BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ಮಂದಿರ ನಿರ್ಮಾಣಕ್ಕೆ ತೆರಿಗೆ ಹಣ ಬಳಸಿಕೊಳ್ಳಲಾಗಿಲ್ಲ.. ನಿಮ್ಮ ಮತದಿಂದ ನಿರ್ಮಾಣ ಸಾಧ್ಯವಾಯಿತು..
Team Udayavani, Apr 28, 2024, 4:14 PM IST
ಶಿರಸಿ: ‘500 ವರ್ಷಗಳ ಕನಸಾದ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಸಿಕ್ಕಿದ ಮರುದಿನವೇ ನಿರ್ಣಯ ಕೈಗೊಳ್ಳಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ನಿರ್ಧಾರ ಕೈಗೊಳ್ಳಲು 56 ಇಂಚಿನ ಎದೆ ಬೇಕಾಗಿತ್ತು’ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು.
ಭಾನುವಾರ ಶಿರಸಿಯಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ‘500 ವರ್ಷಗಳ ಕನಸು ನಿಮ್ಮ ಮತದ ಶಕ್ತಿಯಿಂದ ಸಾಧ್ಯವಾಯಿತು. ರಾಮ ಮಂದಿರ ಪುಣ್ಯ, ಪವಿತ್ರ ಕಾರ್ಯ. ಪುಣ್ಯದ ಹಕ್ಕುದಾರ ಯಾರು? ಮತ ನೀಡಿ ಶಕ್ತಿಯುತ ಸರ್ಕಾರ ನೀಡಿದ ನೀವೇ ಪುಣ್ಯವಂತರು’ಎಂದರು.
ಮಂದಿರ ನಿರ್ಮಾಣವಾಗದಂತೆ ವಿಕೃತ ಮನಸ್ಥಿತಿಯವರೆಲ್ಲ ಒಂದಾಗಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಎಲ್ಲ ಮಿತ್ರ ಪಕ್ಷಗಳು ಮಂದಿರ ನಿರ್ಮಾಣದ ವಿರುದ್ಧ ಕೋರ್ಟ್ ನಲ್ಲೂ ಹೋರಾಟ ನಡೆಸಿದರು. ಎಲ್ಲವನ್ನೂ ಮರೆತು ಆಮಂತ್ರಣ ನೀಡಿದರೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ರಾಮಲಲ್ಲಾನಿಗೆ ಅವಮಾನ ಮಾಡಿದರು. ಅವರನ್ನು ನೀವು ಬಹಿಷ್ಕರಿಸಿ ಎಂದು ಮನವಿ ಮಾಡಿದರು.
‘ರಾಮ ಮಂದಿರದ ವಿರುದ್ಧ ತಲೆಮಾರುಗಳಿಂದ ಹೋರಾಟ ನಡೆಸಿದ್ದ ಅನ್ಸಾರಿ ಕುಟುಂಬಕ್ಕೂ ಆಮಂತ್ರಣ ನೀಡಲಾಗಿತ್ತು.ಮುಸಲ್ಮಾನರಾದರೂ ಅವರು ಕೂಡ ಎಲ್ಲವನ್ನು ಮರೆತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು’ ಎಂದರು.
‘ದೇಶದ ಸುಪ್ರೀಂ ಕೋರ್ಟ್ ನಿರ್ಣಯದ ಬಳಿಕ ದೇಶದ ಕೋಟಿ ಕೋಟಿ ರಾಮ ಭಕ್ತರು ಒಂದಾಗಿ ಭವ್ಯ ಮಂದಿರ ನಿರ್ಮಾಣ ಮಾಡಲಾಗಿದೆ.ಕೆಲವರು ಐದು ರೂಪಾಯಿ, ಕೆಲವರು ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಮಂದಿರ ನಿರ್ಮಾಣಕ್ಕೆ ಸರಕಾರದ ಹಣವಾಗಲಿ, ತೆರಿಗೆ ಹಣವಾಗಲಿ ಬಳಸಲಾಗಿಲ್ಲ’ ಎಂದರು.
‘ನಮ್ಮ ಸರಕಾರ ದೇಶದ್ರೋಹಿ ಕೃತ್ಯ ಮಾಡುತ್ತಿದ್ದ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಿತು. ಕಾಂಗ್ರೆಸ್ ಆ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಗೆ ಮತ ನೀಡಿದರೆ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚುತ್ತದೆ’ ಎಂದು ವಿಪಕ್ಷಗಳ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.
‘ಹಿಂದೆ ನಮ್ಮ ದೇಶಕ್ಕೆ ಉಗ್ರರು ನುಸುಳಿ ಜನರ ಹತ್ಯೆಗೈಯುತ್ತಿದ್ದರು. ನಾವು ಸರ್ಜಿಕಲ್ ಸ್ಟ್ರೈಕ್ ಮಾಡಿಸಿದೆವು. ಈಗ ಕಾಲ ಬದಲಾಗಿದ್ದುದೇಶದೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದರು.
‘ಕಾಂಗ್ರೆಸ್ ಭಾರತದ ಸಂಸ್ಕೃತಿಗೆ ನಷ್ಟ ಉಂಟುಮಾಡಿದೆ . ನಿಜವಾದ ಇತಿಹಾಸವನ್ನು ತಿರುಚಿದೆ. ಛತ್ರಪತಿ ಶಿವಾಜಿ ಮಹಾರಾಜ್, ರಾಣಾ ಪ್ರತಾಪ್ ರಂತಹ ವೀರರ ಕಥೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸದಂತೆ ಷಡ್ಯಂತ್ರ ಕಾಂಗ್ರೆಸ್ ಮಾಡಿತ್ತು’ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಸಿಲಿನಲ್ಲೂ ನಿಂತು ಸಾವಿರಾರು ಮಂದಿ ಭಾಷಣ ಕೇಳುತ್ತಿದ್ದರು. ಅವರ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ‘ನಾನು ನಿಮ್ಮ ಈ ಶ್ರಮವನ್ನೂ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ’ ಎಂದರು.
ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಅವರಿಗೆ ಗ್ರಾಮೀಣ, ಜಾನಪದ ಸಾಂಸ್ಕೃತಿಕ ಕಲೆ ಬೇಡರ ವೇಷದ ಕಿರೀಟ, ಮಲೆನಾಡು-ಉತ್ತರ ಕನ್ನಡದ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿಯಿಂದ ಮಾಡಿದಂತಹ ವಿಶಿಷ್ಟ ಹಾರ, ಗ್ರಾಮದೇವತೆಯಾದ ಶ್ರೀ ಮಾರಿಕಾಂಬಾ ದೇವಿಯ ಪ್ರತಿಮೆ ನೀಡಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.