![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 1, 2023, 7:57 PM IST
ಭಟ್ಕಳ: ಕಳೆದ ಮೂರು ದಿನಗಳ ಹಿಂದೆ ಗೋಕಳ್ಳರನ್ನು ಹಿಂಬಾಲಿಸಿಕೊಂಡು ಹೋದ ತಾಲೂಕಿನ ಮೂವರು ಯುವಕರ ಮೇಲೆ ಗುಂಪು ಹಲ್ಲೆ ನಡೆಸಲಾಗಿದ್ದು ದೂರು ದಾಖಲಿಸಲಾಗಿದ್ದರೂ ಸಹ ಬಂಧನ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಡಿ.ವೈ.ಎಸ್.ಪಿ. ಅವರನ್ನು ಭೇಟಿಯಾಗಿ ಆರೋಪಿತರನ್ನು ಬಂಧಿಸುವಂತೆ ನಗರ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಬಿ.ಜೆ.ಪಿ. ಮುಖಂಡ ಗೋವಿಂದ ನಾಯ್ಕ ಮಾತನಾಡಿ ಗುರುವಾರ ರಾತ್ರಿ ಗೋ ಸಾಗಾಟ ಮಾಡುತ್ತಿರುವ ಪಿಕ್‌ಅಪ್ ವಾಹನ ಬೆನ್ನಟ್ಟಿ ಹೋದ ಯುವಕರಿಗೆ 50-60 ಜನರು ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದ್ದರೂ ಕೂಡಾ ಇನ್ನೂ ತನಕ ಆರೋಪಿಗಳನ್ನು ಬಂದಿಸುವಲ್ಲಿ ಇಲಾಖೆ ಮನಸ್ಸು ಮಾಡಿಲ್ಲ. ತಕ್ಷಣ ಅವರನ್ನು ಬಂಧುಸುವದಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಪ್ರವೀಣ ಶೆಟ್ಟಿ ಮಾತನಾಡಿ ಗುರುವಾರ ತಡರಾತ್ರಿ ನಾವು ಕಾರಿನಲ್ಲಿ ಹೋಗುತ್ತಿರುವಾಗ ಮಹೇಂದ್ರ ಪಿಕ್‌ಅಪ್ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದೆವು.
ಕುಂಟವಾಣಿ ಚೆಕ್ ಪೋಸ್ಟ್ ಬಳಿಯಲ್ಲಿ ಪೊಲಿಸರಿಗೆ ವಿಷಯ ತಿಳಿಸಿದ್ದು, ನಂತರ ನಗರದಲ್ಲಿ ಪುರಸಭೆಯ ಹತ್ತಿರ ಇರುವ ಗಸ್ತು ಪೊಲೀಸರಿಗೂ ಕೂಡಾ ವಿಷಯ ತಿಳಿಸಿದ್ದೆವು. ಆದರೆ ವಾಹನವನ್ನು ಬೆನ್ನಟ್ಟಿ ಹೋದ ನಮಗೆ ಮಾರುಕಟ್ಟೆಯ ಒಳಗೆ ಹೋಗುತ್ತಿದ್ದಂತೆಯೇ 50-60 ಜನರ ಗುಂಪು ಕೈಯಿಂದ, ದೊಣ್ಣೆಯಿಂದ ಹಲ್ಲೆ ನಡೆಸಿತು ಎಂದು ಹೇಳಿದರು.
ಹಿಂದೂ ಸಂಘಟನೆ ಕಾರ್ಯಕರ್ತ ವಿಶ್ವನಾಥ ಮಾತನಾಡಿ ಮೂವರ ಮೇಲೆ ನಡೆದ ಹಲ್ಲೆಯಿಂದ ಗಾಯಗೊಂಡ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರೂ ಆರೋಪಿಗಳ ಬಂಧನಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮಾತನಾಡಿ ಗೋಸಾಗಾಟ ಮಾಡುತ್ತಿರುವ ಪಿಕ್‌ಅಪ್ ವಾಹನವನ್ನು ಹಿಂಬಾಲಿಸಿಕೊಂಡು ಬಂದು ನಗರದ ಖಲೀಫಾ ಸ್ಟ್ರೀಟ್ ಗೆ ಹೋದಾಗ ಗುಂಪು ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದವರು ಯಾರು ಎಂದು ತಿಳಿದೂ ಅವರ ಬಂಧನ ಮಾಡುತ್ತಿಲ್ಲ. ಶೀಘ್ರ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ಸಪೆಕ್ಟರ್ ಗೋಪಿಕೃಷ್ಣ, ಡಿ.ವೈ.ಎಸ್.ಪಿ. ಶ್ರೀಕಾಂತ ನಾಯ್ಕ ಅವರು ತಮ್ಮನ್ನು ಭೇಟಿಯಾದ ತಂಡಕ್ಕೆ ಆರೋಪಿತರನ್ನು ಬಂಧಿಸುವ ಬರವಸೆ ನೀಡಿದ ನಂತರ ಪ್ರತಿಭಟನಾಕಾರರು ವಾಪಾಸಾಗಿದ್ದು ಮೂರು ದಿನಗಳ ಒಳಗಾಗಿ ಆರೋಪಿಗಳ ಬಂಧನವಾಗದೇ ಇದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: World Cup Qualifiers: ವೆಸ್ಟ್ ಇಂಡೀಸ್ ಗೆ ಸೋಲಿನ ಬರೆ ಹಾಕಿದ ಸ್ಕಾಟ್ಲೆಂಡ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.