ಗ್ಯಾರಂಟಿ ಜಾರಿ ಮಾಡಿದ್ದರಿಂದ ಬಿಜೆಪಿ – ಜೆಡಿಎಸ್ ಹತಾಶವಾಗಿದೆ: ಸಚಿವ ಮಂಕಾಳು ವೈದ್ಯ
Team Udayavani, Aug 5, 2023, 6:02 PM IST
ಕಾರವಾರ: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುದಕ್ಕೆ ಆಗುವುದಿಲ್ಲವೆಂದು ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು ಹೇಳುತ್ತಿದ್ದರು. ಈಗ ನಾವು ಕೊಟ್ಟ ಮಾತಿನಂತೆ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು ಹತಾಶರಾಗಿದ್ದಾರೆಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಕಾರವಾರದಲ್ಲಿ ಶನಿವಾರ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ಚುನಾವಣೆಯಲ್ಲಿನ ಸೋಲು. ಜೊತೆಗೆ ನಾವು ಗ್ಯಾರಂಟಿ ಮೂಲಕ ಕೋಟಿ ಕೋಟಿ ಜನರನ್ನು ತಲುಪಿದ್ದೇವೆ. ಜನರಿಗೆ ಸರ್ಕಾರದದಿಂದ ಸಣ್ಣ ಸಹಾಯವಾಗುತ್ತಿದೆ. ಇದು ಬಿಜೆಪಿಯವರ ಹೊಟ್ಟೆ ಉರಿಗೆ ಕಾರಣ ಎಂದರು.
ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲಬೇಕು. ಕೆಂದ್ರದಲ್ಲಿ ಅಧಿಕಾರ ಮಾಡಬೇಕು. ರಾಜ್ಯದಿಂದ ಅತೀ ಹೆಚ್ಚು ಸಂಸದರನ್ನು ಗೆಲ್ಲಿಸಬೇಕು ಎಂದರು.
ಇದನ್ನೂ ಓದಿ:CM ಸಿದ್ದರಾಮಯ್ಯ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ
ಅತೀ ಹೆಚ್ಚು ಸಂಸದರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ. ಅಭ್ಯರ್ಥಿಗಳನ್ನು ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರೇ ಇದ್ದರು, ಗೆಲ್ಲಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೆವೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಹೈಕಮಾಂಡ್ ನಮಗೆ ಬಡವರ ಪರವಾಗಿ ಕೆಲಸ ಮಾಡಿ ಎಂದು ಹೇಳಿದೆ, ದುಡ್ಡು ಮಾಡಿ ಎಂದು ಹೇಳಿಲ್ಲ. ನಾವು ಜನರನ್ನು ಲೂಟಿ ಮಾಡುತ್ತಿಲ್ಲ, ಬಡವರ ಪರವಾಗಿ ಕೆಲಸ ಮಾಡುತ್ತಿದ್ದೆವೆ ಎಂದು ಸಚಿವ ವೈದ್ಯ ಹೇಳಿದರು.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮಂಕಾಳ ವೈದ್ಯರು, ಹೈಕಮಾಂಡ್ ನಮಗೆ 250 ಕೋಟಿ ಕೊಡಿ ಎಂದು ಹೇಳಿಲ್ಲ. ನಮಗೆ ದುಡ್ಡು ಮಾಡಿ ಅಂತಾನೂ ಹೇಳಿಲ್ಲ. ನಾವು ಲೂಟಿ ಮಾಡುತ್ತಿಲ್ಲ. ನಾವು ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇದಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಕ್ಷಿ ಎಂದರು.
ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಟೀಕೆಗಳಿಗೆ ಪ್ರತಿಕ್ರಿಯಿಸದೆ ಇರುವುದು ಒಳ್ಳೆಯದು ಎಂದ ಮಂಕಾಳ ವೈದ್ಯ ಹೇಳಿದರು.
ಕುಮಾರಸ್ವಾಮಿ ಪೆನ್‌ಡ್ರೈವ್ ತೋರಸಿ ಒಂದು ತಿಂಗಳು ಆಗುತ್ತಾ ಬಂತು. ಪೆನ್‌ಡ್ರೈವ್ ಹೊರಗ ಬರಲಿಲ್ಲ ಯಾಕೆ. ಅಂತಹದ್ದು ಏನಾದರೂ ಇದ್ದರೆ ಕುಮಾರಣ್ಣ ಹೊರಗೆ ಹಾಕಲಿ. ಕುಮಾರಣ್ಣ ಹೇಳಿದ ಸಚಿವರು ನಮ್ಮ ಸಂಪುಟದಲ್ಲಿ ಇಲ್ಲ, ಇದ್ದಿದ್ದರೆ ಸಂಪುಟದಿಂದ ಹೊರಗೆ ಹೋಗುತ್ತಾರೆ. ಅಂತಹ ಸಚಿವರನ್ನು ನಮ್ಮ ಪಕ್ಷದಲ್ಲೂ ಇಟ್ಟುಕೊಳ್ಳುವುದಿಲ್ಲ. ಮೊದಲು ಪೆನ್ ಡ್ರೈವ್ ಹೊರಗ ಹಾಕಿ ಎಂದು ಸಚಿವ ಮಂಕಾಳ ವೈದ್ಯ ಸವಾಲು ಹಾಕಿದರು.
ಶಾಸಕ ಭೀಮಣ್ಣ, ಶಾಸಕ ಸೈಲ್ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.