ಹುತಾತ್ಮರ ದಿನಾಚರಣೆಯಂದೇ ರಕ್ತದಾನ
Team Udayavani, Mar 24, 2021, 3:46 PM IST
ಕಾರವಾರ: ಹುತಾತ್ಮ ದಿನದ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕಾರವಾರ, ನಿಫಾ, ಕ್ರಿಮ್ಸ್ ಕಾರವಾರ, ಪಹರೆ ವೇದಿಕೆ ಹಾಗೂ ಇತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದೇಶಾದ್ಯಂತ ನಡೆದ ರಕ್ತದಾನದ ಕಾರ್ಯಕ್ರಮ ಜಿಲ್ಲಾ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ರೆಡ್‌ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ನಡೆಯಿತು.
ಡಿಸಿ ಮುಲ್ಲೈ ಮುಹಿಲನ್ ಅಧ್ಯಕ್ಷತೆ ವಹಿಸಿ ಇಂದು ರೆಡ್‌ಕ್ರಾಸ್ ಸಂಸ್ಥೆ ಜಗತ್ತಿನಾದ್ಯಾಂತ ಅತ್ಯಂತ ಪ್ರಭಾವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜಗತ್ತಿನಾದ್ಯಂತ ರಕ್ತದ ಅವಶ್ಯಕತೆ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದ್ದುಅದನ್ನು ಪೂರೈಸುವತ್ತ ರೆಡ್‌ಕ್ರಾಸ್ ಪಾತ್ರ ಅತ್ಯಂತ ಮಹತ್ವದ್ದು ಎಂದರು.
ದಾನಿಗಳು ರಕ್ತದಾನ ಮಾಡಲು ಸ್ವಯಂ ಪ್ರೇರಿತವಾಗಿ ಜಾತಿ ಮತಗಳ ಭೇದವೆಣಿಸದೆಮುಂದೆ ಬರಬೇಕು ಎಂದು ಕರೆ ನೀಡಿದರು.ಕ್ರಿಮ್ಸ್ ನಿರ್ದೇಶಕ ಡಾ| ಗಜಾನನನಾಯ್ಕ ರಕ್ತದಾನದ ಮಹತ್ವ ಹಾಗೂ ಇಂದುಹೆಚ್ಚುತ್ತಿರುವ ಜನಸಂಖ್ಯೆಯಿಂದ ರಕ್ತದ ಬೇಡಿಕೆಗಣನೀಯವಾಗಿ ಹೆಚ್ಚುತ್ತಿದ್ದು ಜಗತ್ತಿನಲ್ಲಿಪ್ರಯೋಗಾಲಯಗಳಲ್ಲಿ ಉತ್ಪಾದಿಸಲುಸಾಧ್ಯವಾಗದ ಏಕೈಕ ವಸ್ತು ಎಂದರೆ ರಕ್ತ.ಹೀಗಾಗಿ ರಕ್ತದಾನದ ಅವಶ್ಯಕತೆಯನ್ನುಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ರಕ್ತದಾನದ ಕುರಿತಾಗಿ ಸಾರ್ವಜನಿಕರಲ್ಲಿಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕರೆ ನೀಡಿದರು. ಪಹರೆ ವೇದಿಕೆ ಸಂಚಾಲಕ ನಾಗರಾಜ ನಾಯಕ, ಯುವಕರು ರಕ್ತದಾನದಲ್ಲಿಸಕ್ರಿಯವಾಗಿ ಪಾಲ್ಗೊಳ್ಳುವದರ ಮುಖಾಂತರಸಮಾಜಕ್ಕೆ ನೆರವಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ಸಂಚಾರಿ ಪೊಲೀಸ್, ಡಿಎಆರ್,ಪಹರೆ ವೇದಿಕೆ, ನಾಗಾರ್ಜುನ ಕನ್ಸ್‌ಟ್ರಕ್ಷನ್, ಬ್ಲಿಡ್‌ಡೋನರ್ಸ್ ಗ್ರೂಪ್‌ಕಾರವಾರ, ವೈದ್ಯಕೀಯ ಕಾಲೇಜಿನವಿದ್ಯಾರ್ಥಿಗಳು ಹಾಗೂ ಜನಶಕ್ತಿ ವೇದಿಕೆಇವರು ಸಂಪೂರ್ಣವಾಗಿ ಸಹಕರಿಸಿದರು.ಸಾರ್ವಜನಿಕರು ಹಾಗೂ ಯುವಕರು ರಕ್ತದಾನದಲ್ಲಿ ಉತ್ಸಾಹದಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು. ರಕ್ತದಾನದಲ್ಲಿ ಕೇಂದ್ರದವೈದ್ಯೆ ಡಾ| ಮೇಘಾ ಹಾಗೂ ಸಿಬ್ಬಂದಿ ಸಹಕರಿಸಿದರು. ಅಧ್ಯಕ್ಷ ವಿ.ಎಂ. ಹೆಗಡೆ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಜಗದೀಶ ಬಿರ್ಕೊಡಿಕರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.