ಯುಜಿಡಿ ಪೈಪ್ ಲೈನ್ ಗುಂಡಿಯಲ್ಲಿ ಹೂತು ಹೋದ ಟಿಪ್ಪರ್
Team Udayavani, Nov 25, 2021, 9:56 AM IST
ದಾಂಡೇಲಿ: ನಗರದಲ್ಲಿ ಯಜಿಡಿ ಕಾಮಗಾರಿ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಜನಜೀವನಕ್ಕೆ ದಿನಂಪ್ರತಿ ತೊಂದರೆಯಾಗಿರುವ ಗೋಳು ಅಷ್ಟಿಷ್ಟಲ್ಲ. ನಗರದ ಬಹುತೇಕ ರಸ್ತೆಗಳನ್ನು ಅಗೆದು ಪೈಪ್ಲೈನ್ ಅಳವಡಿಸಿ ಸಮರ್ಪಕವಾಗಿ ದುರಸ್ತಿ ಮಾಡದಿರುವುದರಿಂದ ವಾಹನ ಸಂಚಾರ ಅಷ್ಟು ಸುಲಭದ ಕೆಲಸವಲ್ಲ ಎನ್ನುವುದು ಸಾಬೀತಾಗತೊಡಗಿದೆ.
ಬುಧವಾರ ಬೆಳಿಗ್ಗೆ ನಗರದ ಟೌನಶೀಪಿನಲ್ಲಿರುವ ಭಟ್ ಆಸ್ಪತ್ರೆಯ ಹತ್ತಿರದ ರಸ್ತೆಯಲ್ಲೊಂದು ಜಲ್ಲಿಕಲ್ಲುಗಳನ್ನು ತುಂಬಿದ ಟಿಪ್ಪರ್ ಒಂದು ಯುಜಿಡಿ ಪೈಪ್ಲೈನಿಗೆ ಅಗೆದು ಮುಚ್ಚಿದ್ದ ಕಡೆ ಹೂತೋಗಿ ಸುಮಾರು ಹೊತ್ತು ಒದ್ದಾಡಿದ ಘಟನೆ ನಡೆದಿದೆ. ಬಹಳಷ್ಟು ಪ್ರಯಾಸ ಪಟ್ಟರೂ ಸಾಧ್ಯವಾಗದೇ ಇದ್ದಾಗ ಜೆಸಿಬಿಯ ಸಹಾಯದಿಂದ ಹೂತೋದ ಟಿಪ್ಪರನ್ನು ಮುಂದಕ್ಕೆ ತಳ್ಳಿದ ನಂತರ ಸಮಸ್ಯೆ ಬಗೆ ಹರಿದಿದೆ.
ಯುಜಿಡಿಯ ಕಾಮಗಾರಿಯಿಂದಾಗಿ ರಸ್ತೆ ಅವ್ಯವಸ್ಥೆಯಿಂದ ಹೂತೋದ ವಾಹನಗಳನ್ನು ಮೇಲಕ್ಕೆತ್ತಲೆಂದೆ ಒಂದು ಜೆಸಿಬಿಯನ್ನು ಕಾಯ್ದಿರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಅಗೆದು ಮುಚ್ಚಿದ ರಸ್ತೆಯನ್ನು ಯೋಗ್ಯ ರೀತಿಯಲ್ಲಿ ದುರಸ್ತಿ ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.