ಭಟ್ಕಳ: ನೂರಾರು ವರ್ಷಗಳ ನಂತರ ವೈಭವ ಮರಳಿ ಪಡೆದ ರಾಜಾಂಗಣ ನಾಗಬನ


Team Udayavani, Feb 12, 2023, 10:51 PM IST

1-sadad

ಭಟ್ಕಳ: ಅತ್ಯಂತ ಪುರಾತನವಾದ, ರಾಜರ ಕಾಲದಲ್ಲಿ ಪ್ರತಿಷ್ಟಾಪಿಸಿ ಪೂಜಿಸಿಕೊಂಡು ಬಂದಿದ್ದ ಕಾರಣೀಕ ದೈವ ಸ್ಥಳವಾದ ರಾಜಾಂಗಣ ನಾಗಬನ ನೂರಾರು ವರ್ಷಗಳ ನಂತರ ತನ್ನ ವೈಭವವನ್ನು ಮರಳಿ ಪಡೆದಿದ್ದಲ್ಲದೇ ಸುಂದರ ನಾಗ, ಯಕ್ಷಿ ಹಾಗೂ ಇತರ ದೇವತೆಗಳ ವಿಗೃಹಗಳನ್ನು ಹೊಂದಿ ಶಾಸ್ತ್ರೋಕ್ತವಾದ ಸುಂದರ ನಾಗ ಬನ ನಿರ್ಮಾಣಗೊಂಡಿದೆ.

ನಗರ ಮಧ್ಯದಲ್ಲಿರುವ ನಾಗ, ಯಕ್ಷಿ ದೇವರ ಸ್ಥಾನಕ್ಕೆ ಹಿಂದೆ ಗುಡಿಯಿಲ್ಲದೇ, ಗಡಿಯೂ ಇಲ್ಲದೇ ಇರುವುದರಿಂದ ಹಲವಾರು ಬಾರಿ ಅಹಿತಕರ ಘಟನೆಗಳು ನಡೆದಿದ್ದು ಇಂದು ಎಲ್ಲವಕ್ಕೂ ತೆರೆ ಎಳೆದು ಶಾಸಕ ಸುನಿಲ್ ನಾಯ್ಕ ನೇತೃತ್ವದಲ್ಲಿ ಮಾಡಿದ್ದ ನೂತನ ಗುಡಿ ಕಟ್ಟುವ ಸಂಕಲ್ಪ ಹಲವಾರು ಅಡೆ-ತಡೆಗಳ ನಡುವೆ ನೆರವೇರಿದ್ದು ಒಂದು ಐತಿಹಾಸಿಕ ಕ್ಷಣ ಎಂದರೆ ತಪ್ಪಾಗಲಾರದು. ಇದೇ ಮೊದಲ ಬಾರಿಗೆ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಮುಖ್ಯ ರಸ್ತೆಯನ್ನು ಬಳಸಿಕೊಂಡಿದ್ದರೆ ಅದು ರಾಜಾಂಗಣ ನಾಗಬನದ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಮಾತ್ರ ಎನ್ನುವುದು ಭಟ್ಕಳದ ಇತಿಹಾಸದಲ್ಲಿ ದಾಖಲಾಯಿತು.

ಭಟ್ಕಳ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ರಾಜ ಮಹಾರಾಜರ ವೈಭವದ ಆ ದಿನಗಳು. ಸುಮಾರು ಆರನೇಯ ಶತಮಾನದಿಂದ ಭಟ್ಕಳ ತನ್ನ ಇತಿಹಾಸವನ್ನು ಸ್ಥಾಪಿಸಿ, ಹತ್ತನೇಯ ಶತಮಾನದಲ್ಲಿ ಸುವರ್ಣಯುಗ ಸ್ಥಾಪಿಸಿತು. ಭಟ್ಕಳ ನಗರವನ್ನು ಚೋಳರು, ಚಾಲುಕ್ಯರು, ಕದಂಬರು ಮತ್ತು ಹೊಯ್ಸಳರು ಆಳಿದರೆಂದು ನಾವು ಹಲವಾರು ಜೀರ್ಣಾವಸ್ಥೆಯಲ್ಲಿನ ಶಾಸನಗಳಿಂದ ತಿಳಿಯಬಹುದು. ಇಲ್ಲಿಗೆ ಕೇವಲ ೧೫ ಕಿ,ಮೀ. ದೂರದ ಹಾಡುವಳ್ಳಿಯಲ್ಲಿ ಇಂದಿಗೂ 18ಕ್ಕೂ ಹೆಚ್ಚು ಜೀರ್ಣಾವಸ್ಥೆಯಲ್ಲಿರುವ ಜೈನ ಬಸದಿಗಳು ಕಾಣ ಸಿಗುತ್ತವೆ. ಭಟ್ಕಳ ಪಟ್ಟಣದಲ್ಲಿ ಕೂಡಾ ಅನೇಕ ಜೈನ ಬಸದಿಗಳಿದ್ದವು ಅವುಗಳಲ್ಲಿ ಇಂದು ಕೇವಲ ಒಂದೆರಡು ಮಾತ್ರ ಸ್ಮಾರಕಗಳಾಗಿ ಅಜೀರ್ಣ ಸ್ಥಿತಿಯಲ್ಲಿ ನಿಂತಿವೆ ಅವುಗಳಲ್ಲಿ ಜಟ್ಟಪ್ಪ ನಾಯಕ ಕಟ್ಟಿಸಿದ ಬಸದಿಯೂ ಕೂಡಾ ಒಂದು.

ರಾಣಿ ಚೆನ್ನಭೈರಾದೇವಿಯು ತನ್ನ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಿ ಉಂಬಳಿ ಬಿಟ್ಟ ಅದೆಷ್ಟೋ ದೇವಾಲಯಗಳು, ಜೈನ ಬಸದಿಗಳಲ್ಲಿ ಕೆಲವು ಜೈನ ಬಸದಿಗಳು, ದೇವಾಲಗಳು ಸ್ಮಾರಕಗಳಾಗಿ ಉಳಿದಿವೆ. ಒಂದು ಕಾಲದಲ್ಲಿ ವಿಜೃಂಬಣೆಯಿಂದ ಪೂಜೆ, ಪುನಸ್ಕಾರ, ರಥೋತ್ಸವಗಳನ್ನು ಕಂಡ ವೈಭವದ ದೇವಾಲಯಗಳು ಇಂದು ಪೂಜೆಗೂ ಕಷ್ಟ ಎನ್ನುವ ಸ್ಥಿತಿಯಲ್ಲಿ ಇರುವುದು ಮಾತ್ರ ಬೇಸರದ ಸಂಗತಿ.

ಜೈನರ ಆಳ್ವಿಕೆಯಲ್ಲಿ ತಾಲೂಕಿನಲ್ಲಿ ಜೈನ ನಾಗ, ಯಕ್ಷಿ, ಮಾಸ್ತಿ ಹೀಗೆ ಸಾವಿರಾರು ಸ್ಥಳಗಳು ಇದ್ದವು ಎನ್ನುವುದಕ್ಕೆ ಅಲ್ಲಲ್ಲಿ ಇರುವ ಕುರುಹುಗಳು ಸಾಕ್ಷಿ ಹೇಳುತ್ತಿದೆ. ಯಾವುದೇ ಒಂದು ಪ್ರದೇಶದ ದೇವಾಲಯ, ದೈವ ಸ್ಥಳ ಅಜೀರ್ಣಗೊಂಡರೆ ಇಡೀ ಪ್ರದೇಶದ ಜನತೆಗೆ ಅದರಿಂದ ತೊಂದರೆ ಎನ್ನುವುದು ನಮ್ಮ ಧರ್ಮಗ್ರಂಥಗಳು ಸಾರಿ ಹೇಳುತ್ತವೆ. ಅದುವೇ ನಾವು ಭಟ್ಕಳದಲ್ಲಿ ಕೂಡಾ ಕಾಣಬಹುದು. ಭಟ್ಕಳ ನಗರದಲ್ಲಿ ಅನೇಕ ಕಡೆಗಳಲ್ಲಿ ಇನ್ನೂ ಉದ್ಧಾರವಾಗದ ಮನೆಗಳಿವೆ. ಎಲ್ಲಾ ಇದ್ದರೂ ಸಹ ಮಾನಸಿಕ ನೆಮ್ಮದಿಯಿಲ್ಲದ ಅದೆಷ್ಟೋ ಮನಸುಗಳೂ ಇಂದಿಗೂ ಕಾಣ ಸಿಗುತ್ತವೆ. ಆದರೆ ಅವುಗಳೆಲ್ಲವೂ ಅನ್ಯರ ಪ್ರದೇಶಗಳಾಗಿದ್ದರಿಂದ ಇಲ್ಲಿ ಸಮಸ್ಯೆಯ ಮೂಲವೇ ತಿಳಿಯದೇ ಸಂಕಟ ಪಡುತ್ತಿರುವುದು ತಾಜಾ ಉದಾಹರಣೆ ಕೂಡಾ ಇದೆ.

ಅಂತಹ ಜೈನ ಸ್ಥಳಗಳಲ್ಲಿ ರಾಜಾಂಗಣ ನಾಗಬನ ಕೂಡಾ ಒಂದು. ಇಲ್ಲಿ ಹೆಸರೇ ಹೇಳುವಂತೆ ರಾಜರು ತಮ್ಮ ಅಂಗಣದಲ್ಲಿ ಪ್ರತಿಷ್ಟಾಪಿಸಿ ಪೂಜಿಸಿಕೊಂಡು ಬಂದ ಜೈನ ನಾಗ, ಯಕ್ಷಿ ಕ್ಷೇತ್ರವಾಗಿದ್ದು ನಂತರದ ದಿನಗಳಲ್ಲಿ ಜೈನರ ಸಂಖ್ಯೆ ಕಡಿಮೆಯಾಗುತ್ತಾ, ಅನ್ಯರ ಧರ್ಮದವರ ಸಂಖ್ಯೆ ಹಚ್ಚುತ್ತಾ ಹೋದಂತೆ ಇಲ್ಲಿ ಸರಿಯಾದ ಅಭಿವೃದ್ಧಿ, ಪೂಜೆ ನಡೆಯದೇ ಅಜೀರ್ಣಗೊಂಡಿತ್ತು. ಇಲ್ಲಿರುವ ಅನೇಕ ನಾಗರ ಕಲ್ಲುಗಳು ಕೂಡಾ ಭಿನ್ನವಾಗಿತ್ತಲ್ಲದೇ, ಕಳೆದ ಕೆಲವು ವರ್ಷಗಳಿಂದ ಇದೊಂದು ವಿವಾದದ ಕೇಂದ್ರವೂ ಕೂಡಾ ಆಗಿತ್ತು ಎನ್ನುವುದಕ್ಕೆ ಅಲ್ಲಿಯೇ ಒಂದು ಪೊಲೀಸ್ ಪಡೆ ನಿಯೋಜನೆ ಮಾಡಿರುವುದೇ ಉದಾಹರಣೆ ಎನ್ನಬಹುದು.

ಈ ಬಗ್ಗೆ ಹಿಂದೂ ಯುವ ಸಂಘಟನೆಗಳು ಧ್ವನಿಯೆತ್ತುತ್ತಲೇ ಬಂದಿದ್ದರು. ಇಲ್ಲಿನ ಜೀರ್ಣೋದ್ಧಾರಕ್ಕೆ ಸರಕಾರ ಹಣ ಬಿಡುಗಡೆಗೊಳಿಸಿದರೂ ಸಹ ಉಪಯೋಗಿಸಲು ಕಾನೂನು ತೊಡಕು ಎದುರಾಗಿದ್ದರಿಂದ ಹಣ ವಾಪಾಸು ಹೋಗಿತ್ತು. ಇದನ್ನೆಲ್ಲ ಅರಿತ ಶಾಸಕ ಸುನಿಲ್ ನಾಯ್ಕ ತಾವು ಸ್ವತಃ ಇದರ ಜೀರ್ಣೋದ್ಧಾರಕ್ಕೆ ಮುಂದಾದರು. ಜೀರ್ಣೋದ್ಧಾರಕ್ಕೆ ಮುಂದಾಗುತ್ತಲೇ ಇಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆಯೊಂದು ಜಾಗದ ಕುರಿತು ಹಾಗೂ ಇದರಿಂದ ಮುಂದೆ ತೊಂದರೆಯಾಗಬಹುದು ಎನ್ನುವ ತಕರಾರು ತೆಗೆಯಿತು. ಈ ಬಗ್ಗೆ ಹಲವಾರು ಸಭೆಗಳೂ ನಡೆದವು, ಇಲಾಖೆಗಳ ಮಧ್ಯ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆದರೂ ಕೂಡಾ ಅಂತಿಮವಾಗಿ ತಮ್ಮ ನಿರ್ಧಾರವನ್ನು ಜಾರಿಗೆ ತಂದ ಸುನಿಲ್ ನಾಯ್ಕ ಸ್ವಂತ ಖರ್ಚಿಯಿಂದ ನಾಗಬನವನ್ನು ಜೀರ್ಣೋದ್ದಾರ ಮಾಡಿ ಅದಕ್ಕೆ ಸೂಕ್ತ ಆಲಯವನ್ನು ಕಟ್ಟಿಸಿ ವಿಜೃಂಬಣೆಯಿಂದ ನಾಲ್ಕು ದಿನಗಳ ಕಾಲ ಪುನರ್ ಪ್ರತಿಷ್ಟೆ, ಅನ್ನ ಸಂತರ್ಪಣೆ ಮಾಡಿ ಇತಿಹಾಸದ ಪುಟ ಸೇರುವಂತೆ ಮಾಡಿರುವುದು ಎಲ್ಲರ ಶ್ಲಾಘನೆಗೆ ಕಾರಣವಾಗಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.