ಶಿರಸಿ ವೈದ್ಯೆ ಸುಮನ್ ಹೆಗಡೆಯಿಂದ ಸ್ವಯಂ ರಕ್ತದಾನ ಮಾಡಿ ಜಾಗೃತಿ ಅಭಿಯಾನ
ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ!
Team Udayavani, Apr 24, 2021, 6:49 PM IST
ಶಿರಸಿ: ಕೇಂದ್ರ ಸರಕಾರ ಕೋವಿಡ್ 19ರ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ನಿರೋಧಕ ಲಸಿಕೆ ಪಡೆದುಕೊಳ್ಳಲು ಮುಕ್ತ ಅವಕಾಶ ಪ್ರಕಟಿಸಿದೆ.
ಸರಕಾರಗಳಿಂದ ಕೋವಿಡ್ ನಿಯಂತ್ರಣಕ್ಕೆ ಇದು ಅತ್ಯಂತ ಮಹತ್ವದ ನಡೆ. ಈ ನಡೆಯ ಬೆನ್ನಿಗೇ ಶಿರಸಿ ವೈದ್ಯೆಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ದಾನಿಗಳು ರಕ್ತದಾನ ಮಾಡಿ ಪ್ಲೀಸ್ ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಏನಿದು ಅಡಚಣೆ?: ಕೋವಿಡ್ ನಿರೋಧಕ ಲಸಿಕೆ ಅಭಿಯಾನವು ಮೇ 1ರಿಂದ 18 ರಿಂದ 45 ವರ್ಷದವರಿಗಾಗಿ ಆರಂಭವಾಗುತ್ತದೆ.
ರಾಷ್ಟ್ರಿಯ ರಕ್ತ ಸಂಚರಣ ಪರಿಷತ್ (ಎಬಿಟಿಸಿ) ಪ್ರಕಾರ ಯಾವುದೇ ಲಸಿಕೆ ಪಡೆದ ನಾಲ್ಕು ವಾರಗಳ ತನಕ ರಕ್ತದಾನ ಮಾಡಲು ಅವಕಾಶ ಇಲ್ಲ. ಕೋವಿಡ್ ಲಸಿಕೆ ಎರಡು ಹಂತದಲ್ಲಿ ಪಡೆಯಬೇಕು. ಈ ಹಂತದಲ್ಲಿ ದೇಶದಲ್ಲಿ ರಕ್ತದ ಕೊರತೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕೊರೊನಾ ಭಯದದಲ್ಲಿ ಮೊದಲೇ ರಕ್ತದಾನಿಗಳ ಕೊರತೆ ಇದೆ. ಕಳೆದೊಂದು ವರ್ಷದಿಂದ ರಕ್ತದಾನ ಶಿಬಿರಗಳೂ ಹೆಚ್ಚು ನಡೆದಿಲ್ಲ.
ಪರಿಹಾರ ಏನು?: ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್‌ಲೈನ್ ಬ್ಲಿಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ| ಸುಮನ್ ದಿನೇಶ ಹೆಗಡೆ, ಲಸಿಕೆಗೂ ಮೊದಲು ರಕ್ತದಾನ ಮಾಡಿ ಎಂಬ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹಣಾ ಕೊರತೆ ನೀಗಿಸಲು ಇದೊಂದೇ ದಾರಿಯಾಗಿದೆ. ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ, ಮನವಿಗಳ ಮೂಲಕ 18ರಿಂದ 45 ವರ್ಷದೊಳಗಿನ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವಯಸ್ಸಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಾರೆ. ಒಮ್ಮೆ ರಕ್ತದಾನ ಮಾಡಿದರೆ ಒಬ್ಬ ಪುರುಷ ದಾನಿಗೆ 3, ಮಹಿಳಾ ದಾನಿಗೆ 4 ತಿಂಗಳ ಕಾಲ ಬಿಡುವು ಬೇಕಿದೆ ಎಂಬುದೂ ಉಲ್ಲೇಖನೀಯ.
ಡಾ| ಸುಮನ್ ಹೆಗಡೆ, ಪ್ರಥಮ ಹಂತದ ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಲಸಿಕೆ ಪಡೆಯಬಹುದು. ಅಥವಾ ಈಗ ಕೊಟ್ಟಿಲ್ಲ ಎಂದರೆ ಎರಡನೇ ಲಸಿಕೆ ಪಡೆಯುವ ಮುನ್ನವೂ ರಕ್ತದಾನ ಮಾಡಬಹುದು ಎಂದು ಸಲಹೆ ಮಾಡುತ್ತಾರೆ. ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿದರೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ. ಈ ಸಂದೇಶವನ್ನು ವಾಟ್ಸಪ್‌ಗ್ಳಲ್ಲಿ ಹಾಕಿದಾಗ ದಾನಿಗಳೂ ಉತ್ಸುಕರಾಗಿ ಸ್ಪಂದಿಸುತ್ತಿದ್ದು, ತಾವೂ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುವುದಾಗಿ ತಿಳಿಸಿದ್ದಾರೆ ಡಾ| ಸುಮನ್ ಹೆಗಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.