Bhatkal: ಪಿಎಲ್ ಡಿ ಬ್ಯಾಂಕ್ ; ಸುನಿಲ್ ನಾಯ್ಕ್ ಅವರ ತಂಡ ಆಯ್ಕೆ
Team Udayavani, Aug 27, 2023, 9:34 PM IST
ಭಟ್ಕಳ: ನಗರದ ಪ್ರತಿಷ್ಟಿತ ಭಟ್ಕಳ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿ.ಎಲ್.ಡಿ.) ಬ್ಯಾಂಕಿನ ಚುನಾವಣೆಯಲ್ಲಿ ಬಹುತೇಕ ಈ ಹಿಂದಿನ ನಿರ್ದೇಶಕರೇ ಆಯ್ಕೆಯಾಗುವ ಮೂಲಕ ನಿಕಟಪೂರ್ವ ಅಧ್ಯಕ್ಷ ಸುನಿಲ್ ನಾಯ್ಕ ಅವರ ತಂಡ ಆಯ್ಕೆಯಾದಂತಾಗಿದೆ.
ಚುನಾವಣೇ ಘೋಷಣೆಯಾದಾಗಿನಿಂದ ಭಾರೀ ಕುತೂಹಲ ಮೂಡಿಸಿದ್ದ ಚುನಾವಣೆಯಾದ್ದರಿಂದ ಮತ ಎಣಿಕೆಯ ಅಂತಿಮ ಹಂತದ ತನಕವೂ ಕೂಡ ಭಾರೀ ಕುತೂಹಲ ಮೂಡಿತ್ತು. ಮಾಜಿ ಶಾಸಕ ಹಾಗೂ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸುನೀಲ ನಾಯ್ಕ ತಂಡ ಬೆಂಬಲಿತ ೧೫ ಸ್ಥಾನಗಳನ್ನೂ ಕೂಡಾ ಪಡೆಯುವ ಮೂಲಕ ಮತ್ತೆ ಅದೇ ಆಡಳಿತ ಮಂಡಳಿ ಮೇಲಿಗೈ ಸಾಧಿಸಿದಂತಾಗಿದೆ.
ಅ.13 ರಂದು ಬ್ಯಾಂಕಿನ15 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತಾದರೂ ಕೂಡಾ ಚುನಾವಣಾ ಮತ ಎಣಿಕೆಗೆ ಧಾರವಾಢದ ಉಚ್ಚ ನ್ಯಾಯಾಲಯ ಅನುಮತಿಯನ್ನ ನೀಡಿಲ್ಲವಾಗಿತ್ತು. ಮತ ಎಣಿಕೆ ನ್ಯಾಯಾಲಯ ಅನುಮತಿ ನಂತರ ಅ.27 ರಂದು ಭಾನುವಾರ ನಿಗದಿಯಾಗಿತ್ತು. ನಗರದ ನ್ಯೂ ಇಂಗ್ಲೀಷ ಶಾಲೆಯಲ್ಲಿ ಮುಂಜಾನೆ 8 ಘಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಸಂಜೆ7 ಘಂಟೆಗೆ ಮುಕ್ತಾಯವಾಯಿತು.
ಚುನಾವಣೆಯಲ್ಲಿ ಸಾಲಗಾರ ಅ ವರ್ಗ ಕ್ಷೇತ್ರದಿಂದ ಮಾಜಿ ಶಾಸಕ ಸುನೀಲ ನಾಯ್ಕ 2927 ಮತ, ಸಾಲಗಾರ ಬ ಕ್ಣೇತ್ರದಿಂದ ಎಂ.ಪಿ. ಶೈಲೆಂದ್ರ ಕುಮಾರ 2469 ಮತ, ಸಾಲಗಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತದಿಂದ ಮಂಜು ಮಂಜು ಮೊಗೇರ 2313 ಮತ, ಸಾಲಗಾರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ನಾಗಪ್ಪ ಕುಪ್ಪಯ್ಯ ಗೊಂಡ 2168 ಮತ, ಸಾಲಗಾರ ಮಹಿಳಾ ಮೀಸಲು ಕ್ಷೇತ್ರದಿಂದ ಗಾಯತ್ರಿ ವಿಜಯಕುಮಾರ ನಾಯ್ಕ 2231 ಮತ, ಪೂರ್ಣಿಮಾ ಕೃಷ್ಣ ನಾಯ್ಕ2090 ಮತ, ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಈರ ತಿಮ್ಮಯ್ಯ ನಾಯ್ಕ
2502 ಮತ, ಹನುಮಂತ ನಾರಾಯಾಣ ನಾಯ್ಕ 2381 ಮತ, ಸುರೇಶ ಜಟ್ಟಯ್ಯ ನಾಯ್ಕ2356 ಮತ, ಮಂಜುನಾಥ ಶನಿಯಾರ ನಾಯ್ಕ 2349 ಮತ, ನವನೀತ ಗಣೇಶ ನಾಯ್ಕ 2335 ಮತ, ಸಂತೋಷ ಮಾದೇವ ನಾಯ್ಕ2249 ಮತ, ದೇವಿದಾಸ ನಾಗಪ್ಪ ನಾಯ್ಕ 2080 ಮತ, ಮಂಜಪ್ಪ ಮಾದೇವ ನಾಯ್ಕ 1795 ಮತಗಳನ್ನು ಪಡೆದರು. ಸಾಲಗಾರರಲ್ಲದ ಕ್ಷೇತ್ರದಿಂದ ಈಶ್ವರ ಮಂಜುನಾಥ ನಾಯ್ಕ 350 ಮತ ಪಡೆದು ವಿಜಯಶಾಲಿಯಾದರು. ಮತ ಎಣಿಕೆ ವೇಳೆ ಅಹಿತರಕರ ಘಟನೆ ನಡೆಯದಂತೆ ಪೊಲೀಸ್ ಬಂದೊಬಸ್ತ ಎರ್ಪಡಿಸಲಾಗಿತ್ತು. ಸಹಕಾರ ಇಲಾಖೆಯ ಭಾಸ್ಕರ ನಾಯ್ಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.