Budget; ಮನುಷ್ಯತ್ವ ಇಲ್ಲ,ಉತ್ತರಕನ್ನಡ ಜಿಲ್ಲೆಯ ಜನರಿಗೆ ಅವಮಾನ: ಅನಂತಮೂರ್ತಿ
ಜನ ರಸ್ತೆ ಮೇಲೆ ಸಾಯುವುದನ್ನು ನೋಡುತ್ತಾ ಸರ್ಕಾರ ಮಜಾ ತೆಗೆದುಕೊಳ್ಳುತ್ತಿದೆ
Team Udayavani, Feb 16, 2024, 7:41 PM IST
ಶಿರಸಿ: ರಾಜ್ಯ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದೆ. ಉತ್ತರ ಕನ್ನಡದ ಜನರಿಗೆ ನ್ಯಾಯ ಕೊಡಿಸಲಾಗದ, ಜನರ ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟ, ಅಸ್ಪತ್ರೆ ಕೊಡಿಸಲು ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವರು ತತ್ ಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅಸಮಧಾನ ಹೊರ ಹಾಕಿದ್ದಾರೆ.
ಸಚಿವರಿಗೆ ಜಿಲ್ಲೆಯಜನರ ಬಗ್ಗೆ ಕರುಣೆ ಇಲ್ಲ. ಸರಕಾರ ಬಂದು 9 ತಿಂಗಳಾದರೂ ಅಸ್ಪತ್ರೆ ಬಗ್ಗೆ ಒಂದೇ ಒಂದು ಸಭೆ ಇಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಆಸ್ಪತ್ರೆಗೆ ಹಣ ಬಿಡುಗಡೆ ಇಲ್ಲ. ತಮಗೆ ಲಾಭ ಆಗುವ ಯೋಜನೆಗೆ ಸಾವಿರಾರು ಕೋಟಿ ಕೊಡುವವರಿಗೆ, ಆಸ್ಪತ್ರೆಗೆ ರೂಪಾಯಿ ಕೂಡ ಇಲ್ಲ, ಅಲ್ಲಿಗೆ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಅಂತ ಮನವರಿಕೆಯಾಗಿದೆ. ಜನ ರಕ್ತದ ಮಡುವಿನಲ್ಲಿ ರಸ್ತೆ ಮೇಲೆ ಬಿದ್ದು ಒದ್ದಾಡುವಾಗ ಪಡುವ ನೋವು, ಅಸ್ಪತ್ರೆಗಾಗಿ ಮಂಗಳೂರಿಗೆ ಹೋಗುವಾಗ ಪಡುವ ಕಷ್ಟದ ಅರಿವೇಕೆ ಆಗುವುದಿಲ್ಲ. ಕಳೆದ 2 ಬಜೆಟ್ ನಲ್ಲಿ ಹಣ ಕೊಡದೇ ತಮಾಷೆ ಮಾಡುತ್ತಿದ್ದಂತೆ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಇಷ್ಟು ಹೋರಾಟ ಆದರೂ ಒಂದೇ ಒಂದು ಮಾತನಾಡದ ನೀವು ಶಾಸಕನಾಗಿ ಆಯ್ಕೆಯಾದರೆ ಸ್ವಂತ ಹಣದಿಂದ ಅಸ್ಪತ್ರೆ ಮಾಡುತ್ತೇನೆ ಎಂದು ಬದ್ಧತೆಯಿಂದ ಹೇಳಿದ್ದೀರಾ ಅಥವಾ ತಮಾಷೆ ಮಾಡಿದ್ದೀರಾ ತಿಳಿಸಿ. ಆಸ್ಪತ್ರೆ ಮಾಡುವುದಿಲ್ಲ ಅಂತ ಆದರೆ ಹೇಳಿಬಿಡಿ, ನಮಗೆ ಏನು ಮಾಡಬೇಕೆಂದು ಗೊತ್ತಿದೆ ಎಂದಿದ್ದಾರೆ.
ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮದಲ್ಲಿ ಓಡಾಡಿ ಜನಾಂದೋಲನ ನಿರ್ಮಾಣ ಮಾಡಿ, ನಿಮ್ಮ ರಾಜೀನಾಮೆ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟ ಮಾಡುತ್ತೇವೆ.ಹೋರಾಟದಿಂದ ಏನಾಗುವುದು ಅಂತ ತಾತ್ಸಾರ ಬೇಡ , ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದೇ ಹೋರಾಟದಿಂದ ಎಂದು ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.