ಹಳಿಯಾಳದಲ್ಲಿ ಕುರುಡಾದ ಕ್ಯಾಮೆರಾ ಕಣ್ಣು!
Team Udayavani, Dec 9, 2019, 4:14 PM IST
ಹಳಿಯಾಳ: ಪಟ್ಟಣದಲ್ಲಿ ಹಲವಾರು ಪ್ರಕರಣ ಭೇದಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿದ್ದ ಸಿಸಿ ಕ್ಯಾಮೆರಾಗಳು ಕಳೆದ ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಕಣ್ಣು ಮುಚ್ಚಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈವರೆಗೆ ರಿಪೇರಿಯಾಗದೇ ನಿಷ್ಪ್ರಯೋಜಕವಾಗಿವೆ.
ಸಂಚಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನ, ಅಪರಾಧಿಗಳನ್ನು ಶೀಘ್ರ ಪತ್ತೆ ಹಾಗೂ ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸಲೆಂದು ಕಳೆದ ಒಂದೂವರೆ ವರ್ಷದ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಹಾಗೂ ವಿನಂತಿ ಹಿನ್ನೆಲೆಯಲ್ಲಿ ಹಳಿಯಾಳ ಪುರಸಭೆಯವರು ಅಳವಡಿಸಿದ್ದರು. ರಾಜ್ಯ ಹಣಕಾಸು ಆಯೋಗ ಮತ್ತು ಪುರಸಭೆ ನಿಧಿಯಿಂದ ಮೊದಲ ಬಾರಿಗೆ 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ 29 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಬಳಿಕ ಮತ್ತೇ 15 ಲಕ್ಷ ರೂ. ವಿನಿಯೋಗಿಸಿ ಅವುಗಳನ್ನು ವೈರಲೆಸ್ ಸೇವೆಗೆ ಪರಿವರ್ತಿಸಲಾಗಿತ್ತು. ಒಟ್ಟೂ 35 ಲಕ್ಷ ರೂ. ಈ ಕ್ಯಾಮೆರಾಗಳಿಗೆ ವಿನಿಯೋಗಿಸಲಾಗಿತ್ತು.
ಬೆಂಗಳೂರಿನ ಮೌರ್ಯ ಇನೊಧೀಟೆಕ್ ಪ್ರೈವೆಟ್ ಲಿಮಿಟೆಡ್‌ನವರು ಈ ಕ್ಯಾಮೆರಾ ಅಳವಡಿಕೆಯ ಗುತ್ತಿಗೆ ಪಡೆದಿದ್ದರು. ಪಟ್ಟಣದ ಶಿವಾಜಿ ಸರ್ಕಲ್, ಬಸವೇಶ್ವರ ಸರ್ಕಲ್, ವನಶ್ರೀ ವೃತ್ತ, ಬೆಳಗಾವಿ ರಸ್ತೆ, ಬಸ್ ನಿಲ್ದಾಣ ಎದುರುಗಡೆ, ಅರ್ಬನ್ ಬ್ಯಾಂಕ್ ಸರ್ಕಲ್, ಮಾರುಕಟ್ಟೆ ಪ್ರದೇಶ, ಫಿಶ್ ಮಾರ್ಕೆಟ್ ಸಮೀಪ, ದೇಶಪಾಂಡೆ ರುಡಸೆಟ್ ಎದುರು, ಮಾಗವಾಡ, ಕೆಸರೊಳ್ಳಿ ಚೆಕ್‌ಪೋಸ್ಟ್ ಹೀಗೆ ಹಲವು ಪ್ರಮುಖ ಸ್ಥಳಗಳಲ್ಲಿ 29 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ಅಳವಡಿಸಿದ ಕೆಲವು ತಿಂಗಳಿನಲ್ಲೇ ಹಲವು ಬಾರಿ ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿದ್ದ ಇವುಗಳು ಈಗ ಕಳೆದ ಮೂರು ತಿಂಗಳಿಂದ ಬ್ಯಾಕಪ್ ಕೂಡ ಇಲ್ಲದೇ ಕ್ಯಾಮೆರಾಗಳು ಧೂಳು ತಿನ್ನುತ್ತಿವೆ. ಅಲ್ಲದೇ ಕೆಲ ಕಡೆಗಳಲ್ಲಿ ಇವುಗಳ ವೈರ್‌ಗಳು ತುಂಡಾಗಿ ಜೋತಾಡುತ್ತಿವೆ.
ಪುರಸಭೆ ಅನುದಾನದಲ್ಲಿ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಬಳಿಕ ಅದನ್ನು ಹಳಿಯಾಳ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ನಿರ್ವಹಣೆ ಜವಾಬ್ದಾರಿ ಮಾತ್ರ ಪುರಸಭೆಗೆ ಇದ್ದು. ಕ್ಯಾಮೆರಾಗಳು ದುರಸ್ತಿಗೆ ಬಂದರೆ ಅಥವಾ ತಾಂತ್ರಿಕ ತೊಂದರೆಗಳಾದರೆ ಪುರಸಭೆಗೆ ಮಾಹಿತಿ ನೀಡಿದರೆ ಸಾಕು ಅವರು ಕ್ಯಾಮೆರಾ ಅವಳಡಿಕೆಯ ಗುತ್ತಿಗೆ ಪಡೆದವರನ್ನು ಸಂಪರ್ಕಿಸಿ ದುರಸ್ತಿ ಮಾಡಿಸುತ್ತಾರೆ. ಆದರೆ ಇಲ್ಲಿ ಕಳೆದ ನಾಲ್ಕೂ ತಿಂಗಳಿಂದ ಯಾವುದೇ ಕ್ರಮ ಜರುಗಿಸದೆ ಕ್ಯಾಮೆರಾಗಳು ಕಣ್ಮುಚ್ಚಿವೆ.
-ಯೋಗರಾಜ ಎಸ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.