ್ಷಣಕ್ಕೆ ಹಿರಿಯರು ನೀಡಿದ ಕೊಡುಗೆ ಅವಿಸ್ಮರಣೀಯ.
ವಿದ್ಯಾದಾನ ಉದ್ದೇಶದಿಂದಲೇ ಆರಂಭವಾದ ಟ್ರಸ್ಟ್ ತನ್ನ ಕಾರ್ಯ ಆರಂಭಿಸಲು ಇರುವ ಹಲವಾರು ಎಡರು ತೊಡರುಗಳನ್ನು ಹಿಂದಿಕ್ಕಿ ಇಂದಿಗೆ 84 ಅವಿಶ್ರಾಂತ ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಒಟ್ಟು 8 ವಿದ್ಯಾ ಸಂಸ್ಥೆಗಳನ್ನು ಹೊಂದಿ, ಹೆಮ್ಮರವಾಗಿ ಬೆಳೆಯುವ ಮೂಲಕ ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸುವುದರೊಂದಿಗೆ ಅವರ ಬಾಳಿಗೆ ನೆರಳಾಗಿದೆ.
ದಿ ನ್ಯೂ ಇಂಗ್ಲಿಷ್ ಸ್ಕೂಲ್ ಭಟ್ಕಳ (ಸ್ಥಾಪನೆ 1935)
ತಾಲೂಕಿನ ಅತ್ಯಂತ ಹಳೆಯ ಉತ್ತಮ ಮಾದರಿ ಪ್ರೌಢಶಾಲೆಯಾಗಿದ್ದು, ನುರಿತ ಅನುಭವಿ ಶಿಕ್ಷಕರನ್ನು ಹೊಂದಿದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದವರು ದೇಶ ವಿದೇಶಗಳಲ್ಲಿ ಪ್ರತಿಷ್ಠಿತ ಹುದ್ದೆ ಗಳಿಸಿರುವುದು ಹೆಮ್ಮೆಯ ಸಂಗತಿ.
ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಭಟ್ಕಳ (ಸ್ಥಾಪನೆ 1990):
ತಾಲೂಕಿನ ಉತ್ತಮ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆಯಾಗಿದ್ದು, ಪಾಲಕಸ್ನೇಹಿ ಹಾಗೂ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿದೆ.
ಶ್ರೀ ಗುರು ವಿದ್ಯಾರಾಜ ದಿ ನ್ಯೂ ಇಂಗ್ಲಿಷ್ ಪದವಿ ಪೂರ್ವ ಕಾಲೇಜು, ಭಟ್ಕಳ (ಸ್ಥಾಪನೆ 1995):
25 ವರ್ಷಗಳಿಂದ ಗುಣಮಟ್ಟದ ಪದವಿ ಪೂರ್ವ ಶಿಕ್ಷಣ ನೀಡುತ್ತಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳನ್ನು ಹೊಂದಿದ್ದು, ಸಿಇಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೋಗ್ಯ ತರಬೇತಿ ನೀಡುತ್ತ ತನ್ನ ಛಾಪು ಮೂಡಿಸಿದೆ.
ವಿದ್ಯಾಂಜಲಿ ಪಬ್ಲಿಕ್ ಶಾಲೆ, ಭಟ್ಕಳ (ಸ್ಥಾಪನೆ 2008)
ಉತ್ತರ ಕನ್ನಡ ಜಿಲ್ಲೆಯ ಮೊಟ್ಟ ಮೊದಲ ಐಸಿಎಸ್‌ಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯೆಂಬ ಕೀರ್ತಿ ಹೊಂದಿದ್ದು, ಜನಸಾಮಾನ್ಯರಿಗೆ ಕೈಗೆಟಕುವ ಹಾಗೂ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿದೆ. ಹತ್ತನೇ ತರಗತಿಯಲ್ಲಿ ಪ್ರತಿವರ್ಷ ಶೇ.100 ಫಲಿತಾಂಶ ಪಡೆದಿದ್ದು, ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು, ಭಟ್ಕಳ (ಸ್ಥಾಪನೆ 1997)
ಭಟ್ಕಳ ತಾಲೂಕಿನ ಹಳೆಯ ಪದವಿ ಕಾಲೇಜುಗಳಲ್ಲಿ ಒಂದಾಗಿದ್ದು, ಬಿ.ಕಾಂ ಕೋರ್ಸ್‌ಗಳನ್ನು ಹೊಂದಿದ್ದು, ಪ್ರತಿವರ್ಷ ನೂರಾರು ಉದ್ಯೋಗಾರ್ಹ ಪದವೀಧರರನ್ನು ರೂಪಿಸುತ್ತಿದೆ. ಶಿಕ್ಷಣದ ಜತೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿದೆ.
ಅಂತೆಯೇ ಹೊಸ ವಿಷಯ ಸಂಯೋಜನೆಯೊಂದಿಗೆ ಸ್ಥಳೀಯ ವಿದ್ಯಾರ್ಥಿಗಳ ಅಪೇಕ್ಷೆಯ ಮೇರೆಗೆ ಬಿಎ ಪುನರಾರಂಭಗೊಂಡಿದ್ದು, ಪತ್ರಿಕೋದ್ಯಮ, ಸಂವಹನ ಕೌಶಲ್ಯ ಹಾಗೂ ಇನ್ನಿತರೆ ವಿಷಯಗಳನ್ನು ಒಳಗೊಂಡಿದೆ. ಉದ್ಯೋಗಾರ್ಹ ಸೌಲಭ್ಯಗಳೊಂದಿಗೆ ಹೊಸ ಅವಕಾಶವು ಬಿಎ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ.
ಶ್ರೀ ಗುರು ಸುಧೀಂದ್ರ ಬಿಸಿಎ ಪದವಿ ಕಾಲೇಜು, ಭಟ್ಕಳ (ಸ್ಥಾಪನೆ 2001):
ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅತ್ಯಂತ ಅವಶ್ಯವಿರುವ ನಿಪುಣ ತಂತ್ರಜ್ಞಾನ ಪದವೀಧರರನ್ನು ಈ ಕಾಲೇಜು ರೂಪಿಸುತ್ತಿದೆ. ಕ್ಯಾಂಪಸ್ ಸಂದರ್ಶನಕ್ಕೆ ಈ ಸಂಸ್ಥೆ ಹೆಸರುವಾಸಿಯಾಗಿದ್ದು, ಈಗಾಗಲೇ ವಿಪ್ರೋ, ಟಿಸಿಎಸ್ ನಂತಹ ಬಹು ರಾಷ್ಟ್ರೀಯ ಕಂಪೆನಿಗಳಿಗೆ ರಾಜ್ಯದ ಹಲವಾರು ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಆಯ್ಕೆಯಾಗಿರುತ್ತಾರೆ.
ಶ್ರೀ ಗುರು ಸುಧೀಂದ್ರ ಬಿಬಿಎ ಪದವಿ ಕಾಲೇಜು, ಭಟ್ಕಳ (ಸ್ಥಾಪನೆ 2009):
ವ್ಯವಹಾರ ನಿರ್ವಹಣಾ ವಿಷಯದಲ್ಲಿ ಪದವಿಯನ್ನು ಕಳೆದ 9 ವರ್ಷಗಳಿಂದ ಈ ಕಾಲೇಜು ನೀಡುತ್ತಿದೆ. ಹಲವಾರು ಯಶಸ್ವಿ ಉದ್ಯಮಿಗಳನ್ನು ಈ ಸಮಾಜಕ್ಕೆ ನೀಡಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ. ಈ ಮುಖೇನ ಸ್ಥಳೀಯವಾಗಿ ಹಲವಾರು ಉದ್ಯೋಗಾವಕಾಶ ಒದಗಿಸಿದೆ. ಈಗಾಗಲೇ ಇನ್ಫೋಸಿಸ್, ಅಮೆಜಾನ್, ಬಿಸ್ಲೆರಿನಂತಹ ಬಹು ರಾಷ್ಟ್ರೀಯ ಕಂಪೆನಿಗಳಿಗೆ ಈ ಸಂಸ್ಥೆಯಿಂದಲೇ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಶ್ರೀ ಜ್ಞಾನೇಶ್ವರಿ ಬಿ.ಎಡ್ ಕಾಲೇಜು,ಭಟ್ಕಳ (ಸ್ಥಾಪನೆ 2005)
ಕಳೆದ ಹದಿನೈದು ವರ್ಷಗಳಿಂದ ಉತ್ತಮ ಸಮಾಜಮುಖಿ ಶಿಕ್ಷಕರನ್ನು ರೂಪಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ಪ್ರಶಿಕ್ಷಣಾರ್ಥಿಗಳು ರಾಜ್ಯಾದ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರೋಟರಿ ತರಬೇತಿ ಕೇಂದ್ರ, ವೊಕೇಶನಲ್ ಟ್ರೇನಿಂಗ್ ಸೆಂಟರ್(ಸ್ಥಾಪನೆ 2018):
ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗದ ಧ್ಯೇಯದೊಂದಿಗೆ, ವಿಶೇಷವಾಗಿ ಸ್ವ-ಉದ್ಯೋಗ ಹಾಗೂ ಮಹಿಳೆಯರ ಉದ್ಯೋಗಕ್ಕೆ ಆದ್ಯತೆ ನೀಡಿ ಈ ಭಾಗದಲ್ಲಿ ಹಲವಾರು ಉದ್ಯೋಗದಾತರನ್ನು ಸೃಷ್ಟಿಸುತ್ತಿದೆ. ಮಹಿಳೆಯರಿಗೆ ಹೊಲಿಗೆ ತರಬೇತಿ, ಆಭರಣ ತಯಾರಿಕೆ, ಕಂಪ್ಯೂಟರ್ ಶಿಕ್ಷಣ ಮುಂತಾದ ಅತ್ಯುಪಯುಕ್ತ ಮುಂತಾದ ಕೌಶಲ್ಯಾಧಾರಿತ ತರಬೇತಿ ನೀಡುವ ಮೂಲಕ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದು, ಭವ್ಯ ಭಾರತದ ಕನಸು ಸಾಕಾರಗೊಳ್ಳಲು ನೆರವಾಗುತ್ತಿದೆ ನಾಡಿನ ಹೆಮ್ಮೆಯ ಭಟ್ಕಳ ಎಜ್ಯುಕೇಶನ್ ಟ್ರಸ್ಟ್.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ವೈಶಿಷ್ಟ್ಯ: ಜಗತ್ತಿನ 500 ಪ್ರಮುಖ (ಪೋರ್ಚುನ್ 500) ಕಂಪನಿಗಳು ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಕಾಲೇಜುಗಳಿಗೆ ಪ್ರತಿವರ್ಷ ಕ್ಯಾಂಪಸ್ ಸಂದರ್ಶನ ನಡೆಸುತ್ತಿವೆ. ಈ ಮೂಲಕ ಭಟ್ಕಳ ಮಾತ್ರವಲ್ಲ ಉತ್ತರ ಕನ್ನಡದ ಹೆಚ್ಚಿನ ವಿದ್ಯಾರ್ಥಿಗಳು ಶ್ರೀ ಗುರು ಸುಧಿಧೀಂದ್ರ ಕಾಲೇಜ್’ನ ಪೋಷಕ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಭಾಗವಹಿಸಿ ಉದ್ಯೋಗ ಪಡೆದು ದೇಶ-ವಿದೇಶಗಳಲ್ಲಿ ನಿಯೋಜನೆಗೊಂಡಿರುವುದು ಸಂಸ್ಥೆಯ ವಿಶೇಷ.
ಪೋರ್ಚುನ್ 500 ಕಂಪನಿಗಳಲ್ಲಿ ಒಂದಾದ ಫಿಡಿಲಿಟಿ ಕಂಪನಿಯೊಂದಿಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ತರಬೇತಿ-ಉದ್ಯೋಗ(ಟ್ರೇನ್ ಹೈಯರ್) ಯೋಜನೆಗೆ ಒಡಂಬಡಿಕೆ ಮಾಡಿಕೊಂಡಿದೆ. ಶ್ರೀ ಗುರು ಸುಧಿಧೀಂದ್ರ ಕಾಲೇಜ್‌ನ ಬಿಸಿಎ, ಬಿಬಿಎ, ಬಿಕಾಂ, ಬಿಎ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದು, ಅವಕಾಶದ ಮಹಾಪೂರವೇ ಹರಿದು ಬಂದಂತಾಗಿದೆ.
ಕಾಲೇಜಿಗೆ ಕೀರ್ತಿ ತಂದವರು: ಗುಣಮಟ್ಟಕ್ಕೆ ಅಳತೆ ಗೋಲಾದ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿ ಶ್ರೀ ಗುರು ಸುಧಿಧೀಂದ್ರ ಬಿಸಿಎ ಮತ್ತು ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ರ್‍ಯಾಂಕ್ ಪಡೆದು ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ಗೆ ಹಾಗೂ ಈ ಭಾಗಕ್ಕೆ ಕೀರ್ತಿಯ ಕಳಶಪ್ರಾಯವಾಗಿದ್ದಾರೆ. ಬಿಬಿಎ ನಲ್ಲಿ ಪೂಜಾ ಆಚಾರ್ಯ ಹಾಗೂ ಅಭಿಷೇಕ ಮಹಾಲೆ ಎಂಟನೇ ರ್‍ಯಾಂಕ್ ಪಡೆದಿದ್ದಾರೆ. ನಾಗಚಂಪಾ ಜೈನ್, ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ. ಬಿಸಿಎನಲ್ಲಿ ಫಿರದೋಸ್ ಫರಿಯಾಲ್ ವಿಶ್ವವಿದ್ಯಾಲಯಕ್ಕೆ ದ್ವಿತೀಯ, ಶೃತಿ ಭಟ್ಟ ತೃತೀಯ ಕಳೆದ ಬಾರಿ ಮಹೇಶ ಗೌಡ ದ್ವಿತೀಯ ಹಾಗೂ ಸಂಕೇತ ಭಟ್ಟ ತೃತೀಯ ರ್‍ಯಾಂಕ್ ಪಡೆದಿದ್ದಾರೆ. ಈ ವರ್ಷ ಮಹಾಮಾಯಿ ಭಟ್ಟ ದ್ವಿತೀಯ, ಪ್ರಮೋದ ನಾಯ್ಕ ತೃತೀಯ ರ್‍ಯಾಂಕ್ ಪಡೆದಿದ್ದಾರೆ.
ಕ್ರೀಡೆಗೆ ಪ್ರೋತ್ಸಾಹ: ಅಂತೆಯೇ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪ್ರತಿ ವರ್ಷ ಹಲವು ವಿದ್ಯಾರ್ಥಿಗಳು ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಡಿಜಿಟಲ್ ಶಿಕ್ಷಣದ ಉಪಕ್ರಮಗಳು
ಪ್ರತಿ ತರಗತಿಗಳ ಡಿಜಿಟಲೀಕರಣ, ಆನ್‌ಲೈನ್- ಆಫ್‌ಲೆ„ನ್ ತರಗತಿಗಳು, ಕಡಿಮೆ ಇಂಟರ್‌ನೆಟ್ ವೇಗದಲ್ಲಿ ಮಾಹಿತಿ ವಿನಿಮಯಕ್ಕಾಗಿ ಬ್ಲಾಗ್, ಯುಟ್ಯೂಬ್ ಕ್ಲಾಸ್, ಗೂಗಲ್ ಕ್ಲಾಸ್ ರೂಂ, ಆಡಿಯೋ ಕ್ಲಾಸ್ ಮುಂತಾದ ನೂತನ ಸೌಲಭ್ಯ ನೀಡುತ್ತಿದೆ. ನೆಟವರ್ಕ್ ವಿಲ್ಲದ ಭಟ್ಕಳದ ಸುತ್ತಮುತ್ತಲಿನ ಹಳ್ಳಿಗಳ ಕೇಂದ್ರ ಸ್ಥಾನದಲ್ಲಿ ಗ್ರಾಮೀಣ ಶಿಕ್ಷಣ ಮೂಲಕ ಡಿಜಿಟಲ್ ಶಿಕ್ಷಣದ ವ್ಯವಸ್ಥೆ, ಆನ್‌ಲೈನ್ ತರಬೇತಿ, ಲೈವ್ ವೆಬಿನಾರ್ ಕಾರ್ಯಕ್ರಮಗಳ ಮೂಲಕ ಬದಲಾಗುತ್ತಿರುವ ಸನ್ನಿವೇಶ ಹಾಗೂ ಮುಂದುವರಿದ ತಂತ್ರಜ್ಞಾನಕ್ಕೆ ಅನುಗುಣವಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿರುವುದು ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಹೆಗ್ಗಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.